ಅಯೋಧ್ಯೆ: ರಾಮಲಲಾ ಇನ್ನು ಮುಂದೆ ಟೆಂಟ್ನಲ್ಲಿ ಇರಬೇಕಾಗಿಲ್ಲ, ಆತ ಭವ್ಯ ಮಂದಿರದಲ್ಲಿ ವಿರಾಜಮಾನನಾಗಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಪವಿತ್ರ ಭೂಮಿ ಅಯೋಧ್ಯೆಯಲ್ಲಿ ಇಂದು ಪ್ರಾಣ ಪ್ರತಿಷ್ಠೆ ನೆರವೇರಿಸಿ ಮಾತನಾಡಿದ ಅವರು, “ಇಂದು, ನಮ್ಮ ರಾಮನು ತಲೆಮಾರುಗಳ ಕಾಯುವಿಕೆಯ ನಂತರ ಅಂತಿಮವಾಗಿ ಬಂದಿದ್ದಾನೆ. ಈ ಶುಭ ಸಂದರ್ಭದಲ್ಲಿ, ನಾನು ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹೇಳಲು ತುಂಬಾ ಇದೆ ಆದರೆ, ಆದರೆ ಮಾತು ಗಂಟಲಿನಲ್ಲಿ ಸಿಕ್ಕಿಕೊಳ್ಳುತ್ತಿದೆ. ರಾಮಲಲಾ ಇನ್ನು ಮುಂದೆ ಟೆಂಟ್ನಲ್ಲಿ ವಾಸಿಸುವುದಿಲ್ಲ. ಈ ಸಮರ್ಪಣೆಯ ಕ್ಷಣವು ಭಗವಾನ್ ರಾಮನ ಆಶೀರ್ವಾದ. ಜನವರಿ 22 ಕ್ಯಾಲೆಂಡರ್ನ ದಿನಾಂಕವಲ್ಲ, ಆದರೆ ಹೊಸ ಯುಗದ ಉದಯ” ಎಂದು ಹೇಳಿದರು.
ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲು ನಾವು ಜೀವಂತವಾಗಿರುವುದೇ ಒಂದು ಸೌಭಾಗ್ಯ . ವಿರಾರು ವರ್ಷಗಳ ನಂತರವೂ ಜನರು ಈ ದಿನಾಂಕ, ಕ್ಷಣವನ್ನು ನೆನಪಿಸಿಕೊಳ್ಳುತ್ತಾರೆ. ಇದನ್ನು ನಾವು ನೋಡುತ್ತಿರುವುದು ರಾಮನ ಪರಮ ಆಶೀರ್ವಾದ ಎಂದು ಅವರು ಹೇಳಿದರು.
ರಾಮನ ಬಳಿ ಕ್ಷಮೆಯನ್ನೂ ಯಾಚಿಸುತ್ತೇನೆ ಎಂದ ಅವರು, ಈ ಹಂತವನ್ನು ತಲುಪಲು ತುಂಬಾ ಸಮಯ ತೆಗೆದುಕೊಂಡಿದ್ದರಿಂದ ಏನಾದರೂ ಲೋಪ ಸಂಭವಿಸಿರಬೇಕು ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.