ಬೆಂಗಳೂರು: ಮೀಸಲಾತಿ ಸಂಬಂಧ ಸಿದ್ದರಾಮಯ್ಯನವರ ನಿಲುವಿನ ಬಗ್ಗೆ ಅನುಕಂಪ ತೋರಿಸಬೇಕೇ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು. ಈ ವಿಷಯದಲ್ಲಿ ರಾಜ್ಯದ ಜನರ ದಿಕ್ಕು ತಪ್ಪಿಸುವ ವ್ಯಾಖ್ಯಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಅಜ್ಞಾನವನ್ನು ಮತ್ತೊಮ್ಮೆ ಪ್ರಶ್ನೆ ಮಾಡಿಕೊಳ್ಳಬೇಕಿದೆ ಎಂದು ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ವರ್ಗೀಕರಣದ ಕುರಿತು ಭಾರತದ ಸಂವಿಧಾನದ ಅನುಚ್ಛೇದ 341ಕ್ಕೆ ತಿದ್ದುಪಡಿ ಮಾಡಲು ಭಾರತ ಸರಕಾರಕ್ಕೆ ಶಿಫಾರಸು ಮಾಡುವ ತೀರ್ಮಾನ ಮಾಡಿದ್ದಾರೆ. ಈ ರಾಜ್ಯದ ಮುಖ್ಯಮಂತ್ರಿಯಾಗಿ ಈ ವಿಷಯವನ್ನು ತರುವ ಅಧಿಕಾರ ಈ ಸಿಎಂಗೆ ಇಲ್ಲ ಎಂದು ತಿಳಿಸಿದರು.
ಒಳ ಮೀಸಲಾತಿ ಪದ 1975ರಲ್ಲಿ ಪಂಜಾಬ್ನಲ್ಲಿ ಚರ್ಚೆಗೆ ಬಂದು ಅಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಶೇ 50 ಮೀಸಲಾತಿ ಘೋಷಿಸಿತ್ತು. ಇದು ದೇಶದ ಮೊದಲ ಸರಕಾರವೆನಿಸಿಕೊಂಡಿದೆ. 48 ವರ್ಷಗಳ ನಂತರವೂ ಒಳ ಮೀಸಲಾತಿಯ ಗೊಂದಲ ದೇಶವ್ಯಾಪಿಯಾಗಿ ಮುಂದುವರೆದಿದೆ. ಒಳ ಮೀಸಲಾತಿ ಬಗ್ಗೆ ಅನೇಕ ವ್ಯಾಖ್ಯಾನಗಳನ್ನು ಮಾಡುತ್ತಾರೆ. ಇವತ್ತಿನ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರವು ಕ್ಯಾಬಿನೆಟ್ ತೀರ್ಮಾನ ಮಾಡಿದೆ ಎಂದು ವಿವರಿಸಿದರು.
ಒಳ ಮೀಸಲಾತಿ ಜಾರಿ ಮಾಡಲು ಪಂಜಾಬ್ ಸರಕಾರವು ಕೇಂದ್ರದ ಅನುಮತಿ ಪಡೆದಿರಲಿಲ್ಲ ಎಂದು ಸಿದ್ದರಾಮಯ್ಯನವರು ಗಮನಿಸಬೇಕು. ಆಂಧ್ರ, ತಮಿಳುನಾಡಿನ ತೀರ್ಮಾನದಿಂದ ಅನೇಕ ಅಸ್ಪøಶ್ಯ ಜನಾಂಗಗಳಿಗೆ ಮೀಸಲಾತಿ ಲಭಿಸಿತ್ತು. ಇವತ್ತಿಗೂ ಅದು ಜಾರಿಯಲ್ಲಿದೆ. ಯಾವ ಕೇಂದ್ರ ಸರಕಾರದ ಅನುಮತಿಯನ್ನೂ ಆಗ ಪಡೆದಿರಲಿಲ್ಲ ಎಂದು ವಿವರ ನೀಡಿದರು.
ಚುನಾವಣೆಗೆ ಮೊದಲು ನುಡಿದಂತೆ ನಡೆಯುವ ಸಿಎಂ ಆಗುವುದಾಗಿ ಹೇಳಿದ ಸಿದ್ದರಾಮಯ್ಯನವರು ಕ್ಯಾಬಿನೆಟ್ ಮೀಟಿಂಗ್ಗಳಲ್ಲಿ ಒಳ ಮೀಸಲಾತಿ ಕುರಿತು ಚರ್ಚೆಯೇ ಮಾಡಲಿಲ್ಲ. ಇವತ್ತು ಸಾಮಾನ್ಯ ನಾಗರಿಕರಂತೆ ಆರ್ಟಿಕಲ್ ತಿದ್ದುಪಡಿ ಕುರಿತು ಚರ್ಚಿಸುತ್ತೀರಲ್ಲವೇ? ನಿಮಗೆ ನಾಚಿಕೆ ಆಗಬೇಕಲ್ಲವೇ ಎಂದು ಪ್ರಶ್ನಿಸಿದರು.
1994ರಲ್ಲಿ ಹರ್ಯಾನ ಸರಕಾರ ಒಳ ಮೀಸಲಾತಿ ಅವಶ್ಯಕತೆ ಇದೆ ಎಂದು ತಿಳಿಸಿ, ಇಡೀ ಸರಕಾರ ತೀರ್ಮಾನಿಸಿ ಘೋಷಿಸಿತ್ತು. 1997ರಲ್ಲಿ ಆಂಧ್ರ ಪ್ರದೇಶÀ ಸರಕಾರ ಆದೇಶಿಸಿದ್ದರೆ, 2009ರಲ್ಲಿ ತಮಿಳುನಾಡು ಸರಕಾರವು ಒಳ ಮೀಸಲಾತಿ ಕುರಿತು ತಿಳಿಸಿ, ಆದೇಶ ಮಾಡಿತ್ತು. ಇವೆಲ್ಲ ವಿಚಾರಗಳು ಕೋರ್ಟ್ ಮೆಟ್ಟಿಲೇರಿವೆ. ಕರ್ನಾಟಕದಲ್ಲಿ ನ್ಯಾ. ಸದಾಶಿವ ಆಯೋಗ ಸೇರಿ ವಿವಿಧ ರಾಜ್ಯಗಳಲ್ಲಿ ಒಳ ಮೀಸಲಾತಿ ಕುರಿತು ಆಯೋಗ ರಚಿಸಲಾಗಿತ್ತು. ವಿವಿಧ ರಾಜ್ಯಗಳಲ್ಲಿ ಆಯೋಗಗಳು ಒಳ ಮೀಸಲಾತಿ ಅವಶ್ಯಕತೆ ಇದೆ ಎಂದು ತಿಳಿಸಿದ್ದರು ಎಂದು ಹೇಳಿದರು.
ಈ ದೇಶದಲ್ಲಿ ಒಳ ಮೀಸಲಾತಿ ಬೇಕೆಂದು ನ್ಯಾಯಮೂರ್ತಿಗಳು 2008ರಲ್ಲಿ ಶಿಫಾರಸು ಮಾಡಿದ್ದರು. ಯುಪಿಎ ಸರಕಾರ ಆಗ ಅಧಿಕಾರದಲ್ಲಿತ್ತು. ಪರಿಶಿಷ್ಟ ವಂಚಿತ ಸಮುದಾಯಕ್ಕೆ ಒಳ ಮೀಸಲಾತಿ ಕೊಡಬೇಕಿದೆ. ಆಗಿನ ಕಾಂಗ್ರೆಸ್ ಸರಕಾರವು ಜಸ್ಟಿಸ್ ಉಷಾ ಮೆಹ್ರಾ ವರದಿಯನ್ನು ಕಣ್ತೆರೆದು ನೋಡಲಿಲ್ಲ ಎಂದು ಟೀಕಿಸಿದರು. ನಂತರವೂ ನ್ಯಾಯಾಲಯಗಳಲ್ಲಿ ಈ ಕುರಿತು ಚರ್ಚೆಗಳಾಗಿವೆ ಎಂದು ವಿವರ ನೀಡಿದರು. 341ನೇ ಆರ್ಟಿಕಲ್ಗೆ ತಿದ್ದುಪಡಿ ಇಲ್ಲದೆ ಒಳಮೀಸಲಾತಿ ಕೊಡಲು ಸಾಧ್ಯವಿದೆ ಎಂಬ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ತೀರ್ಪನ್ನು ಕೂಡ ಉಲ್ಲೇಖಿಸಿದರು. ಆ ತೀರ್ಪು ಬಂದು ಮೂರು ವರ್ಷ ಆಗಿದೆ ಎಂದರು.
ಮೀಸಲಾತಿ ಬಗ್ಗೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಬಹಳಷ್ಟು ಚರ್ಚೆಗಳಾಗುತ್ತಿವೆ. 2 ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಮೀಸಲಾತಿಯಿಂದ ವಂಚಿತರಾದ ಶೋಷಿತ ವರ್ಗಕ್ಕೆ ನ್ಯಾಯ ಕೊಡುವ ನಿಟ್ಟಿನಲ್ಲಿ ಪರಿಹಾರ ಕೊಡಲು ಬದ್ಧ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.