ಡಾವೋಸ್: ಇರಾನ್ ತನ್ನ ಮೇಲೆ ದಾಳಿ ಮಾಡಿದ್ದನ್ನು ಅರಗಿಸಿಕೊಳ್ಳಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ. ಅಮೆರಿಕ ಮತ್ತು ಭಾರತದ ನಂತರ ಇರಾನ್ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಮೂರನೇ ರಾಷ್ಟ್ರವಾಗಿದೆ. ಪಾಕಿಸ್ತಾನವು ಇರಾನ್ ಕ್ರಮದಿಂದ ಕೆರಳಿದ್ದು, ಇರಾನ್ಗೆ ತನ್ನ ರಾಯಭಾರಿಯನ್ನು ಹಿಂಪಡೆದುಕೊಂಡಿದೆ ಮತ್ತು ಪರಿಣಾಮಗಳ ಬಗ್ಗೆ ಟೆಹ್ರಾನ್ಗೆ ಎಚ್ಚರಿಕೆ ನೀಡಿದೆ, ಆದರೆ ಪರಮಾಣು ಶಕ್ತಿಯಾಗಿದ್ದರೂ ಪಾಕಿಸ್ಥಾನವು ಇರಾನ್ ವಿರುದ್ಧ ಯಾವುದೇ ಪ್ರತಿದಾಳಿ ಮಾಡುವ ಸಾಧ್ಯತೆಯಿಲ್ಲ.
ಈ ಬಿಕ್ಕಟ್ಟಿನ ನಡುವೆ, ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳದ ಪಾಕಿಸ್ತಾನವನ್ನು ಇರಾನ್ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅವಮಾನಿಸಿದೆ.
ಸ್ವಿಟ್ಜರ್ಲೆಂಡ್ನ ಡಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ನೇಪಥ್ಯದಲ್ಲಿ ಮಾತನಾಡಿದ ಇರಾನ್ನ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದುಲ್ಲಾಹೈನ್ , ಪಾಕಿಸ್ತಾನದಲ್ಲಿ ನಡೆದ ವೈಮಾನಿಕ ದಾಳಿಯು ‘ಇರಾನ್ನ ಭಯೋತ್ಪಾದಕ ಗುಂಪನ್ನು’ ಗುರಿಯಾಗಿಸಿಕೊಂಡು ನಡೆಸಿದ ದಾಳಿಯಾಗಿದೆ ಎಂದು ಹೇಳಿದರು. ಈ ಗುಂಪಿನ ಮೇಲೆ ಕ್ರಮ ಕೈಗೊಳ್ಳುವಂತೆ ಇರಾನ್ ಸರ್ಕಾರ ಪಾಕಿಸ್ತಾನಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಅದು ಮನವಿಗೆ ಗಮನ ಕೊಡಲಿಲ್ಲ ಎಂದು ಅವರು ಹೇಳಿದರು. ಪಾಕಿಸ್ತಾನದ ಉಸ್ತುವಾರಿ ಪಿಎಂ ಅನ್ವರ್ ಉಲ್ ಹಕ್ ಕಾಕರ್ ಅವರು ಡಾವೋಸ್ನಲ್ಲಿ ಅಬ್ದುಲ್ಲಾಹಿಯಾನ್ ಅವರನ್ನು ಭೇಟಿಯಾದ ಸಮಯದಲ್ಲೇ ವೈಮಾನಿಕ ದಾಳಿ ನಡೆದಿದೆ.
“ಇರಾನ್ನ ಭಯೋತ್ಪಾದಕ ಗುಂಪು ಎಂದು ಕರೆಯಲ್ಪಡುವ ಜೈಶ್ ಅಲ್-ಅದ್ಲ್ ಗುಂಪು ನಮ್ಮ ಗುರಿಯಾಗಿದೆ .ಗುಂಪು ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕೆಲವು ಭಾಗಗಳಲ್ಲಿ ಆಶ್ರಯ ಪಡೆದಿದೆ. ಈ ಗುಂಪು ನಮ್ಮ ಭದ್ರತಾ ಪಡೆಗಳನ್ನು ಕೊಂದಿದೆ. ನಾವು ಪಾಕಿಸ್ತಾನದ ನೆಲದಲ್ಲಿ ಇರಾನ್ ಭಯೋತ್ಪಾದಕ ಗುಂಪುಗಳನ್ನು ಮಾತ್ರ ಗುರಿಯಾಗಿಸಿಕೊಂಡಿದ್ದೇವೆ” ಎಂದು ಅಬ್ದುಲ್ಲಾಹಿಯಾನ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.