ನವದೆಹಲಿ: ಭಾರತದ ಅಭಿವೃದ್ಧಿಗೆ ಸಾಗರೋತ್ತರ ಭಾರತೀಯ ಸಮುದಾಯದ ಕೊಡುಗೆ ಮತ್ತು ಸಾಧನೆಗಳನ್ನು ಗುರುತಿಸಲು ಜನವರಿ 9 ರಂದು ಪ್ರವಾಸಿ ಭಾರತೀಯ ದಿವಸ್ ಅನ್ನು ಆಚರಿಸಲಾಗುತ್ತದೆ. ಅನಿವಾಸಿ ಭಾರತೀಯ (NRI) ದಿನ ಎಂದೂ ಇದನ್ನು ಕರೆಯಲಾಗುತ್ತದೆ.
1915 ರಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ್ದರ ಸ್ಮರಣಾರ್ಥವಾಗಿಯೂ ಈ ದಿನವನ್ನು ಆಚರಿಸಲಾಗುತ್ತದೆ.
ಪ್ರವಾಸಿ ಭಾರತೀಯ ದಿವಸ್ ಅನ್ನು ಮೊದಲ ಬಾರಿಗೆ 2003 ರಲ್ಲಿ ಆಚರಿಸಲಾಯಿತು. ಅದರ ಸ್ವರೂಪವನ್ನು ನಂತರ 2015 ರಲ್ಲಿ ಪರಿಷ್ಕರಿಸಲಾಯಿತು ಮತ್ತು ಈ ದಿನದ ಪ್ರಯುಕ್ತ ಸರ್ಕಾರಿ ಮಟ್ಟದ ಕಾರ್ಯಕ್ರಮವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಆಚರಿಸಲು ನಿರ್ಧರಿಸಲಾಯಿತು. ಮಧ್ಯಂತರ ಅವಧಿಯಲ್ಲಿ ಸಾಗರೋತ್ತರ ತಜ್ಞರು, ನೀತಿ-ನಿರ್ಮಾಪಕರು ಮತ್ತು ಮಧ್ಯಸ್ಥಗಾರರ ಭಾಗವಹಿಸುವಿಕೆಯೊಂದಿಗೆ ವಿಷಯಾಧಾರಿತ ಸಮ್ಮೇಳನಗಳನ್ನು ನಡೆಸಲು ತೀರ್ಮಾನಿಸಲಾಯಿತು.
ಪ್ರವಾಸಿ ಭಾರತೀಯ ದಿವಸ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಮುಖ ಕಾರ್ಯಕ್ರಮವಾಗಿದೆ. ಭಾರತದ ವಿವಿಧ ಪ್ರದೇಶಗಳ ವೈವಿಧ್ಯತೆ ಮತ್ತು ಪ್ರಗತಿಯನ್ನು ಪ್ರದರ್ಶಿಸಲು ಕಾರ್ಯಕ್ರಮಗಳನ್ನು ವಿವಿಧ ನಗರಗಳಲ್ಲಿ ನಡೆಸಲಾಗುತ್ತದೆ.
Embassy of India in Oslo commemorated the 18th Pravasi Bharatiya Divas in Lier on January 6, 2024, celebrating the stories of the first-generation Pravasis in Drammen and Lier. Over 150 people attended, engaging in interactive panel discussions and enjoying bhangra dance. pic.twitter.com/dwibYhUNqM
— India in Norway (@IndiainNorway) January 7, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.