ಕೋಲ್ಕತ್ತಾ: ಪೌರತ್ವ (ತಿದ್ದುಪಡಿ) ಕಾಯ್ದೆಯ ಅನುಷ್ಠಾನವನ್ನು ಯಾರೊಬ್ಬರೂ ತಡೆಯಲು ಸಾಧ್ಯವಿಲ್ಲ, ಅದು ಈ ಮಣ್ಣಿನ ಕಾನೂನು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಪುನರುಚ್ಛರಿಸಿದ್ದಾರೆ. ಅಲ್ಲದೇ ಈ ವಿಷಯದಲ್ಲಿ ಜನರ ದಾರಿ ತಪ್ಪಿಸುತ್ತಿರುವ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದ್ದಾರೆ.
ಕೋಲ್ಕತ್ತಾದ ನ್ಯಾಷನಲ್ ಲೈಬ್ರೆರಿಯಲ್ಲಿ ಬಿಜೆಪಿ ಸೋಶಿಯಲ್ ಮೀಡಿಯಾ ಮತ್ತು ಐಟಿ ವಿಂಗ್ ಜೊತೆ ಮುಚ್ಚಿದ ಬಾಗಿಲಿನ ಸಭೆ ನಡೆಸಿದ ಅವರು, ಸಿಎಎ ಅನುಷ್ಠಾನಕ್ಕೆ ಪಕ್ಷ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ ಪಶ್ಚಿಮಬಂಗಾಳ ರಾಜ್ಯದಲ್ಲಿ ಬಿಜೆಪಿ 42 ಲೋಕಸಭಾ ಸ್ಥಾನಗಳ ಪೈಕಿ 35 ಲೋಕಸಭಾ ಸ್ಥಾನಗಳನ್ನು ಖಂಡಿತಾಗಿಯೂ ಗೆಲುತ್ತದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವು 18 ಸ್ಥಾನಗಳನ್ನು ಗೆದ್ದಿತ್ತು.
ಅಮಿತ್ ಶಾ ಅವರು ನಡೆಸಿದ ಮುಚ್ಚಿದ ಬಾಗಿಲಿನ ಸಭೆಯ ವಿವರಗಳನ್ನು ಬಿಜೆಪಿ ಬಹಿರಂಗಪಡಿಸಿದ್ದು, ಕೆಲವು ವಿಡಿಯೋ ತುಣುಕುಗಳನ್ನೂ ಹಂಚಿಕೊಂಡಿದೆ.
“ಮುಂದಿನ ವಿಧಾನಸಭಾ ಚುನಾವಣೆಯ ನಂತರ ನಾವು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರವನ್ನು ರಚಿಸಲು ಕೆಲಸ ಮಾಡಬೇಕಾಗಿದೆ. ಬಿಜೆಪಿ ಸರ್ಕಾರವು ಒಳನುಸುಳುವಿಕೆ, ಗೋವು ಕಳ್ಳಸಾಗಣೆಯನ್ನು ಕೊನೆಗೊಳಿಸಲಿದೆ ಮತ್ತು ಸಿಎಎ ಮೂಲಕ ಧಾರ್ಮಿಕವಾಗಿ ಕಿರುಕುಳಕ್ಕೊಳಗಾದ ಜನರಿಗೆ ಪೌರತ್ವವನ್ನು ನೀಡಲಿದೆ” ಎಂದು ಶಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.