ನವದೆಹಲಿ: ಸಂಸತ್ತಿನಲ್ಲಿ ಇಂದು ಅತಿದೊಡ್ಡ ಭದ್ರತಾ ಲೋಪದ ಘಟನೆ ನಡೆದಿದೆ. ಬುಧವಾರ ಮಧ್ಯಾಹ್ನ 1.02 ಗಂಟೆಗೆ ಶೂನ್ಯ ವೇಳೆಯಲ್ಲಿ ಇಬ್ಬರು ವ್ಯಕ್ತಿಗಳು ಲೋಕಸಭೆಗೆ ನುಗ್ಗಿ ಹಳದಿ ಹೊಗೆಯನ್ನು ಹೊರಸೂಸಿದ್ದಾರೆ. ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಲೋಕಸಭೆಯ ಸಭಾಂಗಣಕ್ಕೆ ಓಡಿಹೋಗಿ ಹೊಗೆ ಸೂಸಿದ್ದಾರೆ ಎಂದು ಹೇಳಲಾಗಿದೆ.
ಲೋಕಸಭಾ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಒಬ್ಬ ವ್ಯಕ್ತಿ ಕಡು ನೀಲಿ ಬಣ್ಣದ ಶರ್ಟ್ ಧರಿಸಿ ಡೆಸ್ಕ್ಗಳಾದ್ಯಂತ ಜಿಗಿಯುತ್ತಿರುವುದನ್ನು ಕಾಣಬಹುದು. ಎರಡನೇ ವ್ಯಕ್ತಿ ಸಂದರ್ಶಕರ ಗ್ಯಾಲರಿಯಲ್ಲಿ ಹೊಗೆಯನ್ನು ಸಿಂಪಡಿಸುತ್ತಿರುವುದನ್ನು ಕಾಣಬಹುದು. ಲೋಕಸಭೆಯ ಸಂಸದರು ಮತ್ತು ಭದ್ರತಾ ಸಿಬ್ಬಂದಿ ಇಬ್ಬರ ಮೇಲೂ ಹೊಗೆ ಸಿಂಪಡಿಸಲಾಗಿದೆ. ಈ ವೇಳೆ ಅವರನ್ನು ಹಿಡಿಯಿರಿ, ಅವರನ್ನು ಹಿಡಿಯಿರಿ ಎಂದು ಸಂಸದರು ಕೂಗುತ್ತಿರುವುದನ್ನು ಕೇಳಬಹುದು.
ಚೇಂಬರ್ಗೆ ನುಗ್ಗಿದ ಇಬ್ಬರು ವ್ಯಕ್ತಿಗಳು ಸಂಸತ್ತಿನ ಒಳಗೆ ಬರುವ ಮೊದಲು ಐದು ಹಂತದ ಭದ್ರತೆಯನ್ನು ತೆರವುಗೊಳಿಸಿದ್ದಾರೆ ಮತ್ತು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ನೀಡಿದ ಪಾಸ್ಗಳ ಮೂಲಕ ಪ್ರವೇಶ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
“ಸಂದರ್ಶಕರ ಗ್ಯಾಲರಿಯಿಂದ ಯಾರೋ ಕೆಳಗೆ ಬಿದ್ದಿದ್ದಾರೆ ಎಂದು ಆರಂಭದಲ್ಲಿ ಭಾವಿಸಿದ್ದೆ. ಆದರೆ ಎರಡನೇ ವ್ಯಕ್ತಿ ಜಿಗಿದ ನಂತರವೇ ಅದು ಭದ್ರತಾ ಲೋಪ ಎಂದು ನಾನು ಅರಿತುಕೊಂಡೆ. ಅವರು ಸಿಂಡಿಸಿದ ಹೊಗೆ ವಿಷಕಾರಿಯಾಗಿರಬಹುದು” ಎಂದು ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಹೇಳಿದ್ದಾರೆ.
The visitor, who jumped into LS chamber from gallery, was seen leaping over benches
— Press Trust of India (@PTI_News) December 13, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.