
ಮಹಬೂಬಾಬಾದ್: ಮುಂಬರುವ ತೆಲಂಗಾಣ ಚುನಾವಣೆಗೆ ಇಂದು ಭರದ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ಮತ್ತು ಭಾರತೀಯ ರಾಷ್ಟ್ರ ಸಮಿತಿ (ಬಿಆರ್ಎಸ್) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಅಧೋಗತಿಗೆ ಎರಡೂ ಪಕ್ಷಗಳು ಸಮಾನ ಹೊಣೆಗಾರಿಕೆಯನ್ನು ಹೊಂದಿವೆ ಎಂದು ಪ್ರತಿಪಾದಿಸಿದ್ದಾರೆ.
ಮಹಬೂಬಾಬಾದ್ನಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ, “ತೆಲಂಗಾಣದ ಅವನತಿಗೆ ಕಾಂಗ್ರೆಸ್ ಮತ್ತು ಕೆಸಿಆರ್ ಇಬ್ಬರೂ ಸಮಾನ ಹೊಣೆಗಾರರು. ಆದ್ದರಿಂದ, ತೆಲಂಗಾಣದ ಜನರು ಒಂದು ಸಮಸ್ಯೆಯನ್ನು ಇನ್ನೊಂದಕ್ಕೆ ಬದಲಾಯಿಸುವುದಿಲ್ಲ. ಒಂದು ರೋಗ ಇನ್ನೊಂದು ರೋಗವನ್ನು ಗುಣಪಡಿಸಲಾರದು. ಈ ಭಾವನೆಯು ವ್ಯಾಪಕವಾಗಿರುವುದನ್ನು ನಾನು ಗಮನಿಸಿದ್ದೇನೆ. ತೆಲಂಗಾಣದ ವಿಶ್ವಾಸ ಬಿಜೆಪಿಯಲ್ಲಿದೆ” ಎಂದಿದ್ದಾರೆ.
ತೆಲಂಗಾಣದಲ್ಲಿ ಬಿಜೆಪಿ ಗೆಲುವು ಸಾಧಿಸುವ ಬಗ್ಗೆ ಬಲವಾದ ಆಶಾವಾದ ವ್ಯಕ್ತಪಡಿಸಿದ ಪ್ರಧಾನಿ, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗ (ಬಿಸಿ)ದ ಸಮುದಾಯದಿಂದ ಬಂದವರನ್ನು ಮುಖ್ಯಮಂತ್ರಿ ಮಾಡಲಾಗುವುದು ಎಂದು ಹೇಳಿದರು. ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ರಾಜ್ಯಕ್ಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದ ಅವರು, ತೆಲಂಗಾಣಕ್ಕೆ ಸಹಾಯ ಮಾಡುವ ಮತ್ತು ಪುನಶ್ಚೇತನ ನೀಡುವ ಸಾಮರ್ಥ್ಯ ಬಿಜೆಪಿಗೆ ಮಾತ್ರ ಇದೆ ಎಂದು ಪ್ರತಿಪಾದಿಸಿದರು.
“ಬಿಆರ್ಎಸ್ನ ನಾಲ್ಕು ಚಕ್ರಗಳು ಮತ್ತು ಕಾರಿನ ಸ್ಟೀರಿಂಗ್ ಕಾಂಗ್ರೆಸ್ನ ‘ಕೈ’ಗಿಂತ ಭಿನ್ನವಾಗಿಲ್ಲ. ಈ ಎರಡೂ ಪಕ್ಷಗಳು ಧರ್ಮದ ಆಧಾರದ ಮೇಲೆ ತುಷ್ಟೀಕರಣದಲ್ಲಿ ತೊಡಗಿವೆ. ಇವೆರಡೂ ಭ್ರಷ್ಟಾಚಾರವನ್ನು ಹೆಚ್ಚಿಸಿವೆ. ಇವೆರಡೂ ರಾಜವಂಶದ ರಾಜಕೀಯವನ್ನು ಉತ್ತೇಜಿಸಿವೆ” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


