ಬೆಳ್ತಂಗಡಿ : ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2014-15ನೇ ಸಾಲಿನಲಿ ಒಟ್ಟು 81 ಕೋಟಿ 13 ಲಕ್ಷರೂ ವ್ಯವಹಾರ ನಡೆಸಿದ್ದು ರೂ.26,98,208.78 ನಿವ್ವಳ ಲಾಭ ಗಳಿಸಿದ ಇತಿಹಾಸದಾಖಲಾಗಿದೆ ಎಂದು ಸಂಘದ ಅಧ್ಯಕ್ಷ ವಸಂತ ಮಜಲು ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಈ ವಿಚಾರ ತಿಳಿಸಿದರು. ಪ್ರಸಕ್ತ ಸಾಲಿನ ಅಂತ್ಯಕ್ಕೆ 1,471 ಎ ತರಗತಿ ಸದಸ್ಯರಿದ್ದು 1,01,40,295 ಪಾಲು ಬಂಡವಾಳ ಪಡೆಯಲಾಗಿದೆ. ಸದಸ್ಯರಿಂದ ಠೇವಣಿದಾರರಿಂದ ಒಟ್ಟು ರೂ. 11,35,52,159 ವಿವಿಧ ಠೇವಣಿ ಸಂಗ್ರಹಿಸಿದ್ದು ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ರೂ. 6,21,61,600 ಪಾವತಿಸಲು ಬಾಕಿಯಿದೆ. ವರ್ಷಾಂತ್ಯಕ್ಕೆ ಸದಸ್ಯರಿಂದ ಒಟ್ಟು ರೂ. 17,09,06,157 ಸಾಲ ಬರಲು ಬಾಕಿಯಿದ್ದು ಇದರಲ್ಲಿ 43,67,347 ರೂ.ವಾಯಿದೆ ದಾಟಿದ ಸಾಲವಿದ್ದು ಸುಸ್ತಿ ಬಾಕಿದಾರ ಸದಸ್ಯರುತಮ್ಮ ಬಾಕಿ ಸಾಲವನ್ನು ಮರುಪಾವತಿಸುವಂತೆ ತಿಳಿಸಿದರು.
ವರದಿ ಸಾಲಿನಲ್ಲಿ 53,87,153ರೂ. ಮೌಲ್ಯದ ಸರಕು ಖರೀದಿಸಿದ್ದು ಅದರ ಮಾರಾಟದಿಂದ ರೂ. 4,62,631.72ರೂ. ಲಾಭ ಗಳಿಸಿದೆ. ಸಂಘದ ಲೆಕ್ಕ ಪರಿಶೋಧನೆಯಲ್ಲಿ ಎ ತರಗತಿಯಲ್ಲಿ ವರ್ಗೀಕರಿಸಲಾಗಿದೆ. ಸಂಘದ ಉಪ ನಿಯಮದಂತೆ ಎಲ್ಲಾ ನಿಧಿಗಳನ್ನು ವಿಂಗಡಿಸಿ ಸದಸ್ಯರಿಗೆ ಶೇ.11 ಲಾಭಾಂಶ ನೀಡುವುದಾಗಿ ಘೋಷಿಸಿದರು.
ಸಂಘದ ಸದಸ್ಯರಾದ ಗಣಪತಿ ಭಟ್ ಬಳ್ಳಿ, ಶಾಂತಿರಾಜಜೈನ್ ಮುಗುಳಿ, ಅಣ್ಣುಗೌಡಕೊರ್ಚಂಡ, ವಿಶ್ವನಾಥ ಶೆಟ್ಟಿಗಾರ್, ಪಿ.ಚಿನ್ನಯ ಮೂಲ್ಯ, ಎ. ಪೂವಪ್ಪ ಭಂಡಾರಿ, ಕಳಿಯ ಗ್ರಾ.ಪಂ.ಅಧ್ಯಕ್ಷ ಶರತ್ಕುಮಾರ್ ಅನಿಸಿಕೆ ವ್ಯಕ್ತಪಡಿಸಿದರು. ಸಂಘದ ನಿರ್ದೇಶಕ ಎಂ. ಹರಿದಾಸ ಪಡಂತ್ತಾಯ, ರಾಜ್ ಪ್ರಕಾಶ್ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಅಗಲಿದ ಮಾಜಿ ನಿರ್ದೇಶಕ ಕೆ.ಶ್ರೀನಿವಾಸ ಕುಂಟಿನಿ ಮತ್ತು ಸಂಘದ ಪೋಷಕ ಸದಸ್ಯ ರಾಮಚಂದ್ರ ಭಟ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಸಂಘದ ಕಾರ್ಯವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಅತ್ಯಧಿಕ ಅಂಕ ಪಡೆದು ಪಿಯುಸಿ ಹಾಗೂ ಎಸ್ಎಸ್ಎಲ್ಸಿ ಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಧನ ಸಹಾಯ ನೀಡಿ ಗೌರವಿಸಲಾಯಿತು. ಸಾಂಕೇತಿಕವಾಗಿ ಸದಸ್ಯರಿಗೆ ಲಾಭಾಂಶ ವಿತರಿಸಲಾಯಿತು. ಸಂಘದ ಸದಸ್ಯರು, ನಿರ್ದೇಶಕರು ಉಪಸ್ಥಿತರಿದ್ದರು.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಹರಿಪ್ರಸಾದ್ ವರದಿ ಮಂಡಿಸಿ, ಪ್ರಸಕ್ತ ಸಾಲಿನ ಲೆಕ್ಕ ಪರಿಶೋಧನೆಯನ್ನು ಸಿ.ಎ.ಪ್ರಸನ್ನ ಶೆಣೈ ಮಂಡಿಸಿದರು.
ಸಂಘದ ಲೆಕ್ಕಿಗ ಸತ್ಯಶಂಕರ ಕೆ.ಜಿ.ವರದಿ ಮತ್ತು ಅನುಪಾಲನಾ ವರದಿ ಮಂಡಿಸಿದರು. ಸಂಘದ ನಿರ್ದೇಶಲಕ ಶೇಖರ ನ್ಯಾಕ ಸ್ವಾಗತಿಸಿ, ಸಂಘದ ಸಿಬ್ಬಂದಿ ಸಂತೋಷ್ ಕುಮಾರ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.