
ಉತ್ತರಾಖಂಡ: ಉತ್ತರಕಾಶಿಯ ಸುರಂಗ ದುರಂತದ ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿರುವ ಅಂತರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರು ಸುರಂಗದ ಮುಖ್ಯ ದ್ವಾರದಲ್ಲಿ ನಿರ್ಮಿಸಲಾದ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರುವ ಫೋಟೋ ಎಲ್ಲರ ಗಮನ ಸೆಳೆದಿದೆ. ಎಂಟು ದಿನಗಳ ಹಿಂದೆ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಭಾಗ ಕುಸಿದು 41 ಕಾರ್ಮಿಕರು ಸಿಲುಕಿಕೊಂಡಿದ್ದಾರೆ.
ಅರ್ನಾಲ್ಡ್ ಡಿಕ್ಸ್ ಜಿನೀವಾ ಮೂಲದ ಇಂಟರ್ನ್ಯಾಷನಲ್ ಟನೆಲಿಂಗ್ ಆಂಡ್ ಅಂಡರ್ ಗ್ರೌಂಡ್ ಸ್ಪೇಸ್ ಅಸೋಸಿಯೇಷನ್ ಮುಖ್ಯಸ್ಥರಾಗಿದ್ದಾರೆ. ಉತ್ತರಕಾಶಿಯಲ್ಲಿ ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನಗಳಲ್ಲಿ ಸಹಾಯಕ್ಕಾಗಿ ಅವರನ್ನು ಸಂಪರ್ಕಿಸಲಾಯಿತು. ರಕ್ಷಣಾ ಕಾರ್ಯಗಳನ್ನು ಪರಿಶೀಲಿಸಲು ಅವರು ಕಳೆದ ಸೋಮವಾರ ವಿಪತ್ತು ಸ್ಥಳಕ್ಕೆ ತಲುಪಿದ್ದಾರೆ.
ನಿರ್ಮಾಣ ಹಂತದಲ್ಲಿದ್ದ ಸುರಂಗವು ಮಹತ್ವಾಕಾಂಕ್ಷೆಯ ಚಾರ್ ಧಾಮ್ ಸರ್ವಋತು ರಸ್ತೆ ಯೋಜನೆಯ ಭಾಗವಾಗಿದೆ. ನಿರ್ಮಾಣ ಕಂಪನಿಯು ಪ್ರವೇಶದ್ವಾರದ ಬಳಿ ನಿರ್ಮಿಸಲಾದ ದೇವಾಲಯವನ್ನು ಕೆಡವಿದ ಕೆಲವೇ ದಿನಗಳಲ್ಲಿ, ನವೆಂಬರ್ 12 ರ ಭಾನುವಾರದಂದು ಸುರಂಗದ ಒಂದು ಭಾಗವು ಕುಸಿದಿದೆ. ನಲವತ್ತೊಂದು ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದಾರೆ, ರಕ್ಷಣಾ ಪ್ರಯತ್ನಗಳು ನ.12ರಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.
ಸುರಂಗದ ಕುಸಿತವು ದೇವಾಲಯ ಕೆಡವಿದ ಕಾರಣದಿಂದ ಸಂಭವಿಸಿದೆ ಎಂದು ಅನೇಕ ಸ್ಥಳೀಯ ಜನರು ನಂಬಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


