ನವದೆಹಲಿ: ರಾಕೇಶ್ ಕುಮಾರ್ ಮತ್ತು ಶೀತಲ್ ದೇವಿಯವರ ಅತ್ಯದ್ಭುತ ಪ್ರದರ್ಶನಗಳಿಂದಾಗಿ ಭಾರತವು ಏಷ್ಯನ್ ಪ್ಯಾರಾ ಆರ್ಚರಿ ಚಾಂಪಿಯನ್ಶಿಪ್ ಅನ್ನು ಅಗ್ರಸ್ಥಾನದೊಂದಿಗೆ ಕೊನೆಗೊಳಿಸಿತು. ಭಾರತಕ್ಕೆ ಒಟ್ಟಾರೆ ಒಂಬತ್ತು ಪದಕಗಳು ದೊರೆತಿದ್ದು, ಇದರಲ್ಲಿ ನಾಲ್ಕು ಚಿನ್ನ, ನಾಲ್ಕು ಬೆಳ್ಳಿ, ಒಂದು ಕಂಚು.
ಸಾಂಪ್ರದಾಯಿಕವಾಗಿ ಆರ್ಚರಿಯಲ್ಲಿ ಪವರ್ಹೌಸ್ ಎಂದು ಕರೆಯಲ್ಪಡುವ ದಕ್ಷಿಣ ಕೊರಿಯಾ 5 ಪದಕ ಮತ್ತು ಚೀನಾ 4 ಪದಕಗಳೊಂದಿಗೆ ಭಾರತದ ನಂತರದ ಸ್ಥಾನವನ್ನು ಪಡೆದುಕೊಂಡಿವೆ.
ಜಮ್ಮು ಮತ್ತು ಕಾಶ್ಮೀರದ 16 ವರ್ಷದ ಕೈಗಳು ಇಲ್ಲ ಬಿಲ್ಲಗಾರ್ತಿ ಶೀತಲ್ ದೇವಿ ವೈಯಕ್ತಿ ಮತ್ತು ಮಿಶ್ರ ತಂಡದಲ್ಲಿ ಎರಡು ಚಿನ್ನದ ಸಾಧನೆ ಮಾಡಿದ್ದಾರೆ. ಅಲ್ಲದೇ ಒಂದು ಬೆಳ್ಳಿ ಜಯಿಸಿದ್ದಾರೆ. 35 ವರ್ಷದ ರಾಕೇಶ್ ಕುಮಾರು ಅವರು ಮೂರು ಚಿನ್ನದ ಪದಕಗಳ ಸಾಧನೆಯನ್ನು ಮಾಡಿ ಭಾರತ ಅಗ್ರ ಸ್ಥಾನಕ್ಕೇರುವಂತೆ ಮಾಡಿದ್ದಾರೆ.
ಕಳೆದ ತಿಂಗಳು ಹ್ಯಾಂಗ್ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲೂ ಭಾರತೀಯ ಬಿಲ್ಲುಗಾರರು ಏಳು ಪದಕಗಳನ್ನು ಜಯಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರು. ಇಲ್ಲಿ ಭಾರತವು ಮೊದಲ ಬಾರಿಗೆ 100 ಪದಕಗಳ ಗಡಿಯನ್ನು ಮೀರಿತ್ತು.
Sheetal Devi makes India proud yet again; Wins 2 Gold and 1 Silver medals at the ongoing Asian Para Archery Championship in Thailand. Congratulations Champ 🫡🇮🇳pic.twitter.com/ZQY2hDLgTD
— Megh Updates 🚨™ (@MeghUpdates) November 23, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.