ಉಡುಪಿ: ಕರ್ನಾಟಕ ರಾಜ್ಯ, ಅದರಲ್ಲೂ ವಿಶೇಷವಾಗಿ ಉಡುಪಿ ಜಿಲ್ಲೆಯ ಯುವಜನರು ಮತ್ತು ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸುವ ಪ್ರಮುಖ ಉದ್ದೇಶದೊಂದಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಸಂಸದರ ನಿಧಿಯಡಿ 2017 ರಲ್ಲಿ ಉಡುಪಿಯಲ್ಲಿ ಐಐಜಿಜೆ ಸಂಸ್ಥೆಯನ್ನು ಜೇಮ್ಸ್ ಆಂಡ್ ಜ್ಯುವೆಲ್ಲರಿ ರಫ್ತು ಪ್ರಮೋಷನ್ ಕೌನ್ಸಿಲ್ (ಜಿಜೆಇಪಿಸಿ) ಮತ್ತು ಅಹಮದಾಬಾದ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ (ಎನ್ಐಡಿ) ಬೆಂಬಲದೊಂದಿಗೆ ಸ್ಥಾಪಿಸಿದ್ದಾರೆ.
ಇದೀಗ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜೆಮ್ಸ್ ಅಂಡ್ ಜ್ಯುವೆಲ್ಲರಿ (ಐಐಜಿಜೆ) ಸಂಸ್ಥೆಯಲ್ಲಿ ಕರ್ನಾಟಕದ ಉಡುಪಿ ಜಿಲ್ಲೆಯ ಬನ್ನಂಜೆ ಮತ್ತು ದೊಡ್ಡಣಗುಡ್ಡೆಯ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದ 30 ವಿದ್ಯಾರ್ಥಿನಿಯರು ವಿಶೇಷ ಕಾರ್ಯಕ್ರಮದಲ್ಲಿ ಆಭರಣ ತಯಾರಿಕೆ ಮತ್ತು ವಿನ್ಯಾಸ ತಾಂತ್ರಿಕತೆ ಸಂಬಂಧವಾಗಿ ಉಚಿತ ತರಬೇತಿ ಪಡೆಯುತ್ತಿದ್ದಾರೆ.
ಈ 30 ವಿದ್ಯಾರ್ಥಿನಿಯರು ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, ಬನ್ನಂಜೆ ಮತ್ತು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ (ITDP) ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, ದೊಡ್ಡಣಗುಡ್ಡೆಯಲ್ಲಿ ಓದುತ್ತಿದ್ದಾರೆ.
ಐಐಜಿಜೆ ಸಂಸ್ಥೆಯು ತನ್ನ ವಿಶೇಷ ಕಾರ್ಯಕ್ರಮದಡಿ ಆಭರಣ ತಯಾರಿಕೆ ಮತ್ತು ವಿನ್ಯಾಸ ತಾಂತ್ರಿಕತೆಯನ್ನು ಬೋಧಿಸುತ್ತದೆ. ಚಿನ್ನದ ಆಭರಣ ತಯಾರಿಕೆಯಲ್ಲಿ ಈ ಮಹಿಳೆಯರಿಗೆ ಚಿನ್ನದ ತಂತಿ (ವೈರ್) ಸಿದ್ಧಪಡಿಸುವ ಕೆಲಸ, ಬೆಸುಗೆ ಹಾಕುವುದು, ಅಂತಿಮ ವಿನ್ಯಾಸ ಕೊಡುವ ‘ಫೈಲಿಂಗ್ ವರ್ಕ್’, ಪಾಲಿಶ್ ಮಾಡುವುದು ಮತ್ತು ಆಭರಣವಾಗಿ ಸಿದ್ಧಪಡಿಸುವ ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಸಿಕೊಡಲಾಗುತ್ತದೆ. ರತ್ನ ಮತ್ತು ಆಭರಣ ಉದ್ಯಮದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಅನುವು ಮಾಡಿಕೊಡಲು ಈ ಕೌಶಲ್ಯವು ಅತ್ಯಗತ್ಯವಾಗಿದೆ.
ಐಐಜಿಜೆಯಲ್ಲಿ ಇದುವರೆಗೆ 360 ಮಂದಿ ತರಬೇತಿ ಪಡೆದಿದ್ದಾರೆ.
ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ @nsitharaman ಅವರು ಸ್ಥಾಪಿಸಿದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜೆಮ್ಸ್ ಅಂಡ್ ಜ್ಯುವೆಲ್ಲರಿ (ಐಐಜಿಜೆ) ಸಂಸ್ಥೆಯಲ್ಲಿ ಕರ್ನಾಟಕದ ಉಡುಪಿ ಜಿಲ್ಲೆಯ ಬನ್ನಂಜೆ ಮತ್ತು ದೊಡ್ಡಣಗುಡ್ಡೆಯ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದ 30 ವಿದ್ಯಾರ್ಥಿನಿಯರು ವಿಶೇಷ ಕಾರ್ಯಕ್ರಮದಲ್ಲಿ ಆಭರಣ ತಯಾರಿಕೆ ಮತ್ತು ವಿನ್ಯಾಸ… pic.twitter.com/TTutYLi5q9
— Nirmala Sitharaman Office (@nsitharamanoffc) November 9, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.