ನವದೆಹಲಿ: ಮಹಾದೇವ್ ಬೆಟ್ಟಿಂಗ್ ಆ್ಯಪ್ನ ಪ್ರವರ್ತಕರಿಂದ ರೂ. 508 ಕೋಟಿ ಪಡೆದಿರುವ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಛತ್ತೀಸ್ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿನ್ನೆ ರೂ. 5 ಕೋಟಿಯೊಂದಿಗೆ ಸಿಕ್ಕಿಬಿದ್ದ ಕೊರಿಯರ್ ಒಬ್ಬರು ಅಕ್ರಮ ಆ್ಯಪ್ನ ಪ್ರವರ್ತಕರು ಬಘೇಲ್ಗೆ 508 ಕೋಟಿ ರೂ ಪಾವತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯಕ್ಕೆ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಾಘೇಲ್ ವಿರುದ್ಧ ವಾಗ್ದಾಳಿ ನಡೆಸಿರುವ ಸ್ಮೃತಿ ಇರಾನಿ, ಈ ತಿಂಗಳಾಂತ್ಯದಲ್ಲಿ ಚುನಾವಣೆ ನಡೆಯಲಿರುವ ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಪ್ರಚಾರಕ್ಕಾಗಿ ಬೆಟ್ಟಿಂಗ್ ಹಣದ ನಿಧಿಯನ್ನು ಬಳಸುತ್ತಿದೆ ಎಂದು ಹೇಳಿದ್ದಾರೆ.
“ಕಾಂಗ್ರೆಸ್ ಹವಾಲಾ ಆಪರೇಟರ್ಗಳ ಸಹಾಯದಿಂದ ಛತ್ತೀಸ್ಗಢ ಚುನಾವಣೆಯಲ್ಲಿ ಹೋರಾಡುತ್ತಿದೆ. ಕಾಂಗ್ರೆಸ್ ಪ್ರಚಾರಕ್ಕೆ ಹಣ ವಿನಿಯೋಗಿಸಲು ಹವಾಲಾ ಕಾರ್ಯಾಚರಣೆ, ಅಕ್ರಮ ಬೆಟ್ಟಿಂಗ್ ಮೂಲಕ ಅಕ್ರಮ ಹಣವನ್ನು ಬಳಸುತ್ತಿರುವುದು ಆಘಾತಕಾರಿ” ಎಂದು ಎಂಎಸ್ ಇರಾನಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ನಮ್ಮ ಚುನಾವಣಾ ಇತಿಹಾಸದಲ್ಲಿ ಹಿಂದೆಂದೂ ಇಂತಹ ಸನ್ನಿವೇಶಗಳನ್ನು ಜನರು ನೋಡಿಲ್ಲ. ಸತ್ತಾ (ಅಧಿಕಾರ) ಮೆ ರಹ್ ಕರ್ ಸತ್ತಾ (ಬೆಟ್ಟಿಂಗ್) ಕಾ ಖೇಲ್ ಖೇಲಾ ಹೈ (ಅವರು ಅಧಿಕಾರದಲ್ಲಿದ್ದಾಗಲೇ ಬೆಟ್ಟಿಂಗ್ನ ಆಟವನ್ನು ಆಡಿದ್ದಾರೆ)” ಎಂದು ಅವರು ಟೀಕಿಸಿದ್ದಾರೆ.
ತನ್ನ ಬಳಿಯಿದ್ದ ಹಣವನ್ನು ಛತ್ತೀಸ್ಗಢದ ಚುನಾವಣಾ ವೆಚ್ಚಕ್ಕಾಗಿ ಬಾಘೇಲ್ ಅವರಿಗೆ ಸಂಬಂಧಿಸಿದ ಒಬ್ಬ ರಾಜಕಾರಣಿಗೆ ತಲುಪಿಸಲು ಉದ್ದೇಶಿಸಲಾಗಿದೆ ಎಂದು ಕೊರಿಯರ್ ವ್ಯಕ್ತಿ ಇಡಿಗೆ ತಿಳಿಸಿದ್ದಾನೆ. ಛತ್ತೀಸ್ಗಢದ ಮೊದಲ ಹಂತದ ಚುನಾವಣೆಗೆ ನಾಲ್ಕು ದಿನ ಬಾಕಿ ಇರುವಾಗ ಈ ಆರೋಪಗಳು ಬಂದಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.