ಮಸ್ಕತ್: ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಗುರುವಾರ ಮಸ್ಕತ್ನ ಐತಿಹಾಸಿಕ ಶಿವ ದೇವಾಲಯಕ್ಕೆ ಭೇಟಿ ನೀಡಿ ಭಾರತ ಮತ್ತು ಒಮನ್ ನಡುವಿನ ಶಾಶ್ವತ ಸ್ನೇಹಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
X ನಲ್ಲಿ ಪೋಸ್ಟ್ ಮಾಡಿರುವ ಸಚಿವರು, “ಮೋತೀಶ್ವರ್ ಮಹಾದೇವ್ ಎಂದು ಕರೆಯಲ್ಪಡುವ ಮಸ್ಕತ್ನ ಐತಿಹಾಸಿಕ ಶಿವ ದೇವಾಲಯಕ್ಕೆ ಭೇಟಿ ನೀಡಿದೆ, ಒಂದು ಶತಮಾನಕ್ಕೂ ಹೆಚ್ಚು ಇತಿಹಾಸವನ್ನು ಇದು ಹೊಂದಿದೆ, ಇದು ಭಾರತ ಮತ್ತು ಒಮನ್ ನಡುವಿನ ನಿರಂತರ ಸಾಂಸ್ಕೃತಿಕ ಸಂಬಂಧಗಳಿಗೆ ಸಾಕ್ಷಿಯಾಗಿದೆ. ಭಾರತ ಮತ್ತು ಒಮಾನ್ ಜನರ ನಡುವಿನ ಶಾಶ್ವತ ಸ್ನೇಹಕ್ಕಾಗಿ ಪ್ರಾರ್ಥಿಸಿದೆ” ಎಂದಿದ್ದಾರೆ.
ಅಕ್ಟೋಬರ್ 18 ರಂದು, ಸಚಿವರು ಎರಡು ದಿನಗಳ ಒಮನ್ ಪ್ರವಾಸವನ್ನು ಪ್ರಾರಂಭಿಸಿದ್ದಾರೆ. ಭೇಟಿಯ ಸಂದರ್ಭದಲ್ಲಿ, ಒಮಾನಿ ನಾಯಕತ್ವದೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ಪ್ರಕಟಿಸಿದೆ.
ಮುರಳೀಧರನ್ ಅವರು “ಮಾಂಡವಿಯಿಂದ ಮಸ್ಕತ್ಗೆ: ಭಾರತೀಯ ಸಮುದಾಯ ಮತ್ತು ಭಾರತ ಮತ್ತು ಓಮನ್ನ ಹಂಚಿಕೆಯ ಇತಿಹಾಸ” ಎಂಬ ಉಪನ್ಯಾಸ ಸರಣಿಯನ್ನು ಉದ್ಘಾಟಿಸಲಿದ್ದಾರೆ. ಒಮನ್ನಲ್ಲಿರುವ ಭಾರತೀಯ ಸಮುದಾಯದ ಇತಿಹಾಸ ಮತ್ತು ಭಾರತ ಮತ್ತು ಒಮನ್ ನಡುವಿನ ಸಂಬಂಧಗಳ ಮೇಲೆ ಬೆಳಕು ಚೆಲ್ಲುವ ಉಪನ್ಯಾಸ ಸರಣಿಯನ್ನು ಭಾರತೀಯ ರಾಯಭಾರ ಕಚೇರಿ ಆಯೋಜಿಸುತ್ತಿದೆ.
Visited Muscat's historic Shiva Temple, known as Motishwar Mahadev, with a history spanning over a century, standing as a testament to the enduring cultural ties between India and Oman.
Prayed for the lasting friendship between the people of India and Oman. pic.twitter.com/lxXd5l8LGS
— V. Muraleedharan (@MOS_MEA) October 19, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.