ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (KIA) ಸತತ ಮೂರನೇ ತಿಂಗಳಯ ‘ವಿಶ್ವದ ಅತ್ಯಂತ ಸಮಯಪಾಲನಾ ವಿಮಾನ ನಿಲ್ದಾಣ’ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಏವಿಯೇಷನ್ ಅನಾಲಿಟಿಕ್ಸ್ ಸಂಸ್ಥೆ ಸಿರಿಯಮ್ ನಡೆಸಿದ ಸಮೀಕ್ಷೆಯು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸಮಯಕ್ಕೆ ಸರಿಯಾದ ನಿರ್ಗಮನದ ದಾಖಲೆಯನ್ನು ಹೊಂದಿದೆ ಎಂಬ ಅಂಶವನ್ನು ಬಹಿರಂಗಪಡಿಸಿದೆ. ಜುಲೈನಲ್ಲಿ ಶೇಕಡಾ 87.51, ಆಗಸ್ಟ್ನಲ್ಲಿ ಶೇಕಡಾ 89.66 ಮತ್ತು ಸೆಪ್ಟೆಂಬರ್ನಲ್ಲಿ ಶೇಕಡಾ 88.51ರಷ್ಟು ಸಮಯ ಪಾಲನಾ ದಾಖಲೆಯೊಂದಿಗೆ ಬೆಂಗಳೂರು ವಿಮಾನ ನಿಲ್ದಾಣವು ಸಮಯಪಾಲನೆಯ ಅಂತರರಾಷ್ಟ್ರೀಯ ನಾಯಕನಾಗುವುದನ್ನು ಖಚಿತಪಡಿಸಿದೆ!
ವರದಿಯು ಸೆಪ್ಟೆಂಬರ್ನಲ್ಲಿ “ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಶೇಕಡಾ 88.51 ರಷ್ಟು ವಿಮಾನಗಳು ಸಮಯಕ್ಕೆ ಸರಿಯಾಗಿ ಟೇಕಾಫ್ ಆಗಿವೆ” ಎಂದು ಹೇಳಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 88 ಮಾರ್ಗಗಳನ್ನು ಒಳಗೊಂಡಿರುವ ನೆಟ್ವರ್ಕ್ ಮತ್ತು 35 ಏರ್ಲೈನ್ಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. 2022-2023 ರಲ್ಲಿ ಸುಮಾರು 31.91 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಸಲ್ಲಿಸಿದ ಭಾರತದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.