ನ್ಯೂಯಾರ್ಕ್: ವಿಶ್ವಸಂಸ್ಥೆಯಲ್ಲಿ ʼವಸುಧೈವ ಕುಟುಂಬಕಂʼ ಫಲಕ ಅನಾವರಣಗೊಂಡಿದೆ. ವಿಶ್ವಸಂಸ್ಥೆಯ ಭಾರತದ ಖಾಯಂ ರಾಯಭಾರಿ ರುಚಿರಾ ಕಾಂಬೋಜ್ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ (ICCR) ಅಧ್ಯಕ್ಷ ವಿನಯ್ ಸಹಸ್ರಬುದ್ಧೆ ಅವರು ಇದನ್ನು ಅನಾವರಣಗೊಳಿಸಿದ್ದಾರೆ.
ಈ ಫಲಕವನ್ನು ಭಾರತದ ಖಾಯಂ ಕಛೇರಿ ಆವರಣದಲ್ಲಿ ಅಳವಡಿಸಲಾಗಿದೆ. ಈ ಫಲಕವು ಭಾರತದ ಧ್ಯೇಯವನ್ನು ಜಗತ್ತಿಗೆ ಸಾರಲಿದೆ. ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಏಕತೆ, ಸಹಕಾರ ಮತ್ತು ಹಂಚಿಕೆಯ ಜವಾಬ್ದಾರಿಯನ್ನು ಸೂಚಿಸಲು ಫಲಕವು ಸಾಕ್ಷಿಯಾಗಲಿದೆ.
ಸಮಾರಂಭದಲ್ಲಿ ಯುಎನ್ನಲ್ಲಿ ಭಾರತೀಯ ಸಮುದಾಯದ ಸದಸ್ಯರು ಭಾಗವಹಿಸಿದ್ದರು. ಈ ಸಮಾರಂಭ ಒಗ್ಗಟ್ಟಿನ ಆಳವಾದ ಕ್ಷಣವನ್ನು ಗುರುತಿಸಿದೆ.
ಇದಕ್ಕೂ ಮುನ್ನ ಮಂಗಳವಾರ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ನಡೆದ ‘ವಸುಧೈವ ಕುಟುಂಬಕಂ’ ಕುರಿತ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಅವರು ಸವಾಲಿನ ಸಮಯದಲ್ಲಿ ಏಕತೆ ಮತ್ತು ಒಗ್ಗಟ್ಟಿನ ಮಹತ್ವದ ಕುರಿತು ಮಾತನಾಡಿದರು ಮತ್ತು “ಒಂದು ಜಗತ್ತು, ಒಂದು ಕುಟುಂಬʼ ಎಂಬ ಈ ಥೀಮ್ ಅನ್ನು ಎತ್ತಿ ತೋರಿಸಿದರು. ಇದು ಜಾಗತಿಕ ಬೆಂಬಲದ ಅಗತ್ಯವನ್ನು ಪ್ರತಿಧ್ವನಿಸುತ್ತದೆ ಎಂದರು.
The @iccr_hq President, Dr. @Vinay1011 unveiled "Vasudhaiva Kutumbakam" plaque today at @IndiaUNNewYork, joined by PR @ruchirakamboj, alongside members of 🇮🇳 community at @UN, emphasizing the philosophy of "One 🌏, One Family, One Future"
Press Release: https://t.co/ZM5LKyqfTZ pic.twitter.com/VSdvx3JqqV
— India at UN, NY (@IndiaUNNewYork) October 11, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.