ನವದೆಹಲಿ: ದೇಶ ಕಂಡ ಮಹಾನ್ ಕ್ರಾಂತಿಕಾರಿ ನಾಯಕ ದೇಶಭಕ್ತ ಶಹೀದ್ ಭಗತ್ ಸಿಂಗ್ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ವಸಾಹತುಶಾಹಿ ಆಡಳಿತದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ತಾಯ್ನಾಡಿಗಾಗಿ ಪ್ರಾಣವನ್ನೇ ಅರ್ಪಿಸಿರುವ ಮಹಾನ್ ವೀರನಿಗೆ ಶಿರಭಾಗಿ ನಮಸ್ಕರಿಸಲಾಗುತ್ತಿದೆ ಮತ್ತು ಅವರ ತ್ಯಾಗವನ್ನು ಕೃತಜ್ಞತಾ ಪೂರ್ವವಾಗಿ ಸ್ಮರಿಸಲಾಗುತ್ತಿದೆ.
ಪಂಜಾಬ್ ಪ್ರಾಂತ್ಯದಲ್ಲಿ (ಈಗ ಪಾಕಿಸ್ತಾನದಲ್ಲಿದೆ) 1907ರ ಸೆಪ್ಟೆಂಬರ್ 28ರಂದು ಜನಿಸಿದ ಭಗತ್ ಸಿಂಗ್ ಅವರು ಕೇವಲ 23ನೇ ವಯಸ್ಸಿನಲ್ಲೇ ಬ್ರಿಟಿಷರ ವಿರುದ್ಧ ಹೋರಾಡಿ ಮರಣದಂಡನೆ ಶಿಕ್ಷೆಗೆ ಒಳಗಾದರು.
ಶಹೀದ್ ಭಗತ್ ಸಿಂಗ್ ಎಂದೇ ಜನಜನಿತರಾಗಿರುವ ಸ್ವಾತಂತ್ರ್ಯ ಸೇನಾನಿ ಯುಗಯುಗಗಳ ಕಾಲ ಯುವ ಪೀಳಿಗೆಗೆ ಸ್ಪೂರ್ತಿಯನ್ನು ನೀಡುತ್ತಲೇ ಇರುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಮಹಾನ್ ವೀರನನ್ನು ಸ್ಮರಿಸಿದ್ದು, ” ಶಹೀದ್ ಭಗತ್ ಸಿಂಗ್ ಅವರ ಜನ್ಮದಿನದಂದು ಸ್ಮರಿಸುತ್ತಿದ್ದೇವೆ. ಭಾರತದ ಸ್ವಾತಂತ್ರ್ಯದ ಕಾರಣಕ್ಕಾಗಿ ಅವರ ತ್ಯಾಗ ಮತ್ತು ಅಚಲವಾದ ಸಮರ್ಪಣೆ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಿದೆ. ಧೈರ್ಯದ ಬೆಳಕಾಗಿರುವ ಅವರು ನ್ಯಾಯ ಮತ್ತು ಸ್ವಾತಂತ್ರ್ಯಕ್ಕಾಗಿ ಭಾರತದ ನಿರಂತರ ಹೋರಾಟದ ಸಂಕೇತವಾಗಿ ಶಾಶ್ವತವಾಗಿ ಉಳಿಯುತ್ತಾರೆ” ಎಂದು ಟ್ವಿಟ್ ಮಾಡಿದ್ದಾರೆ.
ಭಗತ್ ಜನ್ಮ ದಿನಾಚರಣೆಯನ್ನು ದೇಶದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ.
Remembering Shaheed Bhagat Singh on his birth anniversary. His sacrifice and unwavering dedication to the cause of India’s freedom continue to inspire generations. A beacon of courage, he will forever be a symbol of India's relentless fight for justice and liberty. pic.twitter.com/cCoCT8qE43
— Narendra Modi (@narendramodi) September 28, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.