ಬೆಂಗಳೂರು: ದಿವಂಗತ ಲೆಫ್ಟಿನೆಂಟ್ ಜನರಲ್ ಸರದೇಶಪಾಂಡೆ ಅವರ ಸಹ್ಯಾದ್ರಿ ವನ ಸಂರಕ್ಷಣೆ ಹಾಗೂ ಅಧ್ಯಯನ ಕೇಂದ್ರದ ವತಿಯಿಂದ ವಿಶ್ವ ನದಿಗಳ ದಿನಾಚರಣೆ ಆಚರಿಸಲಾಯಿತು.ಕರ್ನಾಟಕ,ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಜಲ ಕಾರ್ಯಕರ್ತರು ಮತ್ತು ತಜ್ಞರು ಮತ್ತು ಕನಕುಂಬಿ ಗ್ರಾಮ ಮತ್ತು ಸುತ್ತ ಮುತ್ತಲಿನ ಗ್ರಾಮಗಳಿಂದ ಸೇರಿದ ಜನರು ಮಲಪ್ರಭಾ ನದಿಯ ಮೂಲ ಸ್ಥಾನದಲ್ಲಿ ತಾಯಿ ಮಲಪ್ರಭೆಯ ಪೂಜೆಯನ್ನು ನೆರವೇರಿಸಿದರು.
ಮೌಳಿ ದೇವಸ್ಥಾನದಲ್ಲಿ ಸೇರಿದ ಜಲ ಪ್ರತಿನಿಧಿಗಳು ಉಗಮ ಸ್ಥಾನಕ್ಕೆ ಪಾದಯಾತ್ರೆ ನಡೆಸಿ ಉಗಮ ಸ್ಥಾನದ ಬಳಿ ವಿಶ್ವ ನದಿ ದಿನಾಚರಣೆ ಬಗ್ಗೆ ಕಾರ್ಯಾಗಾರ ನಡೆಸಿದರು.
ಇದೇ ಸಂdರ್ಭದಲ್ಲಿ ಮಲಪ್ರಭಾ ಸಂರಕ್ಷಣಾ ಅಭಿಯಾನವನ್ನು ಪ್ರಾರಂಭಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ರಾಜೇಂದ್ರ ಪೊದ್ದಾರ ಅವರು ವಿಶ್ವ ಜಲ ದಿನದ ಮಹತ್ವ ಮತ್ತು ನದಿಗಳ ಸಂರಕ್ಷಣೆ ಮತ್ತು ಜಲ ಸಂಕಷ್ಟದ ಕುರಿತು ಮಾತನಾಡಿದರು. ಈ ನಿಟ್ಟಿನಲ್ಲಿ ಸಂಪೂರ್ಣ ನದಿಯ ಸಂರಕ್ಷಣೆಗಾಗಿ ಉಗಮದಿಂದ ಸಂಗಮದವರೆಗೆ ಮಲಪ್ರಭಾ ಸಂರಕ್ಷಣಾ ಅಭಿಯಾನವನ್ನು ಇಂದಿನಿಂದಲೇ ಪ್ರಾರಂಭಿಸಲಾಗಿದೆ, ಅದಕ್ಕಾಗಿ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಪ್ರಮುಖ ನದಿಗಳಲ್ಲಿ ಒಂದಾದ ಮಲಪ್ರಭಾ ನದಿಯ ಸ್ಥಿತಿಗತಿಗಳನ್ನು ಮತ್ತು ಸಮಸ್ಯೆಗಳನ್ನು ವಿವರಿಸಿದರು.
ಮಲಪ್ರಭಾ ನದಿ ತೀರದ ಫಲಾನುಭವಿಗಳಾದ ಸುರೇಶ ಕುಲಕರ್ಣಿ, ವಾಲ್ಮಿ ಸಮಾಲೋಚಕರು ಮಾತನಾಡಿ ಮಲಪ್ರಭೇಯೊಂದಿಗಿನ ತಮ್ಮ ನಾಲ್ಕು ದಶಕಗಳ ಅನುಭವವನ್ನು ಹಂಚಿಕೊಂಡರು. ಮುಂಬರುವ ದಿನಗಳಲ್ಲಿ ಮಲಪ್ರಭಾ ನದಿಯ ಕುಡಿಯುವ ನೀರು ಮತ್ತು ನೀರಾವರಿ ಫಲಾನುಭವಿಗಳಾದ ಹುಬ್ಬಳ್ಳಿ-ಧಾರವಾಡ ನಾಗರೀಕರು ಮತ್ತು ವಿವಿಧ ಜಿಲ್ಲೆಗಳ ಜನತೆ ವಿಶೇಷವಾಗಿ ರೈತ ಸಮುದಾಯ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಕೇಳಿಕೊಂಡರು.
ಅರವಿಂದ ಸಿಗ್ಗಾಂವ, ನಿವೃತ ನೌಕಾ ಸೇನಾಧಿಕಾರಿಗಳು, ತಮ್ಮ ನೌಕಾ ಸೇವಾವಧಿಯಲ್ಲಿ ನೀರಿನ ಕುರಿತು ಪಡೆದ ಜ್ಞಾನವನ್ನು ಹಂಚಿಕೊಂಡರು. ರಾಜಕೀಯ ಬೌಂಡ್ರಿಸ್ ಜನರನ್ನು ವಿಭಾಗಿಸಿದರೆ ಜಲ, ಜಗತ್ತಿನ ಜನತೆಯನ್ನು ಒಂದುಗೂಡಿಸುವುದೆಂದು ಜಲದ ಮಹತ್ವವನ್ನು ತಿಳಿಸಿಕೊಟ್ಟರು. ಸಹ್ಯಾದ್ರಿಯ ಸಂರಕ್ಷಣೆಗಾಗಿ ಶ್ರಮಿಸಿದ ಲೆಫ್ಟಿನೆಂಟ್ ಜನರಲ್ ಸರದೇಶಪಾಂಡೆ ಅವರ ಸಾಧನೆಗಳನ್ನು ತಿಳಿಸಿದರು. ಅವರ ಆಶಯಗಳಂತೆ ಕಾರ್ಯಪ್ರವೃತ್ತರಾಗೋಣ ಎಂದು ಕರೆ ನೀಡಿದರು
ಸ್ಥಳೀಯ ಮುಖಂಡರಾದ ಸುನೀಲ, ದೀಲಿಪ ಗಾವಡೆ, ನಿವೃತ್ತ ಮರೀನ ಇಂಜಿನಿಯರ್ ನಿತೀನ ದೊಂಡ, ಸಹ್ಯಾದ್ರಿಯ ಸಂರಕ್ಷಣೆಗಾಗಿ ತಾವುಗಳು ಮಾಡುತ್ತಿರುವ ಪ್ರಯತ್ನಗಳನ್ನು ತಿಳಿಸಿದರು.
ಸ್ಥಳೀಯ ಮುಖಂಡರಾದ ಕಿರಣ ಗಾವಡೆ ಬೆಳಗಾವಿ ಮತ್ತು ಧಾರವಾಡ ಜಿಲ್ಲಾ ಕಾರ್ಯಕರ್ತರು ಮತ್ತು ತಜ್ಞರು ಮಲಪ್ರಭೆಯ ಉಗಮ ಸ್ಥಾನವಾದ ಕನುಕುಂಬಿಗೆ ಆಗಮಿಸಿರುವುದು ನಮ್ಮ ಸೌಭಾಗ್ಯ, ಈ ನಿಟ್ಟಿನಲ್ಲಿ ಕನಕುಂಬಿ ಮತ್ತು ಸುತ್ತಲಿನ ಗ್ರಾಮಸ್ಥರು ಸುತ್ತಮುತ್ತಲಿನ ಗ್ರಾಮಗಳಿಂದ ನದಿ ಸಂರಕ್ಷಣೆಗಾಗಿ ಎಲ್ಲ ರೀತಿಯ ಸಹಾಯ ಸಹಕಾರ ನೀಡುವೆವು ಎಂದಿ ತಿಳಿಸಿದರು.
ಗ್ರಾಮ ಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ದೀಪ್ತಿ, ಮಲಪ್ರಭಾ ನದಿಯ ಮೂಲ ಸಂರಕ್ಷಣೆಗಾಗಿ ಗ್ರಾಮ ಪಂಚಾಯತಿ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಪೋಲಿಸ್ ಆಯುಕ್ತರಾದ ಎಸ್.ಎನ್ ಸಿದ್ದರಾಮಪ್ಪ , ಐ.ಪಿ.ಎಸ್, ಮಾತನಾಡಿ ಜಾಗತಿಕ ಮತ್ತು ಸ್ಥಳೀಯ ಸಂಕಷ್ಟಗಳಿಗೆ ಕಾರಣಗಳನ್ನು ವಿವರಿಸಿದರು. ಈ ನಿಟ್ಟಿನಲ್ಲಿ ಅತಿಯಾದ ಅಂತರ್ಜಲ ಬಳಕೆ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ನದಿ ಆರೋಗ್ಯಕ್ಕೆ ಧಕ್ಕೆ ಆಗುತ್ತಿದ್ದು ನದಿ ಸಂರಕ್ಷಣೆ ಅತ್ಯಂತ ಮಹತ್ವದ ವಿಷಯವಾಗಿದೆ ಎಂದರು.
ನೀರನ ದುರ್ಬಳಕೆ ಯನ್ನು ತಡೆಗಟ್ಟಲು ಸೂಕ್ಷ್ಮ ನೀರಾವರಿ ತಂತ್ರಜ್ಞಾನಗಳನ್ನು ರೈತರು ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಯುವ ಕಾರ್ಯಕರ್ತರಾದ ಅಶ್ವಿನ ಮತ್ತು ರಾಹುಲ ಜಲ ಸಂರಕ್ಷಣೆ ಮಹತ್ಚವನ್ನು ಅರಿತುಕೊಂಡಿದ್ದು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವುದಾಗಿ ಭರವಸೆ ನೀಡಿದರು.
ಗೋವಾ ಪ್ರತಿನಿಧಿ ಶ್ರೀಮತಿ ಅಂಜಲಿ ಮತ್ತು ಧಾರವಾಡದ ಸುರೇಶ ಕುಲಕರ್ಣಿ ಅವರು ಮಲಪ್ರಭೆ ಸಂರಕ್ಷಣೆ ಕುರಿತು ಕವನ ಹಾಡಿದರು.
ಕಾರ್ಯಕ್ರಮದ ಸಂಯೋಜಕಿಯಾದ ಶ್ರೀಮತಿ ನಯಲಾ ಕೋಹ್ಲೂ ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶಗಳನ್ನು ತಿಳಿಸಿಕೊಟ್ಟರು. ಈ ಸಂಧರ್ಭದಲ್ಲಿ ಜಲ ತಜ್ಞರಾದ ಡಾ. ರಾಜೇಂದ್ರ ಸಂಗ್ ಅವರನ್ನು ಅಭಿಯಾನದಲ್ಲಿ ತೊಡಗಿಸಿಕೊಳ್ಳುವುದಾಗಿ, ಮುಂದಿನ ಮೂರು ತಿಂಗಳಲ್ಲಿ ನವೀಲು ತೀರ್ಥದಲ್ಲಿ ಅಭಿಯಾನದ ಭಾಗವಾಗಿ ಕಾರ್ಯಾಗಾರ ವನ್ನು ಏರ್ಪಡಿಸಲಾಗುವುದು ಮತ್ತು ಗ್ರಾಮ ಪಂಚಾಯತಿ ವತಿಯಿಂದ ಮಲಪ್ರಭಾ ಉಗಮ ಸ್ಥಾನದ ಸಂರಕ್ಷಣೆಗಾಗಿ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು
ಈ ಕಾರ್ಯಕ್ರಮದಲ್ಲಿ ಶ್ರೀ ದೇವರೆಡ್ಡಿ, ವಕೀಲರು,ಶ್ರೀ ವಿ.ಎಸ್ ಮುದ್ನುರ, ಶ್ರೀಮತಿ ಶಕುಂತಲಾ ಗಸ್ತಿ, ಶ್ರೀ ರಾಜಾರಾಮ ಗಾವಡೆ, ಶ್ರೀಮತಿ ಲಕ್ಷ್ಮಿ , ಪರ್ಯಾವರಣಿ ಕಾರ್ಯಕರ್ತರು, ಕನಕುಂಬಿ ಗ್ರಾಮಸ್ಥರು ಇದ್ದರು.
ಮಲಪ್ರಭಾ ಸಂರಕ್ಷಣಾ ಪ್ರತಿಜ್ಞೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.