ನವದೆಹಲಿ: ನೂತನ ಸಂಸತ್ ಭವನವನ್ನು ಮೋದಿ ಮಲ್ಟಿಪ್ಲೆಕ್ಸ್ ಅಥವಾ ಮೋದಿ ಮ್ಯಾರಿಯೆಟ್ ಎಂದು ಕರೆದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಹಳೇ ಸಂಸತ್ ಭವನವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಹೊಸ ಕಟ್ಟಡ ಕ್ಲಾಸ್ಟ್ರೋಫೋಬಿಕ್ ಮತ್ತು ಜಟಿಲವಾಗಿದೆ. ಭರ್ಜರಿ ಪ್ರಚಾರದೊಂದಿಗೆ ಆರಂಭಿಸಲಾದ ಹೊಸ ಸಂಸತ್ ಭವನವು ನಿಜವಾಗಿಯೂ ಪ್ರಧಾನಿಯವರ ಉದ್ದೇಶಗಳನ್ನು ಚೆನ್ನಾಗಿ ಅರಿತುಕೊಂಡಿದೆ. ಇದನ್ನು ಮೋದಿ ಮಲ್ಟಿಪ್ಲೆಕ್ಸ್ ಅಥವಾ ಮೋದಿ ಮ್ಯಾರಿಯೆಟ್ ಎಂದು ಕರೆಯಬೇಕು ಎಂದು ಜೈರಾಮ್ ಹೇಳಿದ್ದಾರೆ.
ಜೈರಾಮ್ ಟ್ವಿಟ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು, ಕಾಂಗ್ರೆಸ್ ಇಷ್ಟು ಕೆಳಮಟ್ಟದಲ್ಲಿ ಯೋಚಿಸುತ್ತದೆ ಎಂದು ಅಂದುಕೊಂಡಿರಲಿಲ್ಲ, ಇದು 140 ಕೋಟಿ ಭಾರತೀಯರ ಆಕಾಂಕ್ಷೆಗಳಿಗೆ ಮಾಡಿದ ಅವಮಾನವಲ್ಲದೆ ಬೇರೇನೂ ಇಲ್ಲ. ಕಾಂಗ್ರೆಸ್ ಸಂಸತ್ತಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಅವರು 1975 ರಲ್ಲಿ ಪ್ರಯತ್ನಿಸಿದರು ಮತ್ತು ಅದು ಶೋಚನೀಯವಾಗಿ ವಿಫಲವಾಯಿತು ಎಂದು ಹೇಳಿದ್ದಾರೆ.
Even by the lowest standards of the Congress Party, this is a pathetic mindset. This is nothing but an insult to the aspirations of 140 crore Indians.
In any case, this isn’t the first time Congress is anti-Parliament. They tried in 1975 and it failed miserably.😀 https://t.co/QTVQxs4CIN
— Jagat Prakash Nadda (@JPNadda) September 23, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.