ನವದೆಹಲಿ: ಬಿಜೆಪಿ ಮತ್ತು ಅದರ ಬೆಂಬಲಿಗರನ್ನು ರಾಕ್ಷಸರು ಎಂದು ಹೇಳಿ ಅವಹೇಳನಕಾರಿ ಪದಗಳನ್ನು ಬಳಸುವ ಮೂಲಕ ಕಾಂಗ್ರೆಸ್ ನಾಯಕ ಮತ್ತು ರಾಜ್ಯಸಭಾ ಸಂಸದ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ವಿವಾದವನ್ನು ಹುಟ್ಟುಹಾಕಿದ್ದಾರೆ.
ಹರಿಯಾಣದ ಕೈತಾಲ್ನಲ್ಲಿ ಭಾನುವಾರ ಕಾಂಗ್ರೆಸ್ನ ‘ಜನ ಆಕ್ರೋಶ್’ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸುರ್ಜೇವಾಲಾ, “ಉದ್ಯೋಗ ನೀಡಬೇಡಿ, ಕನಿಷ್ಠ ಉದ್ಯೋಗದಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಿ, ಬಿಜೆಪಿ ಮತ್ತು ಜೆಜೆಪಿಯ ಜನರು ರಾಕ್ಷಸರು ಮತ್ತು ಬಿಜೆಪಿಗೆ ಮತ ಹಾಕಿ ಅವರನ್ನು ಬೆಂಬಲಿಸುವವರೂ ಕೂಡ ರಾಕ್ಷಸರು. ಇಂದು ನಾನು ಈ ಮಹಾಭಾರತದ ಭೂಮಿಯಿಂದ ಶಪಿಸುತ್ತೇನೆ” ಎಂದಿದ್ದಾರೆ.
ಈ ಭಾಷಣದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವು ಬಿಜೆಪಿ ನಾಯಕರು ಅದನ್ನು ಶೇರ್ ಮಾಡಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ, “ರಾಜಕುಮಾರನನ್ನು ಅಧಿಕಾರಕ್ಕೇರಿಸಲು ವಿಫಲವಾದ ಕಾಂಗ್ರೆಸ್ ಪಕ್ಷವು ಈಗ ಸಾರ್ವಜನಿಕರನ್ನು ಮತ್ತು ಜನತೆಯನ್ನು ನಿಂದಿಸಲು ಪ್ರಾರಂಭಿಸಿದೆ ಎಂದಿದ್ದಾರೆ.
#WATCH | In Kaithal, Haryana, Congress MP Randeep Surjewala says, "…Those who vote for BJP and are BJP supporters are of 'raakshas' (demons) tendency. I curse from this land of Mahabharat…"
(13.08.2023) pic.twitter.com/IGuouzalbS
— ANI (@ANI) August 14, 2023
बार-बार शहजादे को लॉन्च करने में असफल कांग्रेस पार्टी अब जनता-जनार्दन को ही गाली देने लगी।
प्रधानमंत्री मोदी और भाजपा के विरोध में अंधेपन के शिकार हो चुके कांग्रेस पार्टी के नेता रणदीप सुरजेवाला को सुनिए कह रहे हैं – “भाजपा को वोट और सपोर्ट करने वाली देश की जनता ‘राक्षस’ है”… pic.twitter.com/GZvKVOcVa5
— Sambit Patra (@sambitswaraj) August 14, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.