ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಲೋಕಸಭೆಯಲ್ಲಿ ಪ್ರತಿಪಕ್ಷ ಅವಿಶ್ವಾಸ ನಿರ್ಣಯ ಗೊತ್ತುವಳಿಗೆ ಪ್ರತಿಕ್ರಿಯೆಯನ್ನು ನೀಡಿದರು.
ಈ ವೇಳೆ ಮಾತನಾಡಿದ ಅವರು, “ಪ್ರತಿಯೊಬ್ಬ ಸಂಸದರ ಅಭಿಪ್ರಾಯವನ್ನು ನಾನು ಕೇಳಿದ್ದೇನೆ. ಭಾರತ ಮತ್ತೆ ಮತ್ತೆ ನಮ್ಮ ಮೇಲೆ ನಂಬಿಕೆ ಇಟ್ಟಿದೆ. ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದನ್ನು ದೇವರ ಆಶೀರ್ವಾದ ಎಂದು ಭಾವಿಸುತ್ತೇನೆ. ಇದು 2018 ರಲ್ಲೂ ಸಂಭವಿಸಿತ್ತು. ಆಗಲೂ ನಾನು ಹೇಳಿದ್ದೆ, ಈ ನಿರ್ಣಯ ನಮ್ಮ ಸರ್ಕಾರದ ಫ್ಲೋರ್ ಟೆಸ್ಟ್ ಅಲ್ಲ ಪ್ರತಿಪಕ್ಷಗಳ ಫ್ಲೋರ್ ಟೆಸ್ಟ್ ಎಂದು. ಮತದಾನ ನಡೆದಾಗ ಅವರು ಸೋತು ಹೋದರು. ಜನರು ಅವರ ಮೇಲೆ ತಮ್ಮ ಅವಿಶ್ವಾಸವನ್ನು ಘೋಷಿಸಿದರು. ಎನ್ಡಿಎ ಮತ್ತು ಬಿಜೆಪಿ ಹೆಚ್ಚು ಮತಗಳನ್ನು ಪಡೆದವು ಒಂದು ರೀತಿಯಲ್ಲಿ ವಿಪಕ್ಷಗಳ ಅವಿಶ್ವಾಸ ಗೊತ್ತುವಳಿ ನಮಗೆ ಅದೃಷ್ಟವೇ ಆಗಿದೆ. ಎನ್ಡಿಎ ಮತ್ತು ಬಿಜೆಪಿ ಭಾರಿ ಜನಾದೇಶದೊಂದಿಗೆ ಮರಳುತ್ತದೆ ಎಂದು ನೀವು ನಿರ್ಧರಿಸಿದ್ದೀರಿ” ಎಂದು ಪ್ರತಿಪಕ್ಷಗಳ ಧೋರಣೆಗೆ ತೀಕ್ಷ್ಣವಾದ ಉತ್ತರಗಳನ್ನು ನೀಡಿದರು.
“ಪ್ರತಿಪಕ್ಷಗಳಿಗೆ ಬಡವರ ಹಸಿವಿನ ಬಗ್ಗೆ ಚಿಂತೆಯಿಲ್ಲ, ಅವರಿಗೆಗೆ ಅಧಿಕಾರದ ಬಗ್ಗೆ ಮಾತ್ರ ಚಿಂತೆ. ಅವರು ಯುವಕರ ಭವಿಷ್ಯದ ಬಗ್ಗೆ ಚಿಂತಿಸುತ್ತಿಲ್ಲ, ತಮ್ಮ ಭವಿಷ್ಯದ ಬಗ್ಗೆ ಮಾತ್ರ ಚಿಂತಿಸುತ್ತಾರೆ. ಎದುರಾಳಿ ತಂಡ ಫೀಲ್ಡಿಂಗ್ ಸೆಟ್ ಮಾಡಿದರೂ ಇಲ್ಲಿಂದ ಬೌಂಡರಿ, ಸಿಕ್ಸರ್ ಗಳು ಸಿಡಿದಿವೆ. ನಾವು ಶತಕಗಳನ್ನು ಬಾರಿಸುತ್ತಲೇ ಇದ್ದೇವೆ, ಅವರು ನೋ ಬಾಲ್ ಬೌಲಿಂಗ್ ಮಾಡುತ್ತಲೇ ಇದ್ದರು. ಮತ್ತೆ ಅಧಿಕಾರಕ್ಕೆ ಬರಲು ನಿಮಗೆ ಐದು ವರ್ಷ ಅವಕಾಶ ನೀಡಿದ್ದೇನೆ. ಆದರೂ ನೀವು ಏನು ಸಿದ್ಧಪಡಿಸಿಲ್ಲ?” ಎಂದಿದ್ದಾರೆ.
ಅತಿದೊಡ್ಡ ವಿರೋಧ ಪಕ್ಷದ ನಾಯಕನನ್ನು ಸ್ಪೀಕರ್ ಪಟ್ಟಿಯಲ್ಲಿ ಹೆಸರಿಸಲಾಗಿಲ್ಲ. ಶರದ್ ಪವಾರ್ ಅವರು 1999 ರ ಅವಿಶ್ವಾಸ ನಿರ್ಣಯದ ನೇತೃತ್ವ ವಹಿಸಿದ್ದರು. 2003 ರಲ್ಲಿ ಸೋನಿಯಾ ಗಾಂಧಿ. ಆದರೆ ಈ ಬಾರಿ ಅಧೀರ್ ಚೌಧರಿ ಸ್ಥಿತಿ ಏನಾಯಿತು ನೋಡಿ? ಅವರ ಪಕ್ಷದವರು ಅವರನ್ನು ಮಾತನಾಡಲು ಬಿಡಲಿಲ್ಲ. ಅಧೀರ್ ಚೌಧುರಿ ಅವರನ್ನು ಏಕೆ ಸೈಡ್ಲೈನ್ ಮಾಡಲಾಗುತ್ತಿದೆ? ಬಹುಶಃ ಕೋಲ್ಕತ್ತಾದಿಂದ ಕರೆ ಬಂದಿದೆ ಎಂದೆನಿಸುತ್ತದೆ. ನಾವು ಅಧೀರ್ ಚೌಧುರಿಯವರ ಬಗ್ಗೆ ಸಂಪೂರ್ಣ ಸಹಾನುಭೂತಿ ಹೊಂದಿದ್ದೇವೆ.
ಅವರು (ವಿರೋಧ) ದೇಶದ ಬಗ್ಗೆ ಒಳ್ಳೆಯದನ್ನು ಕೇಳಲು ಬಯಸುವುದಿಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.