ಭಾರತದ ಈಶಾನ್ಯ ರಾಜ್ಯ ಮಣಿಪುರದ ಪರಿಸ್ಥಿತಿ ಭಯಾನಕವಾಗುತ್ತಿದೆ. ಪ್ರಸ್ತುತ ಪರಿಸ್ಥಿತಿಯು ನಿಯಂತ್ರಣವನ್ನು ಕಳೆದುಕೊಂಡಿದೆ. ಎರಡು ತಿಂಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಅದರಲ್ಲೂ ಇತ್ತೀಚಿಗೆ ವೈರಲ್ ಆಗಿರುವ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ದೇಶವ್ಯಾಪಿಯಾಗಿ ಆಕ್ರೋಶಗಳನ್ನು ಹುಟ್ಟು ಹಾಕಿದೆ. ಇದು ಪ್ರತಿ ಭಾರತೀಯನಿಗೆ ಅತ್ಯಂತ ನಾಚಿಗೇಡಿನ ದೃಶ್ಯ. ಹೆಣ್ಣನ್ನು ಗೌರವಿಸುವ ಸಂಸ್ಕಾರವನ್ನು ಕಲಿಸುವ ಭಾರತದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದನ್ನು ಯಾರೊಬ್ಬರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಈ ಘಟನೆ ಬಗ್ಗೆ ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳು ಮತ್ತು ಸುಪ್ರೀಂಕೋರ್ಟ್ ಕೂಡ ಕಠಿಣ ಕ್ರಮವನ್ನು ಜರುಗಿಸುವ ಭರವಸೆಯನ್ನು ನೀಡಿವೆ. ಆದರೆ ಕಠಿಣ ಕ್ರಮವನ್ನು ಜರುಗಿಸಲು ಯಾಕೆ ಈ ಪ್ರಕರಣ ವೈರಲ್ ಆಗುವುದು ಅನಿವಾರ್ಯವಾಯಿತು? ಮಣಿಪುರದಲ್ಲಿ ನಡೆದಿರುವುದು ಕೇವಲ ಈ ಒಂದು ಘಟನೆ ಅಲ್ಲ, ಅಲ್ಲಿ ಸಾಕಷ್ಟು ಹೆಣಗಳು ಬಿದ್ದಿವೆ. ದೌರ್ಜನ್ಯದ ಪ್ರಕರಣಗಳು ನಡೆದಿವೆ. ಮೈಟಿ ಜನರ ಹೆಣಗಳು ಅಲ್ಲಲ್ಲಿ ಅನಾಥವಾಗಿ ಬಿದ್ದಿವೆ. ಆದರೆ ಸರ್ಕಾರದ ಅಸಮರ್ಥತೆಯನ್ನು ಈಗ ಅಂತರಾಷ್ಟ್ರೀಯಗೊಳಿಸಲಾಗುತ್ತಿದೆ, ರಾಜಕೀಯಗೊಳಿಸಲಾಗುತ್ತಿದೆ. ಈಗ ಪರಿಸ್ಥಿತಿ ಕೈ ಮೀರಿ ಹೋಗಿದೆ, ಕಾನೂನಿನ ಭಯ ಇಲ್ಲದೆ ಜನರು ಒಬ್ಬರ ಮೇಲೊಬ್ಬರು ಹಿಂಸೆ ಎಸಗುತ್ತಿದ್ದಾರೆ.
ಇನ್ನಾದರೂ ಸರ್ಕಾರ, ವ್ಯವಸ್ಥೆಗಳು ವಿಡಿಯೋ ವೈರಲ್ ಆಗುವುದನ್ನೇ ಕಾಯದೆ ಮೊದಲೇ ಎಚ್ಚೆತ್ತು ಕ್ರಮ ಜರುಗಿಸಬೇಕಾದ ಅನಿವಾರ್ಯತೆ ಇದೆ.
Janpeace Live ಅವರು ಈ ಕುರಿತು ಮಾಡಿರುವ ವಿಡಿಯೋ ವೀಕ್ಷಿಸಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.