ಜೂನ್ 10 ರಂದು, ಎಡಪಂಥೀಯ ಪೋರ್ಟಲ್ ದಿ ನ್ಯೂಸ್ ಮಿನಿಟ್ “Dalits in Telangana village defy years of untouchability, reject segregated barbershops” ಎಂಬ ಶೀರ್ಷಿಕೆಯ ಲೇಖನವನ್ನು ಪ್ರಕಟಿಸಿತ್ತು.
ಮತ್ತೊಂದು ಎಡಪಂಥೀಯ ಪೋರ್ಟಲ್ ದಿ ವೈರ್, ರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆಯನ್ನು ಪ್ರಚುರಪಡಿಸಲು ಇ. ಭವಾನಿ ಬರೆದ ಅದೇ ಲೇಖನವನ್ನು ಪ್ರಕಟಿಸಿತ್ತು, ಸತ್ಯಾನ್ವೇಷಣೆ ಮಾಡದೆಯೇ ಪ್ರಕಟಿಸಿತು.
ತೆಲಂಗಾಣದ ಸಿದ್ದೀಪ್ಟ್ ಜಿಲ್ಲೆಯ ಜಾದ್ವೇವ್ಪುರ ಮಂಡಲದ ತಿಮ್ಮಾಪುರ ಗ್ರಾಮದಲ್ಲಿ ದಲಿತ ಪುರುಷರಿಗೆ ಸ್ಥಳೀಯ ಸಲೂನ್ಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ನ್ಯೂಸ್ ಮಿನಿಟ್ ವರದಿ ಮಾಡಿದೆ.
“ಈ ಪರಿಸ್ಥಿತಿಯನ್ನು ಬದಲಾಯಿಸಲು ಆ ಗ್ರಾಮದ ಐವರು ದಲಿತ ಪುರುಷರು ಅದೇ ಸಲೂನ್ನಲ್ಲಿ ತಮ್ಮ ಕೂದಲನ್ನು ಕತ್ತರಿಸಬೇಕೆಂದು ಒತ್ತಾಯಿಸಿ ಅಲ್ಲೇ ಬೀಡುಬಿಟ್ಟರು. ಆದರೆ ಕ್ಷೌರಿಕ ನಿರಾಕರಿಸಿದಾಗ ಅವರು ತಾರತಮ್ಯದ ವರ್ತನೆಗಾಗಿ ಕ್ಷೌರಿಕ ಮತ್ತು ಸ್ಥಳೀಯವಾಗಿ ಪ್ರಬಲ ಜಾತಿಯ ಇತರ ಸದಸ್ಯರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ”ಎಂದು ವರದಿಯು ಹೇಳಿತ್ತು.
ಆದರೆ, ವಿಎಸ್ಕೆ ತೆಲಂಗಾಣದ ಮೂಲ ವರದಿಯು ದಿ ನ್ಯೂಸ್ ಮಿನಿಟ್ನ ವರದಿಯು ಸಂಪೂರ್ಣವಾಗಿ ತಪ್ಪಾದ ಮಾಹಿತಿಯನ್ನು ಆಧರಿಸಿದೆ ಮತ್ತು ತಪ್ಪುದಾರಿಗೆಳೆಯುವಂತಿದೆ ಎಂದು ಬಹಿರಂಗಪಡಿಸಿದೆ.
ಬದಲಾಗಿ, ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಎಸ್ಎಫ್ಐ ಮತ್ತು ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಗ್ರಾಮದಲ್ಲಿ ಎಸ್ಸಿ ಮತ್ತು ಒಬಿಸಿ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯವನ್ನು ಸೃಷ್ಟಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಈ ವಿವಾದವನ್ನು ರೂಪಿಸಿದ್ದಾರೆ ಎಂಬುದಾಗಿ ಹೇಳಿತು.
ಜಾತಿ ಆಧಾರಿತ ತಾರತಮ್ಯ, ಸಾಮುದಾಯಿಕ ಭೋಜನದ ನಿರಾಕರಣೆ ಮತ್ತು ದೇವಾಲಯಗಳಿಗೆ ಪ್ರವೇಶ ನಿರಾಕರಣೆ ಘಟನೆಗಳನ್ನು ಎಡಪಂಥೀಯ ಮಾಧ್ಯಮ ವರದಿ ಆರೋಪಿಸಿದೆ.
ಎಡ ಒಲವಿನ ಪೋರ್ಟಲ್ಗಳು ಮತ್ತು ವಿಎಸ್ಕೆ ತೆಲಂಗಾಣ ಪ್ರಕಟಿಸಿದ ವರದಿಗಳನ್ನು ಆಧರಿಸಿ ʼಎರೈಸ್ ಭಾರತ್ʼ ಎರಡೂ ಸಮುದಾಯಗಳ ಜನರನ್ನು ಸಂಪರ್ಕಿಸಿ ಸತ್ಯಗಳನ್ನು ಖಚಿತಪಡಿಸಿಕೊಳ್ಳುವ ಕಾರ್ಯಕ್ಕೆ ಮುಂದಾಯಿತು.
ಎರಡೂ ಸಮುದಾಯಗಳ ಮೂಲಗಳು ʼಎರೈಸ್ ಭಾರತ್ʼಗೆ ತಿಳಿಸಿದ್ದನ್ನು ಆಧರಿಸಿ ವರದಿ ಇಲ್ಲಿದೆ.
ಆರೋಪ 1: ಜಾತಿ ತಾರತಮ್ಯ
ನಾಯೀ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಕ್ಷೌರಿಕ ಶ್ಯಾಮಸುಂದರ್ ಅವರು ಸಲೂನ್ನಲ್ಲಿ ದಲಿತರ ಕೂದಲನ್ನು ಕತ್ತರಿಸಲು ನಿರಾಕರಿಸಿದರು, ಬದಲಿಗೆ ಗ್ರಾಮದ ಹೊರವಲಯದಲ್ಲಿರುವ ಹುಣಸೆ ಮರದ ಕೆಳಗೆ ಕೂದಲು ಕತ್ತರಿಸುವ ಕ್ಷೌರಿಕರ ಅಭ್ಯಾಸವನ್ನು ಅನುಸರಿಸುವಂತೆ ಒತ್ತಾಯಿಸಿದರು ಎಂಬ ಆರೋಪದೊಂದಿಗೆ ನ್ಯೂಸ್ ಮಿನಿಟ್ನ ಲೇಖನ ಪ್ರಾರಂಭವಾಯಿತು.
ಸತ್ಯ:
ಶ್ಯಾಮಸುಂದರ್ ಅವರ ಸಲೂನ್ನಲ್ಲಿ ಕುಳಿತುಕೊಂಡಿದ್ದಾಗ ಐದು ಗ್ರಾಮಸ್ಥರ ಗುಂಪು ತಕ್ಷಣ ಕ್ಷೌರ ಮಾಡುವಂತೆ ಬಂದು ಒತ್ತಾಯಿಸಿತು. ತಮ್ಮ ಸರದಿಗಾಗಿ ಕಾಯುವಂತೆ ಅವರ ವಿನಂತಿಯ ಹೊರತಾಗಿಯೂ, ತಕ್ಷಣವೇ ಸೇವೆ ಸಲ್ಲಿಸಬೇಕೆಂದು ಒತ್ತಡ ಹೇರಿತು. ಕ್ಷೌರಿಕ ಕಷ್ಟವನ್ನು ವಿವರಿಸಿ ಅವರ ಸರದಿಗಾಗಿ ಕಾಯುವಂತೆ ಮತ್ತೊಮ್ಮೆ ಒತ್ತಾಯಿಸಿದರು.
ಅಲ್ಲದೇ, ಶುಕ್ರವಾರ ತಾನು ಕ್ಷೌರ ಮಾಡುವ ಎಂದಿನ ಸ್ಥಳಕ್ಕೆ ಭೇಟಿ ನೀಡುವಂತೆ ಅವರಿಗೆ ಸೂಚಿಸಿದರು, ಇದು ಅವರ ಸಲೂನ್ನಿಂದ ಸರಿಸುಮಾರು 500 ಮೀಟರ್ ದೂರದಲ್ಲಿದೆ ಮತ್ತು ಎಸ್ಸಿ ಸಮುದಾಯದವರು ಹೆಚ್ಚಾಗಿ ವಾಸಿಸುವ ನೆರೆಹೊರೆಯ ಪಕ್ಕದಲ್ಲಿದೆ.
ಅವರ ಮಾತನ್ನು ಅಪರಾಧವೆಂದು ಪರಿಗಣಿಸಿ, ಈ ಯುವಕರು ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಜಾತಿ ಆಧಾರಿತ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿ ಎಫ್ಐಆರ್ ದಾಖಲಿಸಿದ್ದಾರೆ. ಶ್ಯಾಮಸುಂದರ್ ಅವರು ಮುದಿರಾಜ್ (ಬಿಸಿ ಜಾತಿ) ಸಮುದಾಯಕ್ಕೆ ಸೇರಿದ ಇನ್ನೊಬ್ಬ ವ್ಯಕ್ತಿಯ ಜೊತೆ ಸೇರಿ ತಮ್ಮೊಂದಿಗೆ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ ಮತ್ತು ಅವರ ವಿರುದ್ಧ ಎಸ್ಸಿ ಎಸ್ಟಿ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಆರೋಪ 2: ಸಮುದಾಯ ಊಟದ ನಿರಾಕರಣೆ
ಜೂನ್ 8 ರಂದು, ತಿಮ್ಮಾಪುರವು ತೆಲಂಗಾಣ ರಚನೆಯ ದಶಮಾನೋತ್ಸವದ ಅಂಗವಾಗಿ ‘ಕೆರೆಗಳ ಹಬ್ಬ’ವನ್ನು ಗುರುತಿಸಿತು. ದಲಿತ ನಿವಾಸಿಗಳು ಸಮುದಾಯದ ಅಡುಗೆ ಸಮಾರಂಭದಲ್ಲಿ ಭಾಗವಹಿಸಲು ಮುಂದಾದಾಗ, ಪ್ರಬಲ ಮುದಿರಾಜ್ ಸಮುದಾಯದ ಸದಸ್ಯರು ಮತ್ತು ಇತರ ಸಮುದಾಯಗಳು ವಿರೋಧಿಸಿದರು.
“ನಾವು ಬೇಯಿಸಿದ ಆಹಾರವನ್ನು ತಿನ್ನುವುದಿಲ್ಲ ಎಂದು ಹೇಳುವ ಮೂಲಕ ಅವರು ನಮ್ಮನ್ನು ಅವಮಾನಿಸಿದ್ದಾರೆ. ಎಲೆಗಳನ್ನು ಎತ್ತಿಕೊಂಡು ಅವರ ಊಟದ ನಂತರ ನಾವು ಸ್ವಚ್ಛಗೊಳಿಸಬೇಕೆಂದು ಅವರು ಬಯಸಿದ್ದರು”ಎಂದು ದಲಿತ ನಿವಾಸಿ ನರಸಿಮ್ಲು ಲೇಖನದಲ್ಲಿ ತಿಳಿಸಿದ್ದಾರೆ.
ಸತ್ಯ:
ತೆಲಂಗಾಣ ರಚನೆಯ ಅಂಗವಾಗಿ ರಾಜ್ಯ ಸರ್ಕಾರದ ದಶಮಾನೋತ್ಸವದ ಆಚರಣೆಯಲ್ಲಿ ಎಲ್ಲರೂ ಸಮುದಾಯ ಊಟ ಮಾಡುತ್ತಿದ್ದಾಗ, ಎಸ್ಸಿ ಸಮುದಾಯದ ಸುಮಾರು 20 ರಿಂದ 25 ವ್ಯಕ್ತಿಗಳ ಗುಂಪು ಏಕಾಏಕಿ ಊಟದ ಪ್ರದೇಶಕ್ಕೆ ಪ್ರವೇಶಿಸಿ ಆ ಸಮಯದಲ್ಲಿ ಊಟ ಮಾಡುತ್ತಿದ್ದ ಹಿಂದುಳಿದ ಜಾತಿ (ಬಿಸಿ) ಸಮುದಾಯದ ಜನರಿಗೆ ತಮಗೆ ಊಟ ಬಡಿಸುವಂತೆ ಒತ್ತಾಯಿಸಿದರು. ದಗಾಗಲೇ, ಎಲ್ಲಾ ಜಾತಿಗಳನ್ನು ಪ್ರತಿನಿಧಿಸುವ ಯುವಕರು ಆಹಾರವನ್ನು ಬಡಿಸುತ್ತಿದ್ದರು.
ಈ ಎಲ್ಲಾ ಅಸಂಬದ್ಧ ವಾದಗಳನ್ನು ಗಮನಿಸಿದ 80 ವರ್ಷದ ಮಹಿಳೆಯೊಬ್ಬರು, ಎಲ್ಲರೂ ಆಹಾರವನ್ನು ಬಡಿಸುವವರೇ ಆಗಿರುವಾಗ ಇವರ್ಯಾಕೆ ಊಟವನ್ನು ಬಡಿಸಲು ಒತ್ತಾಯಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ಆದರೆ, ಎಸ್ಸಿ ಸಮುದಾಯದ ಪುರುಷರು ವೃದ್ಧ ಮಹಿಳೆಯ ಮಾತನ್ನು ಆಕ್ಷೇಪಾರ್ಹವಾಗಿ ತೆಗೆದುಕೊಂಡರು.
ಸಾಂಪ್ರದಾಯಿಕ ಪದ್ಧತಿಯಂತೆ, ಊಟವನ್ನು ತಯಾರಿಸುವ ಮತ್ತು ಬಡಿಸುವ ಪ್ರಕ್ರಿಯೆಯು ಎಲ್ಲಾ ಜಾತಿಗಳನ್ನು ಒಳಗೊಳ್ಳುವ ಮತ್ತು ನಿಷ್ಪಕ್ಷಪಾತವಾಗಿದೆ, ಅಲ್ಲಿ ಎಲ್ಲಾ ಜಾತಿಗಳ ಜನರು ಆಹಾರವನ್ನು ತಯಾರಿಸುವಲ್ಲಿ ತೊಡಗುತ್ತಾರೆ ಮತ್ತು ಇತರರು ವಿವಿಧ ಕಾರ್ಯಗಳು ಮತ್ತು ಕಾರ್ಯಕ್ರಮಗಳಲ್ಲಿ ಹಳ್ಳಿಯಲ್ಲಿ ಊಟದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ.
ಆರೋಪ 3: ದೇವಾಲಯ ಪ್ರವೇಶಕ್ಕೆ ನಿರಾಕರಣೆ
ವರದಿಯು ಹೀಗಿದೆ: “ತನ್ನ ಬಾಲ್ಯದ ಘಟನೆಯ ಎರಡು ದಶಕಗಳ ನಂತರ, ರಾಜು ಜುಲೈ 1 ರಂದು ನರಸಿಮ್ಲು ಮತ್ತು ಇತರರೊಂದಿಗೆ ಮತ್ತೊಮ್ಮೆ ಹನುಮಾನ್ ದೇವಸ್ಥಾನವನ್ನು ಪ್ರವೇಶಿಸಿದರು. ಅವರ ಪ್ರವೇಶದ ನಂತರ ದೇವಾಲಯಕ್ಕೆ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ”.
“ಹಿಂದುಗಳಿದ ಸಮುದಾಯಗಳು ಸಮುದಾಯಗಳು ಇನ್ನು ಮುಂದೆ ದೇವಸ್ಥಾನವನ್ನು ಪ್ರವೇಶಿಸಲು ಬಯಸುವುದಿಲ್ಲ. ತಾವೇ ಹೊಸ ಹನುಮಾನ್ ಮಂದಿರ ನಿರ್ಮಿಸುವುದಾಗಿ ಹೇಳುತ್ತಿದ್ದಾರೆ’ ಎಂದು ರಾಜು ಹೇಳಿದರು.
ಸತ್ಯ:
ದೇವಾಲಯದ ಪ್ರವೇಶಕ್ಕೆ ಯಾವುದೇ ನಿರ್ಬಂಧಗಳಿಲ್ಲ ಎಂಬುದನ್ನು ಗ್ರಾಮದ ದೇವಾಲಯದ ದೃಶ್ಯವು ನಿಸ್ಸಂದಿಗ್ಧವಾಗಿ ತೋರಿಸುತ್ತದೆ.
ಆದರೂ, ಎಸ್ಸಿ ಸಮುದಾಯದ ಜನರಿಗೆ ದೇವಾಲಯದ ಪ್ರವೇಶವನ್ನು ನಿಜವಾಗಿಯೂ ನಿರಾಕರಿಸಲಾಗಿದೆಯೇ ಎಂದು ಪರಿಶೀಲಿಸದೆ ದಿ ನ್ಯೂಸ್ ಮಿನಿಟ್ ಇಂತಹ ದುರುದ್ದೇಶಪೂರಿತ ಕಾಮೆಂಟ್ಗಳಿಗೆ ಜಾಗವನ್ನು ನೀಡಿದೆ. ಈ ಯುವಕರು ರಾಜಕೀಯ ಮೈಲೇಜ್ ಸಾಧಿಸಲು ಇಂತಹ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತಲೇ ಇರಬೇಕೆಂದು ಬಯಸುವ ರಾಜಕೀಯ ಗುಂಪಿನ ಭಾಗವಾಗಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.
ಎಸ್ಎಫ್ಐನಿಂದ ರಾಜಕೀಯ ಷಡ್ಯಂತ್ರ:
ತಿಮ್ಮಾಪುರ ಗ್ರಾಮವು ಶಾಂತಿಯುತ ಮತ್ತು ಸಾಮರಸ್ಯದ ಸಾಮಾಜಿಕ ಜೀವನಕ್ಕೆ ಹೆಸರುವಾಸಿಯಾಗಿದೆ. ರಜಕ, ಯಾದವ, ಮುದಿರಾಜ್, ಪದ್ಮಶಾಲಿ (ಬಿಸಿ), ಮತ್ತು ಮಾದಿಗ (ಎಸ್ಸಿ) ಮುಂತಾದ ವಿವಿಧ ಜಾತಿಗಳ ಜನರು ಉತ್ತಮ ಬಾಂಧವ್ಯ ನಿರ್ವಹಿಸುತ್ತಿದ್ದಾರೆ ಮತ್ತು ಪರಸ್ಪರ ಆರೋಗ್ಯಕರ ಸಂಬಂಧವನ್ನು ಬೆಳೆಸುತ್ತಿದ್ದಾರೆ.
ಆದರೆ, ಇತ್ತೀಚೆಗೆ ರಾಜು ಎಂಬ ಗ್ರಾಮಸ್ಥ ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ನಿಂದ ಆಕರ್ಷಿತನ ಮತ್ತು ಪ್ರಭಾವಿತನಾಗಿದ್ದಾನೆ. ಸಿಪಿಎಂ ಅಂಗಸಂಸ್ಥೆಯಾದ ಕುಲ ವಿವಕ್ಷ ಹೋರಾಟ ಸಮಿತಿ (ಕೆವಿಪಿಎಸ್) ತಿಮ್ಮಾಪುರದಲ್ಲಿ ಎಸ್ಸಿ ಸಮುದಾಯದ ಯುವಕರನ್ನು ಸಕ್ರಿಯವಾಗಿ ಸೆಳೆಯುತ್ತಿದೆ.
ಕಳೆದ ಕೆಲವು ತಿಂಗಳುಗಳಿಂದ ರಾಜು ತಿಮ್ಮಾಪುರದಲ್ಲಿ ಎಸ್ಸಿಯೇತರ ಹಿನ್ನೆಲೆಯ ವ್ಯಕ್ತಿಗಳಿಗೆ ಕಿರುಕುಳ ನೀಡುವಂತೆ ಎಸ್ಸಿ ಸಮುದಾಯದವರನ್ನು ಪ್ರಚೋದಿಸುತ್ತಿದ್ದಾರೆ ಮತ್ತು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ, ರಾಜು ಅವರು ಮೇಲಿನ ಆರೋಪಗಳ ಸತ್ಯವನ್ನು ದೃಢೀಕರಿಸುವ ನಿರ್ಣಯವನ್ನು ಅಂಗೀಕರಿಸುವಂತೆ ಎಸ್ಸಿ ಸಮುದಾಯದ ಹಿರಿಯರ ಮೇಲೆ ಒತ್ತಡ ಹೇರಿದರು. ಈ ನಿರ್ಣಯದ ಪ್ರಕಾರ, ಈ ಆರೋಪಗಳ ವಿರುದ್ಧ ಮಾತನಾಡುವ ಯಾರಾದರೂ ಅಥವಾ ಸೌಹಾರ್ದ ಸಂಬಂಧವನ್ನು ಸ್ಥಾಪಿಸಲು ಮತ್ತು ಹಿಂದುಳಿದ ಸಮುದಾಯದ ಜನರೊಂದಿಗೆ ಊಟ ಮಾಡಲು ಪ್ರಯತ್ನಿಸಿದರೆ ರೂ.15,000 ದಂಡವನ್ನು ವಿಧಿಸಲಾಗುತ್ತದೆ.
ಎಂಆರ್ಪಿಎಸ್ ಮತ್ತು ಬಿಎಸ್ಪಿಯಂತಹ ಎಸ್ಸಿ ಸಮಸ್ಯೆಗಳನ್ನು ಕೇಂದ್ರೀಕರಿಸುವ ಜಾತಿ ಕೇಂದ್ರಿತ ಸಂಘಟನೆಗಳು ಹಳ್ಳಿಯಲ್ಲಿ ತಮ್ಮದೇ ಆದ ರಾಜಕೀಯ ಅಜೆಂಡಾಗಳನ್ನು ಬೆಳೆಸಲು ಯುವಕರನ್ನು ಸಕ್ರಿಯವಾಗಿ ಪ್ರಚೋದಿಸುತ್ತಿವೆ.
ಜಾತಿ ಆಧಾರಿತ ತಾರತಮ್ಯ, ಕೋಮು, ಭೋಜನ ತಾರತಮ್ಯ, ದೇಗುಲ ಪ್ರವೇಶದಂತಹ ಸಮಸ್ಯೆಯನ್ನು ಸಮಗ್ರವಾಗಿ ಜಾಗೃತಿ ಅಭಿಯಾನದ ಮೂಲಕ ಪರಿಹರಿಸಲು ಸಮಾಜವು ಪ್ರಯತ್ನಿಸುತ್ತಿರುವಾಗ, ವಿಭಜಕ ಶಕ್ತಿಗಳು ಎನ್ಜಿಒಗಳು, ಹಕ್ಕುಗಳ ಕಾರ್ಯಕರ್ತರು, ಎಡಪಂಥೀಯ ಪತ್ರಕರ್ತರು ಮತ್ತು ಕಮ್ಯುನಿಸ್ಟರ ವೇಷದಲ್ಲಿರುವ ಸಣ್ಣ ಸಮಸ್ಯೆಯ ಬಗ್ಗೆಯೂ ನಿರಂತರ ಹುಡುಕಾಟದಲ್ಲಿ ತೊಡಗಿದ್ದಾರೆ. ಜಾತಿ ತಾರತಮ್ಯದ ನಿರೂಪಣೆಯನ್ನು ಮತ್ತಷ್ಟು ಹೆಚ್ಚಿಸಲು ಅವರು ಐತಿಹಾಸಿಕ ಅಂಶಗಳೊಂದಿಗೆ ಇಂತಹ ಘಟನೆಗಳನ್ನು ವೈಭವೀಕರಿಸುತ್ತಿದ್ದಾರೆ.
ಖಾಸಗಿ ಚರ್ಚೆಗಳಲ್ಲಿ, ಸ್ಥಳೀಯ ಗ್ರಾಮಸ್ಥರು ಮತ್ತು ಎರಡೂ ಕಡೆಯ ಸಮುದಾಯದ ಮುಖಂಡರು ವರದಿಯಲ್ಲಿ ಉಲ್ಲೇಖಿಸಲಾದ ಎಲ್ಲಾ ಆರೋಪಗಳನ್ನು ಕಟುವಾಗಿ ನಿರಾಕರಿಸಿದ್ದಾರೆ.
ಆದರೆ, ಅವರು ಜಾಗರೂಕರಾಗಿರುತ್ತಾರೆ ಮತ್ತು SC ಮತ್ತು BC ಎರಡೂ ಬಣಗಳಿಂದ ಸಂಭಾವ್ಯ ಪರಿಣಾಮಗಳಿಗೆ ಹೆದರಿ ಬಹಿರಂಗವಾಗಿ ಹೊರಬರಲು ಇಷ್ಟಪಡುತ್ತಿಲ್ಲ. 15,000 ರೂಪಾಯಿ ದಂಡ ಮತ್ತು ಎಸ್ಸಿ/ಎಸ್ಟಿ ಕಾಯಿದೆಯಡಿ ಸಂಭಾವ್ಯ ಕಾನೂನು ಕ್ರಮ ಎದುರಿಸುವ ಬೆದರಿಕೆ ಅವರ ಮೌನವನ್ನು ಮತ್ತಷ್ಟು ಹೆಚ್ಚಿಸಿದೆ.
ಸಹಾಯಕ ಪೊಲೀಸ್ ಆಯುಕ್ತ ರಮೇಶ್, ಕಂದಾಯ ವಿಭಾಗದ ಅಧಿಕಾರಿ ವಿಜಯೇಂದರ್ ರೆಡ್ಡಿ ಅವರು ಜೂ.13ರಂದು ಗ್ರಾಮಸ್ಥರನ್ನು ಭೇಟಿ ಮಾಡಿ ಮಾರ್ಗದರ್ಶನ ನೀಡಿ, ಒಡೆದು ಆಳುವ ಅಂಶಗಳಿಂದ ದೂರವಿರಿ ಎಂದು ಒತ್ತಾಯಿಸಿದರು. ಸನ್ನಿವೇಶಗಳನ್ನು ನಿರ್ಣಯಿಸುವಾಗ ರಾಜಕೀಯವಾಗಿ ಪಕ್ಷಪಾತದ ದೃಷ್ಟಿಕೋನವನ್ನು ತಪ್ಪಿಸುವ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳಿದರು.
ಮೂಲ ಲೇಖನ: Arise Bharat
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.