ಬೆಂಗಳೂರು: ಸದನದಲ್ಲಿ ಸಭಾಧ್ಯಕ್ಷರ ಏಕಪಕ್ಷೀಯ ವರ್ತನೆ ಕುರಿತು ಇಂದು ರಾಜ್ಯಪಾಲರ ಗಮನ ಸೆಳೆಯಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ತಿಳಿಸಿದರು.
ಇಂದು ರಾಜ್ಯಪಾಲರ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಪೇಪರ್ ಹರಿದು ಹಾಕಿದ್ದಕ್ಕೆ ಅಮಾನತು ಮಾಡುವುದಾದರೆ ಹಿಂದೆ ಕುರ್ಚಿ ಎಳೆದುದಕ್ಕೆ ವಜಾ ಮಾಡಬೇಕಿತ್ತು ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
ಸದನದ ಸಭ್ಯತೆ ಕಾಪಾಡುವುದು ಸ್ಪೀಕರ್ ಹೊಣೆ ಆಗಿರುತ್ತದೆ. ಅದೇರೀತಿ ಆಡಳಿತ ಪಕ್ಷದ ಲೋಪದೋಷಗಳನ್ನು ತಿಳಿಸುವುದು ವಿಪಕ್ಷಗಳ ಜವಾಬ್ದಾರಿ ಆಗಿದೆ ಎಂದು ತಿಳಿಸಿದರು. ಸರಕಾರ ತಪ್ಪು ದಾರಿಯಲ್ಲಿದ್ದರೆ ಅದನ್ನು ತಿಳಿಸಿ ಸರಿದಾರಿಗೆ ತರಬೇಕಾಗುತ್ತದೆ ಎಂದು ನುಡಿದರು.
ಸರಕಾರ ತನ್ನ ಮನಸ್ಸಿಗೆ ಬಂದಂತೆ ವರ್ತಿಸಬಾರದು. ಮೊನ್ನೆ ಬಂದವರು ಸರಕಾರದ ಅತಿಥಿಗಳಲ್ಲ ಎಂದು ಗಮನ ಸೆಳೆದರು. ಐಎಎಸ್, ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸಿ ಸೇವಾ ನಿಯಮ ಉಲ್ಲಂಘಿಸಿದ್ದಾರೆ ಎಂದು ಆಕ್ಷೇಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.