ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಫ್ರಾನ್ಸ್ ಭೇಟಿಯ ವೇಳೆ ಮಣಿಪುರ ವಿಷಯದ ಬಗ್ಗೆ ಮೌನ ವಹಿಸಿದ್ದನ್ನು ಟೀಕಿಸಿದ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಸ್ಮೃತಿ ಇರಾನಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರು ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ರಾಹುಲ್ ಗಾಂಧಿ ಅವರನ್ನು “ಹತಾಶೆಗೊಂಡ ರಾಜವಂಶದವರು” ಎಂದು ಜರೆದಿದ್ದಾರೆ.
“ಭಾರತದ ಆಂತರಿಕ ವಿಷಯಗಳಲ್ಲಿ ಅಂತರಾಷ್ಟ್ರೀಯ ಹಸ್ತಕ್ಷೇಪವನ್ನು ಬಯಸುವ ವ್ಯಕ್ತಿ” ಎಂದಿದ್ದಾರೆ. ‘ಮೇಕ್ ಇನ್ ಇಂಡಿಯಾ’ ಮಹತ್ವಾಕಾಂಕ್ಷೆಯನ್ನು ಟೀಕಿಸಿದ ಹತಾಶೆಗೊಂಡ ರಾಜವಂಶವು ನಮ್ಮ ಪ್ರಧಾನಿ ರಾಷ್ಟ್ರೀಯ ಗೌರವವನ್ನು ಪಡೆದಾಗ ಭಾರತವನ್ನು ಅಣಕಿಸುತ್ತದೆ” ಎಂದು ಇರಾನಿ ಟ್ವೀಟ್ ಮಾಡಿದ್ದಾರೆ.
ಅಲ್ಲದೆ, ರಾಹುಲ್ ಗಾಂಧಿಯನ್ನು ಗೇಲಿ ಮಾಡಿದ ಅವರು, “ಜನರಿಂದ ತಿರಸ್ಕರಿಸಲ್ಪಟ್ಟ ಅವರು ಇನ್ನು ಮುಂದೆ ರಾಜವಂಶದ ಬಾಗಿಲಿಗೆ ರಕ್ಷಣಾ ಒಪ್ಪಂದಗಳು ಬರುತ್ತಿಲ್ಲವಲ್ಲ ಎಂದು ನೋಡುತ್ತಿದ್ದಾರೆ” ಎಂದಿದ್ದಾರೆ.
A man who seeks international intervention in India’s internal matters, a frustrated dynast who sullies the ‘Make in India’ ambition mocks India when our PM receives a National honour. Rejected by people, he seethes as defence contracts no longer land at the doorstep of dynasty. https://t.co/OcpTPd7gdy
— Smriti Z Irani (@smritiirani) July 15, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.