ವಾಷಿಂಗ್ಟನ್: ಅಮೆರಿಕ ಪ್ರವಾಸದ ಸಮಾರೋಪ ಕಾರ್ಯಕ್ರಮದಲ್ಲಿ ವಿದೇಶಿ ಗಾಯಕಿ ಮೇರಿ ಮಿಲ್ಬೆನ್ ಅವರು ಭಾರತದ ರಾಷ್ಟ್ರಗೀತೆ ಜನಗಣ ಮನ ಹಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಮೋದಿ ಅಂದರೆ ವಿದೇಶಿಯರಿಗೂ ಇಷ್ಟ ಎಂಬುದು ಇದರಿಂದ ಸಾಬೀತಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸ ಜಗತ್ತಿನಾದ್ಯಂತ ಸುದ್ದಿಯಾಗುತ್ತಿದ್ದು, ಮೋದಿ ಅವರು ತಮ್ಮ ಅಮೇರಿಕಾ ಪ್ರವಾಸದ ವೇಳೆ ರೊನಾಲ್ಡ್ ರೇಗನ್ ಸೆಂಟರ್ನಲ್ಲಿ ಎನ್ಆರ್ಐ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಆಭರೀ ಜನಸ್ತೋಮ ನೆರೆದಿತ್ತು. ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಮೆರಿಕದ ಖ್ಯಾತ ಹಾಲಿವುಡ್ ನಟಿ ಮತ್ತು ಗಾಯಕಿ 38 ವರ್ಷದ ಮೇರಿ ಮಿಲ್ಬೆನ್ ಅವರು ಭಾರತೀಯ ರಾಷ್ಟ್ರಗೀತೆ ‘ಜನ ಗಣ ಮನ’ ಗೀತೆಯನ್ನು ಮನಮೋಹಕವಾಗಿ ಹಾಡಿದರು. ಈ ವೇಳೆ ಅವರು ಭಾರತದ ರಾಷ್ಟ್ರಗೀತೆಯನ್ನು ಹಾಡಿದ ನಂತರ ಪ್ರಧಾನಿ ಮೋದಿಯವರ ಪಾದಗಳನ್ನು ಮುಟ್ಟಿ ನಮಸ್ಕರಿಸಿದರು.
ಇದೇ ಕಾರ್ಯಕ್ರಮದಲ್ಲಿ ಮಿಲ್ಬೆನ್ ಅವರು ಓಂ ಜೈ ಜಗದೀಶ್ ಹರೆ ಹಾಡನ್ನೂ ಕೂಡ ಹಾಡಿದ್ದು, ಅವರ ಅದ್ಭುತ ಗಾಯನವನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.
A night I will treasure forever.
Thank you Prime Minister @narendramodi for your kindness and warmth. An honor to sing for you. Thank you @DDNewslive for airing. India and Indian communities across the world, I love you! God bless the #USIndia alliance. #ModiInUS #PMModiUSVisit https://t.co/FosSOtjL87— Mary Millben (@MaryMillben) June 24, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.