ನವದೆಹಲಿ: ಭಾರತದ ಪ್ರಧಾನಿ ವಿಶ್ವ ವೇದಿಕೆಯಲ್ಲಿ ಭಾರತದ ಗೌರವವನ್ನು ಹೆಚ್ಚಿಸುತ್ತಿದ್ದರೆ, ಅತ್ತ ಕಡೆ ಪಾಕಿಸ್ಥಾನ ಪ್ರಧಾನಿ ತಮ್ಮ ವರ್ತನೆಯಿಂದ ಜಾಗತಿಕ ವೇದಿಕೆಯಲ್ಲಿ ಪಾಕಿಸ್ಥಾನದ ಮಾನ ಹರಾಜು ಹಾಕುತ್ತಿದ್ದಾರೆ.
ಹೊಸ ಜಾಗತಿಕ ಹಣಕಾಸು ಒಪ್ಪಂದದ ಶೃಂಗಸಭೆಯು ಫ್ರಾನ್ಸ್ನ ಪ್ಯಾರಿಸ್ನಲ್ಲಿ ನಡೆಯುತ್ತಿದ್ದು, ಅಲ್ಲಿ ವಿವಿಧ ವಲಯಗಳಿಂದ 300 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಆದರೆ ಪಾಕಿಸ್ತಾನದ ಪ್ರಧಾನಿ ಎಂ. ಶೆಹಬಾಜ್ ಷರೀಫ್ ಅಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆದಾಡುತ್ತಿರುವ ವಿಡಿಯೋ ತಪ್ಪು ಕಾರಣಗಳಿಗಾಗಿ ವೈರಲ್ ಆಗಿದೆ. ಶೆಹಬಾಜ್ ಅವರು ಮಹಿಳಾ ಅಧಿಕಾರಿಯ ಛತ್ರಿಯನ್ನು ಕಿತ್ತುಕೊಂಡು ಆಕೆಯನ್ನು ಮಳೆಯಲ್ಲಿ ನೆನೆಯುವಂತೆ ಮಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಪ್ಯಾರಿಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಶೆಹಬಾಜ್ ಪಲೈಸ್ ಬ್ರೋಗ್ನಿಯರ್ಟ್ಗೆ ಆಗಮಿಸಿದ್ದಾರೆ ಎಂದು ತಿಳಿಸುವ ವಿಡಿಯೋ ತುಣುಕನ್ನು ಪಾಕಿಸ್ತಾನದ ಪಿಎಂಒ ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಆನ್ಲೈನ್ನಲ್ಲಿ ಕಾಣಿಸಿಕೊಂಡ ವಿಡಿಯೋ ಜನರ ಆಕ್ರೋಶಕ್ಕೆ ತುತ್ತಾಗಿದೆ. ಪಾಕಿಸ್ತಾನದ ಪ್ರಧಾನಿಯ ನಡವಳಿಕೆ ಯೋಗ್ಯವಾಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಮಹಿಳಾ ಸಿಬ್ಬಂದಿ ಮಳೆಯ ನಡುವೆಯೇ ಅವರನ್ನು ಬರಮಾಡಿಕೊಂಡು ತಕ್ಷಣವೇ ಛತ್ರಿಯನ್ನು ಹಿಡಿದುಕೊಂಡು ಪ್ರಧಾನ ಮಂತ್ರಿಯೊಂದಿಗೆ ನಡೆದಿದ್ದಾಳೆ, ಆದರೆ, ಕೆಲವು ಸೆಕೆಂಡುಗಳ ನಂತರ ಷರೀಫ್ ಆಕೆಯಿಂದ ಛತ್ರಿಯನ್ನು ಕಸಿದುಕೊಂಡು ಮುಂದೆ ನಡೆಯುವುದನ್ನು ಮುಂದುವರೆಸಿ ಆಕೆಯನ್ನು ಹಿಂದೆಯೇ ಬಿಟ್ಟು ಹೋಗಿದ್ದಾರೆ. ಈ ವರ್ತನೆಯಿಂದ ಮಹಿಳೆ ಮಳೆಯಲ್ಲಿ ಒದ್ದೆಯಾಗುತ್ತಾ ಮುಂದೆ ಸಾಗಿದ್ದಾರೆ.
Prime Minister Muhammad Shehbaz Sharif arrived at Palais Brogniart to attend the Summit for a New Global Financial Pact in Paris, France. #PMatIntFinanceMoot pic.twitter.com/DyV8kvXXqr
— Prime Minister's Office (@PakPMO) June 22, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.