ನವದೆಹಲಿ: ಬಿಪರ್ಜೋಯ್ನಂತಹ ಭೀಕರ ಚಂಡಮಾರುತ ಅಪ್ಪಳಿಸಿದರೂ ಗುಜರಾತ್ ಸರ್ಕಾರ ಕೈಗೊಂಡ ಮುನ್ನಚ್ಚರಿಕೆಯ ಕ್ರಮಗಳಿಂದಾಗಿ ಸಾವುನೋವು ಸಂಭವಿಸಿಲ್ಲ.ಚಂಡಮಾರುತಕ್ಕೂ ಮುನ್ನ ಒಂದು ಲಕ್ಷಕ್ಕೂ ಹೆಚ್ಚು ನಾಗರಿಕರನ್ನು ಅದು ಸ್ಥಳಾಂತರ ಮಾಡಿತ್ತು ಮತ್ತು ಈ ಸ್ಥಳಾಂತರವು ಇತಿಹಾಸದಲ್ಲಿ ಅತಿದೊಡ್ಡ ಸ್ಥಳಾಂತರಿಸುವಿಕೆಯಾಗಿದೆ ಎಂದು ಗುಜರಾತ್ ರಾಜ್ಯ ಪರಿಹಾರ ಆಯುಕ್ತ ಅಲೋಕ್ ಪಾಂಡೆ ಅವರು ಹೇಳಿದ್ದಾರೆ.
ಚಂಡಮಾರುತದ ಪರಿಣಾಮಗಳನ್ನು ಎದುರಿಸಲು ರಾಜ್ಯವನ್ನು ಸಜ್ಜುಗೊಳಿಸಲಾದ ಕಾರಣ ಯಾವುದೇ ಸಾವುನೋವುಗಳನ್ನು ವರದಿ ಆಗಿಲ್ಲ ಎಂದು ಅವರು ಹೇಳಿದ್ದಾರೆ.
ಗುಜರಾತ್ ಸರ್ಕಾರವು ಒಂದು ಲಕ್ಷಕ್ಕೂ ಹೆಚ್ಚು ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಗುಜರಾತ್ನ ಇತಿಹಾಸದಲ್ಲಿ ಇದು ಅತಿ ದೊಡ್ಡ ತೆರವು ಕಾರ್ಯಾಚರಣೆಯಾಗಿದೆ ಎಂದು ಅವರು ಹೇಳಿದರು. ಸುಮಾರು ಐದು ದಿನಗಳ ಕಾಲ ಪ್ರಕೃತಿ ವಿಕೋಪವನ್ನು ಎದುರಿಸಿದ ನಾವು ಇಂದು ಸಾವಿರಾರು ಜೀವಗಳನ್ನು ಉಳಿಸಲು ಸಾಧ್ಯವಾಗಿದೆ ಎಂದು ಪಾಂಡೆ ಹೇಳಿದರು.
ಚಂಡಮಾರುತದಿಂದ ಹಾನಿಗೊಳಗಾದ ಜಿಲ್ಲೆಗಳು ಆರ್ಥಿಕ ಮತ್ತು ಪರಿಸರ ಹಾನಿಯನ್ನು ಅನುಭವಿಸಿವೆ. ಆದರೆ ಅವು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತವೆ. ಚಂಡಮಾರುತದಿಂದಾಗಿ 1,137 ಮರಗಳು ಬಿದ್ದಿದ್ದು, 263 ರಸ್ತೆಗಳನ್ನು ಮುಚ್ಚಲಾಗಿದೆ. ಎಲ್ಲ ಮರಗಳನ್ನು ಕಡಿದು 260 ರಸ್ತೆಗಳು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇನ್ನುಳಿದ ಮೂರು ರಸ್ತೆಗಳ ಕಾಮಗಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಜೋರಾಗಿ ಬೀಸಿದ ಗಾಳಿಗೆ ಜಿಲ್ಲೆಯಾದ್ಯಂತ 5,120 ವಿದ್ಯುತ್ ಕಂಬಗಳು ಬಿದ್ದಿದ್ದು, 4,600 ಕ್ಕೂ ಹೆಚ್ಚು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಈ ಪೈಕಿ 3,580 ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಪಿಜಿವಿಸಿಎಲ್ ತಂಡಗಳು ನಿರಂತರ ಮಳೆಯ ನಡುವೆಯೂ ಉಳಿದ ಗ್ರಾಮಗಳಿಗೆ ವಿದ್ಯುತ್ ಪುನಃಸ್ಥಾಪಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ. ಹಾನಿಗೊಳಗಾದ ಜಿಲ್ಲೆಗಳಲ್ಲಿ 20 ಕಚ್ಚಾ ಮನೆಗಳು, 9 ಪಕ್ಕಾ ಮನೆಗಳು ಮತ್ತು ಸುಮಾರು 65 ಗುಡಿಸಲುಗಳು ಸಂಪೂರ್ಣವಾಗಿ ಕುಸಿದಿವೆ. 474 ಕಚ್ಚಾ ಮನೆಗಳು ಮತ್ತು 2 ಪಕ್ಕಾ ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.