ನವದೆಹಲಿ: ಹಲವು ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಇಂದು ನೂತನ ಸಂಸತ್ ಭವನವನ್ನು ಉದ್ಘಾಟಿಸಲಿದ್ದಾರೆ. ಈ ನಿಟ್ಟಿನಲ್ಲಿ ಇಂದು ಪೂಜಾ ಕೈಂಕರ್ಯಗಳು ನೆರವೇರಿದೆ. ಉದ್ಘಾಟನೆಗೆ ಮುನ್ನ, ಬ್ರಿಟಿಷರಿಂದ ಅಧಿಕಾರ ಹಸ್ತಾಂತರವನ್ನು ಸಂಕೇತಿಸುವ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಸ್ವೀಕರಿಸಿದ್ದ ತಮಿಳುನಾಡಿನ ಐತಿಹಾಸಿಕ ರಾಜದಂಡವಾದ ‘ಸೆಂಗೋಲ್’ ಅನ್ನು ಸ್ವೀಕರಿಸಿದರು ಮತ್ತು ಇದನ್ನು ವೇದ ಮಂತ್ರ ಉಚ್ಛಾರಣೆಗಳೊಂದಿಗೆ ನೂತನ ಸಂಸತ್ ಭವನದಲ್ಲಿ ಸೆಂಗೋಲ್ ಅನ್ನು ಪ್ರತಿಷ್ಠಾಪಿಸಿದರು. ಇದನ್ನು ಇದುವರೆಗೆ ಪ್ರಯಾಗರಾಜ್ನ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿತ್ತು.
ಹೊಸ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಗುರುತಿಸಲು, ಪ್ರಧಾನಿ ಮೋದಿ ಅವರು ಸ್ಮರಣಾರ್ಥ 75 ರೂಪಾಯಿ ನಾಣ್ಯವನ್ನು ಸಹ ಬಿಡುಗಡೆ ಮಾಡಲಿದ್ದಾರೆ. ಪ್ರಸ್ತುತ 12 ಧರ್ಮಗಳ ಮುಖಂಡರಿಂದ ಸರ್ವಧರ್ಮ ಪ್ರಾರ್ಥನೆ ನಡೆಯುತ್ತಿದೆ.
ಹೊಸ ಸಂಸತ್ತಿನ ಕಟ್ಟಡವು ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಪ್ರದರ್ಶಿಸಲು ಭವ್ಯವಾದ ಸಂವಿಧಾನ ಭವನವಾಗಿದೆ. ಇದು ಹಲವಾರು ವಿಶೇಷತೆಗಳನ್ನು ಹೊಂದಿದೆ .ಇದು ತ್ರಿಕೋನಾಕಾರದಲ್ಲಿ ಇದೆ. ಹಳೆಯ ಸಂಸತ್ ಭವನದ ಪಕ್ಕದಲ್ಲೇ ಹೊಸ ಸಂಸತ್ ಭವನವನ್ನ ನಿರ್ಮಾಣ ಮಾಡಲಾಗಿದೆ. ಈ ಹೊಸ ಕಟ್ಟಡ ಬರೋಬ್ಬರಿ 150 ವರ್ಷ ಬಾಳಿಕೆ ಬರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಭೂಕಂಪ ಆದರೂ ಯಾವುದೇ ರೀತಿ ಹಾನಿ ಆಗದ ರೀತಿಯಲ್ಲಿ ಈ ಕಟ್ಟಡವನ್ನ ವಿನ್ಯಾಸ ಮಾಡಲಾಗಿದೆ. ಹಳೆಯ ಕಟ್ಟಡದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕಡಿಮೆ ಸ್ಥಳಾವಕಾಶ ಇತ್ತು. ಆದರೆ, ಹೊಸ ಕಟ್ಟಡದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ವಿಶಾಲವಾಗಿವೆ. ಲೋಕಸಭೆಯಲ್ಲಿ 888 ಜನ ಕೂರುವಂತೆ ವಿನ್ಯಾಸ ಮಾಡಲಾಗಿದೆ. ರಾಜ್ಯಸಭೆಯಲ್ಲಿ 384 ಜನ ಕೂರಬಹುದಾಗಿದೆ. ಭವಿಷ್ಯದಲ್ಲಿ ಸಂಸದರ ಸಂಖ್ಯೆ ಹೆಚ್ಚಾದರೂ ಕೂಡಾ ಇಲ್ಲಿ ಸ್ಥಳಾವಕಾಶದ ಕೊರತೆ ಇರುವುದಿಲ್ಲ. ಜೊತೆಗೆ ಈ ಕಟ್ಟಡದಲ್ಲಿ ಸಂಟ್ರಲ್ ಹಾಲ್ ಇಲ್ಲ. ಜಂಟಿ ಅಧಿವೇಶನಕ್ಕಾಗಿ ಲೋಕಸಭೆಯಲ್ಲೇ 1,272 ಮಂದಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಬಹುದು. ಒಟ್ಟು 4 ಅಂತಸ್ತಿನ ಈ ಕಟ್ಟಡದಲ್ಲಿ ಸಚಿವರು, ಹಲವು ಕಮಿಟಿಗಳಿಗೂ ಕೋಣೆಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡದ ಒಳಗೆ ವಿಶಾಲ ಜಾಗ ಇದ್ದು ಇಲ್ಲಿ ಆಲ ಮರ ನೆಡುವ ಉದ್ದೇಶ ಇದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.