ನವದೆಹಲಿ: ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಸಂಸದರು ಸದನದಲ್ಲಿ ನಾಚಿಕೆಗೇಡಿನ ಕೃತ್ಯ ಎಸಗಿದ್ದಾರೆ. ಸ್ಪೀಕರ್ ಮೇಲೆ ಪೇಪರ್ ಎಸೆದು ಕುಚೋದ್ಯ ಮೆರೆದಿದ್ದಾರೆ. ಲೋಕಸಭೆಯಲ್ಲಿ ಕಲಾಪ ಆರಂಭವಾದ ಕೂಡಲೇ ಗದ್ದಲ ಏರ್ಪಟ್ಟಿತ್ತು, ಕಾಂಗ್ರೆಸ್ ಸಂಸದರ ಅಶಿಸ್ತಿನ ವರ್ತನೆಯಿಂದ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಮುಂದೂಡಿದರು.
ರಾಹುಲ್ ಗಾಂಧಿಯನ್ನು ಸದನದಿಂದ ಅಕ್ರಮವಾಗಿ ಅನರ್ಹಗೊಳಿಸಿರುವುದನ್ನು ವಿರೋಧಿಸಿ ವಿರೋಧ ಪಕ್ಷಗಳ ಸಂಸದರು ಸೋಮವಾರ ಸಂಸತ್ತಿನಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು. ಅದಾನಿ ಗ್ರೂಪ್ ವಿಷಯ ಮತ್ತು ರಾಹುಲ್ ಗಾಂಧಿ ಅವರ ಅನರ್ಹತೆಗೆ ವಿರೋಧ ಪಕ್ಷದ ಸಂಸದರು ಘೋಷಣೆಗಳನ್ನು ಕೂಗಿದರು.
ಲೋಕಸಭೆಯಲ್ಲಿ, ಸದನವು ದಿನದ ಸಭೆ ಸೇರುತ್ತಿದ್ದಂತೆ, ಕಪ್ಪು ಸ್ಕಾರ್ಫ್ ಧರಿಸಿದ ಕಾಂಗ್ರೆಸ್ ಸದಸ್ಯರು ಬಾವಿಗೆ ನುಗ್ಗಿದರು. ಬಾವಿಯಲ್ಲಿದ್ದ ಇಬ್ಬರು ಕಾಂಗ್ರೆಸ್ ಸದಸ್ಯರಾದ ಟಿಎನ್ ಪ್ರತಾಪನ್ ಮತ್ತು ಹೈಬಿ ಈಡನ್ ಅವರು ಫಲಕಗಳನ್ನು ಹಿಡಿದುಕೊಂಡು ಆದೇಶ ಪತ್ರಗಳನ್ನು ಸ್ಪೀಕರ್ ಕುರ್ಚಿಯತ್ತ ಎಸೆದರು. “ನಾನು ಸದನವನ್ನು ಘನತೆಯಿಂದ ನಡೆಸಲು ಬಯಸುತ್ತೇನೆ” ಎಂದು ಸ್ಪೀಕರ್ ಈ ಸಂದರ್ಭದಲ್ಲಿ ಹೇಳಿದ್ದಾರೆ.
ನಂತರ ರಾಜ್ಯಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರೆ, ಲೋಕಸಭೆಯನ್ನು 4 ಗಂಟೆಗೆ ಮುಂದೂಡಲಾಗಿದೆ.
ಇಂತಹ ಕೃತ್ಯಗಳ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಶೆಹಜಾದ್, ಇದು ಆಘಾತಕಾರಿ, ನಾಚಿಕೆಗೇಡು, ಅವಮಾನಕರ ಎಂದಿದ್ದಾರೆ. “ಕಾಂಗ್ರೆಸ್ ಪಾಳಯ ಸ್ಪೀಕರ್ ಮೇಲೆ ಪೇಪರ್ ಎಸೆದಿದೆ. ಪ್ರಜಾಪ್ರಭುತ್ವದ ದೇವಾಲಯವನ್ನು ಅಪವಿತ್ರಗೊಳಿಸಿದೆ. ತಾವು ಸಂಸತ್ತಿಗಿಂತ ಮೇಲಿದ್ದೇವೆ ಎಂದು ಗಾಂಧಿಯವರು ಭಾವಿಸುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಅವರು ನ್ಯಾಯಾಲಯಗಳಿಗಿಂತಲೂ ತಾನು ದೊಡ್ಡವ ಅಂದುಕೊಂಡಿದ್ದಾರೆ. OBC/ ಪಾರ್ಲಿಮೆಂಟ್/ ಭಾರತವನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂದು ಅಂದುಕೊಂಡಿದ್ದಾರೆ. ರಾಹುಲ್ ಗಾಂಧಿಗಾಗಿ ಪ್ರತ್ಯೇಕ ಕಾನೂನು ಬೇಕು ಮತ್ತು ಅವರು ಸಂಸತ್ತನ್ನು ಅಪವಿತ್ರಗೊಳಿಸಬಹುದು ಎಂದು ಕಾಂಗ್ರೆಸ್ಸಿಗರು ನಂಬುತ್ತಾರೆ. ಇನ್ನೊಂದೆಡೆ ಪ್ರಜಾಪ್ರಭುತ್ವ ಸತ್ತಿದೆ ಎಂದು ಹೇಳುತ್ತಾರೆ? ಪ್ರಜಾಪ್ರಭುತ್ವವನ್ನು ಕೊಂದವರು ಯಾರು?? ಕಾಂಗ್ರೆಸ್ ಪಕ್ಷದ ದುರಂಹಕಾರ ಎಂದಿದ್ದಾರೆ.
Shocking
Shameful
DisgracefulPapers thrown at Speaker from Congress camp / Opposition camp
Defiling the Temple of Democracy
IT IS CLEAR THAT GANDHIS FEEL THEY ARE ABOVE PARLIAMENT
THEY ARE ABOVE COURTS
THEY CAN ABUSE OBC/ PARLIAMENT/ INDIA
THEY WANT A SEPARATE LAW… pic.twitter.com/2V3WIo3kK8
— Shehzad Jai Hind (@Shehzad_Ind) March 27, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.