ತಿರುವನಂತಪುರಂ: ಕೇರಳದ ದೇಗುಲವೊಂದಕ್ಕೆ ಪಾಕಿಸ್ಥಾನದ ಧ್ವಜದ ಬಣ್ಣಗಳನ್ನು ಬಳಿದ ಘಟನೆ ನಡೆದಿದ್ದು, ಇದಕ್ಕೆ ಬಾರೀ ಆಕ್ರೋಶಗಳು ವ್ಯಕ್ತವಾದ ಬಳಿಕ ಬಣ್ಣವನ್ನು ಬದಲಾವಣೆ ಮಾಡಲಾಗಿದೆ.
ಮಲಪ್ಪುರಂನ ಅಂಗಡಿಪುರಂನಲ್ಲಿರುವ ತಿರುಮಂಧಮಕುನ್ನು ದೇವಸ್ಥಾನದ ಹಿಂದೂಯೇತರ ನೇತೃತ್ವದ ಉತ್ಸವ ಸಮಿತಿಯು ಪೂರಂ ಹಬ್ಬಕ್ಕೆ ಮುಂಚಿತವಾಗಿ ದೇವಾಲಯಕ್ಕೆ ಪಾಕಿಸ್ತಾನಿ ಧ್ವಜದ ಬಣ್ಣವಾದ ಹಸಿರು ಮತ್ತು ಬಿಳಿ ಬಣ್ಣ ಬಳಿದಿದೆ. ಈ ಮೂಲಕ ದೇವಾಲಯ ಮಸೀದಿಯಂತೆ ಕಾಣುವಂತೆ ಮಾಡಿದೆ.
ಕೆಲ ತಿಂಗಳ ಹಿಂದೆ ಕೇರಳ ಸರ್ಕಾರ ವೆಳ್ಳಾಯಣಿ ಭದ್ರಕಾಳಿ ದೇವಸ್ಥಾನಕ್ಕೆ ಕೇಸರಿ ಬಣ್ಣ ಬಳಸುವುದನ್ನು ನಿಷೇಧಿಸಿದ ಘಟನೆ ನಡೆದ ಬಳಿಕ ದೇಗುಲಕ್ಕೆ ಹಸಿರು ಬಣ್ಣ ಬಳಸಿರುವುದು ಸಹಜವಾಗಿಯೇ ಜನರನ್ನು ಆಕ್ರೋಶಕ್ಕೀಡು ಮಾಡಿದೆ.
ಕೆಲವರು ಈ ವಿಷಯದ ಬಗ್ಗೆ ದೂರಿದ ನಂತರ ಬೆಳವಣಿಗೆಯು ಮಾಧ್ಯಮಗಳ ಮುಂದೆ ಬಂದಿದೆ.
ಈ ದೇವಾಲಯವು ಮುಸ್ಲಿಂ ಬಹುಸಂಖ್ಯಾತ ಮಲಪ್ಪುರಂ ಜಿಲ್ಲೆಯಲ್ಲಿದೆ ಮತ್ತು ಇದರ ಉತ್ಸವ ಸಮಿತಿಯ 14 ಸದಸ್ಯರಲ್ಲಿ ಐವರು ಮುಸ್ಲಿಮರು. ಸಮಿತಿಯಲ್ಲಿನ ಮೊದಲ ಹೆಸರು ಮುಸ್ಲಿಂ ಲೀಗ್ ನಾಯಕ ಮತ್ತು ಸಂಸದ ಅಬ್ದುಲ್ ಸಮದ್ ಸಮದಾನಿ ಅವರದ್ದು. ಸಮಿತಿಯ ಅಧ್ಯಕ್ಷ ಶಾಸಕ ಮಂಜಲಂಕುಜಿ ಅಲಿ. ಸಮಿತಿಯ ಉಪಾಧ್ಯಕ್ಷರಲ್ಲಿ ಒಬ್ಬರು ಕ್ರಿಶ್ಚಿಯನ್ ಎಂದು ವರದಿಗಳು ತಿಳಿಸಿವೆ.
ಈ ಬೆಳವಣಿಗೆಯ ನಂತರ, ಹಿಂದೂ ಐಕ್ಯ ವೇದಿಕೆ (HAV) ಮತ್ತು ಇತರ ದೇವಾಲಯದ ಸಂಘಟನೆಗಳು ಬಣ್ಣವನ್ನು ಬದಲಾಯಿಸುವಂತೆ ಕೋರಿ ದೇವಾಲಯ ಸಮಿತಿಯ ಮುಂದೆ ಜ್ಞಾಪಕ ಪತ್ರವನ್ನು ಸಲ್ಲಿಸಿದವು. ದೇವಾಲಯದ ಸಮಿತಿಯು ಮಣಿದು ನಂತರ ಬಣ್ಣವನ್ನು ಬದಲಾಯಿಸಲು ಸಮಿತಿ ಒಪ್ಪಿಕೊಂಡಿದೆ.
Addition to the thread (Adding a name missed out earlier)
1) MP Abdussamad Samadani
2) Ms. Rafeeqa
3) Ms. Shaharban
4) Ms. Saeeda teacher
5) Mr. Abutahir
6) Mr. Manjalamkuzhi Ali MLA
7) Ms Saleela
8) Mr. Jose Varghese
Non-Hindus in the temple festival committee – 8 pic.twitter.com/Dzbw7hjWHU— Anand #IndianfromSouth (@Bharatiyan108) March 19, 2023
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.