ನ್ಯೂಯಾರ್ಕ್: ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಯಾದ ಟ್ವಿಟರ್ ಉದ್ಯೋಗ ಕಡಿತದ ಪ್ರಕ್ರಿಯೆಯನ್ನು ಮುಂದುವರೆಸಿದೆ. ಮತ್ತೆ ಸುಮಾರು 200 ಉದ್ಯೋಗಿಗಳನ್ನು ಅದು ಕೆಲಸದಿಂದ ವಜಾ ಮಾಡಿದೆ.
ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, 200 ಉದ್ಯೋಗಿಗಳನ್ನು ಟ್ವಿಟರ್ ವಜಾ ಮಾಡಿದೆ. ಶನಿವಾರ ರಾತ್ರಿ ಕಾರ್ಪೊರೇಟ್, ಇಮೇಲ್ ಲ್ಯಾಪ್ಟಾಪ್ಗಳು ಇದಕ್ಕಿದ್ದಂತೆ ಲಾಗ್ ಔಟ್ ಆಗುವ ಮೂಲಕ ಉದ್ಯೋಗಿಗಳಿಗೆ ಉದ್ಯೋಗ ಕಡಿತದ ಸೂಚನೆ ದೊರೆಯಿತು. ಭಾನುವಾರ ಬೆಳಿಗ್ಗೆ ಉದ್ಯೋಗ ಕಡಿತದ ಮಾಹಿತಿ ಸ್ಪಷ್ಟವಾಗಿದೆ. ಉದ್ಯೋಗ ಕಳೆದುಕೊಂಡ ಹಲವಾರು ಮಂದಿ ಟ್ವಿಟರ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಟ್ವಿಟರ್ ಸಂಸ್ಥೆಯನ್ನು ಕಳೆದ ಅಕ್ಟೋಬರ್ನಲ್ಲಿ ಎಲೋನ್ ಮಸ್ಕ್ ಅವರು ಖರೀದಿ ಮಾಡಿದ ಬಳಿಕ ಖರ್ಚು ವೆಚ್ಚವನ್ನು ತಗ್ಗಿಸುವ ಸಲುವಾಗಿ ಉದ್ಯೋಗ ಕಡಿತ ಪ್ರಕ್ರಿಯೆ ಆರಂಭಿಸಿದ್ದರು.
ಕಳೆದ ವಾರ ಆಂತರಿಕ ಸಂದೇಶ ಸೇವೆ ಸ್ಲ್ಯಾಕ್ ಅನ್ನು ಸ್ಥಗಿತಗೊಳಿಸಿ ಉದ್ಯೋಗಿಗಳು ಪರಸ್ಪರ ಸಂಪರ್ಕ ಸಾಧಿಸುವುದಕ್ಕೆ ಟ್ವಿಟರ್ ತಡೆ ಹಾಕಿತ್ತು. ಅದಾದ ನಂತರ ಇದೀಗ 200 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.
ವರದಿಗಳ ಪ್ರಕಾರ ಮಿಷಿನ್ ಲರ್ನಿಂಗ್ ಮತ್ತು ಸೈಟ್ ರಿಲಯಬಿಲಿಟಿ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಪ್ರಾಡಕ್ಟ್ ಮ್ಯಾನೇಜರ್ಗಳು, ಡೇಟಾ ಸೈಂಟಿಸ್ಟ್ ಮತ್ತು ಇಂಜಿನಿಯರ್ಗಳ ಉದ್ಯೋಗವನ್ನು ಕಡಿತ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.