ಡಮಾಸ್ಕಸ್: ಟರ್ಕಿ ಮತ್ತು ಸಿರಿಯಾದಲ್ಲಿ ಸಾವಿನ ಸಂಖ್ಯೆ 41,000 ಕ್ಕೆ ಏರಿದೆ. ಮಾಧ್ಯಮ ವರದಿಗಳ ಪ್ರಕಾರ, ಅನೇಕ ಬದುಕುಳಿದವರು ತೀವ್ರ ಚಳಿಗೆ ಅಸ್ವಸ್ಥರಾಗುತ್ತಿದ್ದಾರೆ. ಎರಡೂ ದೇಶಗಳಲ್ಲಿನ ನಗರಗಳ ಅಪಾರ ಸಂಖ್ಯೆಯ ಜನರು ವಿನಾಶದಿಂದ ನಿರಾಶ್ರಿತರಾಗಿದ್ದಾರೆ.
ಭೂಕಂಪಗಳಿಂದ ಹಾನಿಗೊಳಗಾದ ಪ್ರದೇಶದ ನೈರ್ಮಲ್ಯದ ಬಗ್ಗೆ ಕಳವಳ ಹೆಚ್ಚಾಗುತ್ತಿದೆ. ಸೋಂಕು ಕಾಣಿಸಿಕೊಳ್ಳುವ ಭೀತಿ ಆವರಿಸಿದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಯನ್ನು ಬದುಕುಳಿದವರನ್ನು ಬೆಂಬಲಿಸಲು ಮತ್ತು ನೈರ್ಮಲ್ಯ ಕಾಪಾಡುವಿಕೆಯತ್ತ ತಿರುಗಿಸಲಾಗಿದೆ. ಜನರು ರೋಗ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಅಧಿಕಾರಿಗಳು ಶ್ರಮವಹಿಸುತ್ತಿದ್ದಾರೆ.
ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಮಾತನಾಡಿ, ಹತ್ತಾರು ಸಾವಿರ ಕಟ್ಟಡಗಳ ಹಾನಿಯ ಮೌಲ್ಯಮಾಪನವನ್ನು ಒಂದು ವಾರದಲ್ಲಿ ಪೂರ್ಣಗೊಳಿಸಲಾಗುವುದು ಮತ್ತು ತಿಂಗಳೊಳಗೆ ಪುನರ್ನಿರ್ಮಾಣವನ್ನು ಪ್ರಾರಂಭಿಸಲಾಗುವುದು ಎಂದಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಭೂಕಂ ಪೀಡಿತ ಪ್ರದೇಶದ ಜನರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಇದು ವಿಶೇಷವಾಗಿ ವಾಯುವ್ಯ ಸಿರಿಯಾದ ಜನರ ಕಲ್ಯಾಣದ ಬಗ್ಗೆ ಕಾಳಜಿ ವಹಿಸಿದೆ. ಈ ಪ್ರದೇಶ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶವಾಗಿದೆ. ಹೀಗಾಗಿ ಜನರಿಗೆ ನೆರವು ನೀಡಲು ಟರ್ಕಿಯೊಂದಿಗೆ ಗಡಿ ದಾಟುವ ಸ್ಥಳಗಳನ್ನು ತೆರೆಯಲು ಸಿರಿಯನ್ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅವರನ್ನು ಕೇಳಿದೆ. ಗಡಿಯಾಚೆ, ಸಿರಿಯಾದಲ್ಲಿ ಅಂತರ್ಯುದ್ಧದಿಂದಾಗಿ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಒಟ್ಟಿನಲ್ಲಿ ಎರಡೂ ದೇಶಗಳಲ್ಲಿ ಭೂಕಂಪದಿಂದಾದ ನಷ್ಟ ಊಹೆಗೂ ನಿಲುಕದ್ದಾಗಿದ್ದು, ಅಲ್ಲಿನ ಜನರ ಭವಿಷ್ಯ ಅಯೋಮಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.