News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೈಲ್ ಕೌಶಲ್ ವಿಕಾಸ್ ಯೋಜನೆಯಡಿ 15,665 ಅಭ್ಯರ್ಥಿಗಳಿಗೆ ತರಬೇತಿ

ನವದೆಹಲಿ: ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವಾದ ರೈಲ್ ಕೌಶಲ್ ವಿಕಾಸ್ ಯೋಜನೆ ಅಡಿಯಲ್ಲಿಇದುವರೆಗೆ 23,181 ಅಭ್ಯರ್ಥಿಗಳು ನೋಂದಣಿಯಾಗಿದ್ದಾರೆ ಮತ್ತು 15,665 ಅಭ್ಯರ್ಥಿಗಳು ತಮ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಭಾರತೀಯ ರೈಲ್ವೇಯು ಯುವಕರ ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಹೆಚ್ಚಿಸಲು ವಿವಿಧ ವಿಭಾಗಗಳಲ್ಲಿ ತಾಂತ್ರಿಕ ತರಬೇತಿಯನ್ನು ನೀಡುತ್ತಿದೆ.

ರೈಲ್ವೇ ತರಬೇತಿ ಸಂಸ್ಥೆಗಳಲ್ಲಿ ಯುವಜನರಿಗೆ ಪ್ರವೇಶ ಮಟ್ಟದ ಕೌಶಲ್ಯ ತರಬೇತಿಯನ್ನು ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸಲು, ಭಾರತೀಯ ರೈಲ್ವೇಯಲ್ಲಿ “ರೈಲ್ ಕೌಶಲ್ ವಿಕಾಸ್ ಯೋಜನೆ” (RKVY) ಆರಂಭಿಸಲಾಗಿದೆ.

ವಾರಣಾಸಿಯಲ್ಲಿರುವ ಬನಾರಸ್ ಲೋಕೋ ವರ್ಕ್ಸ್ ಅನ್ನು RKVY ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಸಂಘಟಿಸಲು ನೋಡಲ್ ಉತ್ಪಾದನಾ ಘಟಕವಾಗಿ ನಾಮನಿರ್ದೇಶನ ಮಾಡಲಾಗಿದೆ.

ತರಬೇತಿಯು ಪ್ಯಾನ್-ಇಂಡಿಯಾ ಆಧಾರದ ಮೇಲೆ ಸೆಪ್ಟೆಂಬರ್, 2021 ರಲ್ಲಿ ಪ್ರಾರಂಭವಾಗಿದ್ದು, ಇಲ್ಲಿಯವರೆಗೆ, RKVY ಅಡಿಯಲ್ಲಿ 23,181 ಅಭ್ಯರ್ಥಿಗಳು ದಾಖಲಾಗಿದ್ದಾರೆ ಮತ್ತು 15,665 ಅಭ್ಯರ್ಥಿಗಳು ತಮ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಯೋಜನೆಯಡಿಯಲ್ಲಿ, 14 ಉದ್ಯಮ ಸಂಬಂಧಿತ ತಾಂತ್ರಿಕ ವಿಭಾಗಗಳಾದ ಎಲೆಕ್ಟ್ರಿಷಿಯನ್, ವೆಲ್ಡರ್, ಮೆಷಿನಿಸ್ಟ್, ಫಿಟ್ಟರ್ ಇತ್ಯಾದಿಗಳಲ್ಲಿ ತರಬೇತಿಯನ್ನು 94 ತರಬೇತಿ ಸ್ಥಳಗಳಲ್ಲಿ ನೀಡಲಾಗುತ್ತಿದೆ.

ದೇಶದ ಯಾವುದೇ ಭಾಗದ ಅಭ್ಯರ್ಥಿಗಳು ಈ ತರಬೇತಿಗೆ ಸೇರಬಹುದು. ಅಭ್ಯರ್ಥಿಗಳಿಗೆ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ. RKVY ಮೇಲ್ವಿಚಾರಣೆಗಾಗಿ  ವೆಬ್‌ಸೈಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಯೋಜನೆಯಡಿ ಉದ್ಯೋಗ ನೀಡುವ ಯಾವುದೇ ಅವಕಾಶವಿಲ್ಲ. ಆದರೆ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವು ನಿರುದ್ಯೋಗಿ ಯುವಕರ ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top