ಕೊಲಂಬೋ: ರಾಮಾಯಣ ಮಹಾಕಾವ್ಯಕ್ಕೆ ಸಂಬಂಧಿಸಿದ 50 ತಾಣಗಳನ್ನು ಶ್ರೀಲಂಕಾ ಗುರುತಿಸಿದ್ದು, ಮುಖ್ಯವಾಗಿ ಭಾರತವನ್ನು ಗುರಿಯಾಗಿಟ್ಟುಕೊಂಡು ಶ್ರೀಲಂಕಾದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇವುಗಳನ್ನು ಬಳಸಲು ಅದು ಮುಂದಾಗಿದೆ. ಬೌದ್ಧ ಪ್ರವಾಸೋದ್ಯಮದೊಂದಿಗೆ ಹಿಂದೂ ಪ್ರವಾಸೋದ್ಯಮ ಉತ್ತೇಜಿಸುವ ಗುರಿಯನ್ನು ಅದು ಹೊಂದಿದೆ ಎಂದು ಹೇಳಲಾಗಿದೆ.
ಈ ದ್ವೀಪ ರಾಷ್ಟ್ರವು ತಾನು ಅನುಭವಿಸುತ್ತಿರುವ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪ್ರವಾಸೋದ್ಯಮ ವಲಯವನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ನಾವು ದೇಶದಲ್ಲಿ 50 ರಾಮಾಯಣ ಸ್ಥಳಗಳನ್ನು ಗುರುತಿಸಿದ್ದೇವೆ ಮತ್ತು ನಾವು ಅದನ್ನು ಭಾರತದಲ್ಲಿ ಪ್ರಚಾರ ಮಾಡುತ್ತಿದ್ದೇವೆ ಮತ್ತು ನಾವು ಯುಕೆ, ಫ್ರಾನ್ಸ್, ಕೆನಡಾ ಮತ್ತು ದಕ್ಷಿಣ ಆಫ್ರಿಕಾ ಜನರನ್ನು ಸೆಳೆಯುವ ಗುರಿಯನ್ನೂ ಹೊಂದಿದ್ದೇವೆ” ಎಂದು ಶ್ರೀಲಂಕಾ ಪ್ರವಾಸೋದ್ಯಮ ಪ್ರಚಾರದ ಸಹಾಯಕ ನಿರ್ದೇಶಕ ಜೀವನಾ ಫೆರ್ನಾಂಡೋ ತಿಳಿಸಿದ್ದಾರೆ.
“ನಾವು ನಮ್ಮ ಉತ್ಪನ್ನ ವೈವಿಧ್ಯತೆಯನ್ನು ಪರಿಗಣಿಸಿದಾಗ ಭಾರತದಲ್ಲಿ ಮತ್ತು ಇತರ ಬೌದ್ಧ ದೇಶಗಳ ಯಾತ್ರಾರ್ಥಿಗಳನ್ನು ಆಕರ್ಷಿಸುವ ಹಲವು ವೈವಿಧ್ಯತೆ ನಮ್ಮಲ್ಲಿ ಇದೆ” ಎಂದಿದ್ದಾರೆ.
ಇದುವರೆಗೆ ಭಾರತದಿಂದ 13,759 ಪ್ರವಾಸಿಗರು ಜನವರಿ 2023 ರಲ್ಲಿ ಶ್ರೀಲಂಕಾಕ್ಕೆ ಭೇಟಿ ನೀಡಿದ್ದಾರೆ, ಇದು ಶ್ರೀಲಂಕಾದ ಪ್ರವಾಸೋದ್ಯಮಕ್ಕೆ ಅತಿದೊಡ್ಡ ಮಾರುಕಟ್ಟೆಯಾಗಿದೆ.
“ಕಳೆದ ವರ್ಷ ಮತ್ತು ಹಿಂದಿನ ವರ್ಷ ನಾವು ರಾಮಾಯಣ ಪ್ರವಾಸೋದ್ಯಮಕ್ಕಾಗಿ ಭಾರತದಲ್ಲಿ ಹಲವಾರು ಪ್ರಚಾರಗಳನ್ನು ಮಾಡಿದ್ದೇವೆ. ಬೌದ್ಧ ಧರ್ಮ ಪ್ರಚಾರಕ್ಕಾಗಿ ನಾವು ಕ್ಯಾಂಡಿ ಎಸಲಾ ಪೆರೆಹೆರಾ (ಬೌದ್ಧರಿಗೆ ಸಂಬಂಧಿಸಿದ ಉತ್ಸವ) ವನ್ನು 7 ಭಾಷೆಗಳಲ್ಲಿ ಲೈವ್ ಸ್ಟ್ರೀಮ್ ಮಾಡಿದ್ದೇವೆ” ಎಂದಿದ್ದಾರೆ.
“ಈ ವರ್ಷ ಇದು 20 ವಿದೇಶಿ ಭಾಷೆಗಳಲ್ಲಿ ಲೈವ್ ಸ್ಟ್ರೀಮಿಂಗ್ ಆಗುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.