ಬೆಂಗಳೂರು: ಆರ್ಥಿಕ ಸ್ವಾವಲಂಬನೆಯ ಉದ್ದೇಶದೊಂದಿಗೆ ಕಳೆದ 31 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸ್ವದೇಶಿ ಜಾಗರಣ ಮಂಚ್ ಜನವರಿ 4 ರಿಂದ 8, 2023 ತನಕ ಬೆಂಗಳೂರಿನ ದಾಸರಹಳ್ಳಿಯ ಬಾಗಲಗುಂಟೆ ಸಮೀಪದದಲ್ಲಿರುವ ಎಂಇಐ ಆಟದ ಮೈದಾನದಲ್ಲಿ ಸ್ವಾವಂಬನೆ ಪರಿಕಲ್ಪನೆಯ ಸ್ವದೇಶಿ ಮೇಳವನ್ನು ಆಯೋಜಿಸಿದೆ.
ದೇಶೀಯ ಉತ್ಪಾದಕರಿಗೆ ಮಾರುಕಟ್ಟೆಯನ್ನು ಒದಗಿಸುವುದು, ನಮ್ಮ ದೇಶದ ಜನರಿಗೆ ದೇಶದ ಉತ್ಪನ್ನಗಳನ್ನು ಪರಿಚಯಿಸುವುದು ಈ ಸ್ವದೇಶಿ ಮೇಳದ ಮುಖ್ಯ ಉದ್ದೇಶ. ಸ್ಥಳೀಯ ಉತ್ಪನ್ನಗಳನ್ನು ಉತ್ಪಾದಿಸುವ ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಅವರ ಉತ್ಪನ್ನಗಳಿಗೆ ಬ್ರಾಂಡ್ ನೀಡುವ ವ್ಯವಸ್ಥೆ ಈ ಮೇಳದಲ್ಲಿ ನಡೆಯಲಿದೆ.
ಈ ಸ್ವದೇಶಿ ಮೇಳದಲ್ಲಿ 250ಕ್ಕು ಹೆಚ್ಚು ಸಣ್ಣ ಸಣ್ಣ ಉತ್ಪಾದಕರು, ಗುಡಿ ಕೈಗಾರಿಗಳನ್ನು ನಡೆಸುವವರು ತಮ್ಮ ಉತ್ಪನ್ನಗಳನ್ನು ಇಲ್ಲಿ ಮಾರಾಟಮಾಡುತ್ತಾ. ಆ ಮೂಲಕ ತಮ್ಮ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಯನ್ನು ಪಡೆಯುತ್ತಾರೆ. ಇದರಿಂದ ಹೊಸ ಉದ್ಯೋಗ ಸೃಷ್ಠಿಯಾಗುತ್ತದೆ. ಹಾಗಾಗಿ ಸ್ವದೇಶಿ ಮೇಳ ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆಯನ್ನು ನೀಡುತ್ತಿದೆ.
5 ದಿನಗಳ ಈ ಸ್ವದೇಶಿ ಮೇಳದಲ್ಲಿ ವಿವಿಧ ರೀತಿಯ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು, ತರಬೇತಿ ಶಿಬಿರಗಳು, ವಿವಿಧ ಸ್ಪರ್ಧೆಗಳು ನಡೆಯಲಿದೆ. ಜನವರಿ 4ರ ಬುದವಾರ ಸಂಜೆ 5.30 ಕ್ಕೆ ಈ ಮೇಳದ ಉದ್ಘಾಟನೆಯನ್ನು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಎಸ್ ಬೊಮ್ಮಾಯಿಯವರು ಉದ್ಘಾಟಿಸಲಿದ್ದಾರೆ. ಆದಿಚುಂಚನಗಿರಿಯ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಪರಮಪೂಜ್ಯನಿಯ ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಉತ್ತರ ಕ್ಷೇತ್ರದ ಮಾನ್ಯ ಸಂಸದರಾದ ಮತ್ತು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮ್ಮೇಳನದ ವಿಶೇಷ :
ಸುಮಾರು 270 ಕ್ಕೂ ಅಧಿಕ ಮಳಿಗೆಗಳ ಮೂಲಕ ಉತ್ಪಾದಕರು ತಮ್ಮ ವಿಭಿನ್ನ ಉತ್ಪನ್ನಗಳನ್ನು ಮಾರಾಡಮಾಡಲಿದ್ದಾರೆ. ಮತ್ತು 3 ಲಕ್ಷಕ್ಕು ಹೆಚ್ಚು ಸಾರ್ವಜನಿಕರು ಭಾಗವಹಿಸಲಿದ್ದಾರೆ.
• ರಾಜ್ಯದ ವಿವಿಧ ಪ್ರದೇಶಗಳ ಆಹಾರಗಳನ್ನು ಪರಿಚಿಸುವ ಆಹಾರಮೇಳವನ್ನೂ ಇಲ್ಲಿ ಆಯೋಜಿಸಲಾಗಿದೆ.
• ಯಾವುದೇ ಪ್ಲಾಸ್ಟಿಕ್ ಬಳಕೆಯನ್ನು ಮಾಡದೆ ಪರಸರ ಸ್ನೇಹಿ ಮೇಳ ನಡೆಯಲಿದೆ.
• ಆಹಾರಮೇಳ ಸೇರಿದಂತೆ ಯಾವುದೇ ಮಳಿಗೆಯಲ್ಲಿ ಸ್ಟೀಲ್ ತಟ್ಟೆ, ಲೋಟಗಳನ್ನು ಬಳಸಿ ಶೂನ್ಯ ಕಸದ ವ್ಯವಸ್ಥೆ ಇರಲಿದೆ
• ಮೇಳದಲ್ಲಿ ಗ್ರಾಮೀಣ ಸೊಗಡನ್ನು ಬಿಂಬಿಸುವ ಅನೇಕ ವಸ್ತುಗಳ ಪ್ರದರ್ಶನ
• ಪ್ರತೀ ದಿನ ಸಂಜೆ ವೈಚಾರಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
• ಸಮ್ಮೇಳನದಲ್ಲಿ ಭಾರತೀಯ ಪಾರಂಪರಿಕ ಉಡುಗೆಯಾದ ಸೀರೆ ಧರಿಸಿಕೊಂಡು ಬರುವ ಮಹಿಳೆಯರಿಗೆ ಲಕ್ಕಿಡಿಪ್ ಮುಖಾಂತರ ಸೌಭಾಗ್ಯವತಿ ಉಡುಗೊರೆ
• ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.