News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

2024 ರ ವೇಳೆಗೆ ಭಾರತದ ರಸ್ತೆಗಳು ಅಮೆರಿಕಾದ ಗುಣಮಟ್ಟ ಹೊಂದಲಿದೆ: ಗಡ್ಕರಿ

ನವದೆಹಲಿ: 2024 ರ ಅಂತ್ಯದ ವೇಳೆಗೆ ಭಾರತದ ರಸ್ತೆ ಮೂಲಸೌಕರ್ಯವು ಅಮೆರಿಕಾದ ಗುಣಮಟ್ಟವನ್ನು ತಲುಪಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

95 ನೇ FICCI ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, “ಭಾರತ ವಿಶ್ವದರ್ಜೆಯ ರಸ್ತೆ ಮೂಲಸೌಕರ್ಯಗಳನ್ನು ನಿಮಾಣ ಮಾಡುತ್ತಿದೆ ಮತ್ತು ಅದರ ರಸ್ತೆ ಮೂಲಸೌಕರ್ಯವು 2024ರ ವೇಳೆಗೆ  ಅಮೇರಿಕನ್ ಮಾನದಂಡಗಳ ಗುಣಮಟ್ಟಕ್ಕೆ ಸಮನಾಗಿರುತ್ತದೆ” ಎಂದಿದ್ದಾರೆ.

ಹಸಿರು ಜಲಜನಕದ ಬಳಕೆಯ ಮೂಲಕ ಜಾಗತಿಕ ಇಂಧನ ರಫ್ತುದಾರನಾಗುವ ಭಾರತದ ಸಾಮರ್ಥ್ಯವನ್ನು ಒತ್ತಿ ಹೇಳಿದ ಗಡ್ಕರಿ, ಹಸಿರು ಜಲಜನಕವನ್ನು ಭವಿಷ್ಯದ ಇಂಧನ ಎಂದು ಕರೆದರು.

ಭಾರತವು ಇಂಧನ ರಫ್ತುದಾರನಾಗಿ ರೂಪುಗೊಳ್ಳುವ ಅತ್ಯುತ್ತಮ ಸ್ಥಾನದಲ್ಲಿದೆ ಮತ್ತು ಹಸಿರು ಹೈಡ್ರೋಜನ್ ವಾಯುಯಾನ, ರೈಲ್ವೆ, ರಸ್ತೆ ಸಾರಿಗೆ, ರಾಸಾಯನಿಕ ಮತ್ತು ರಸಗೊಬ್ಬರ ಉದ್ಯಮಗಳಲ್ಲಿ ಶಕ್ತಿಯ ಮೂಲವಾಗಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಹೇಳಿದರು.

 ಭವಿಷ್ಯದಲ್ಲಿ ವಿದ್ಯುತ್ ಚಲನಶೀಲತೆಯ ಪ್ರಾಮುಖ್ಯತೆಯ  ಬಗ್ಗೆ ಮಾತನಾಡಿದ ಅವರು, 2030 ರ ವೇಳೆಗೆ ಅತ್ಯಂತ ಪರಿಣಾಮಕಾರಿ ಸಾರಿಗೆ ವ್ಯವಸ್ಥೆಯಾಗಲಿ ಎಂದು ಹೇಳಿದರು. 100% ಬಯೋಇಥೆನಾಲ್ ಮತ್ತು 40% ವಿದ್ಯುಚ್ಛಕ್ತಿಯಲ್ಲಿ ಚಲಿಸಬಲ್ಲ ಫ್ಲೆಕ್ಸ್-ಇಂಧನದ ಕಾರುಗಳಂತಹ ಆಟೋಮೊಬೈಲ್‌ಗಳ ಪರ್ಯಾಯಗಳನ್ನು ಬಳಸುವ ಮೂಲಕ ಭಾರತ ಇಂಧನ ಪರಿಹಾರಗಳ ಅಭಿವೃದ್ಧಿಯ  ಕ್ಷೇತ್ರವನ್ನು ಮುನ್ನಡೆಸುವ  ಸಾಮರ್ಥ್ಯವನ್ನು ಹೊಂದಲಿದೆ ಎಂದರು.

ಪ್ರಸ್ತುತ ರೂ 7.5 ಲಕ್ಷ ಕೋಟಿ ಮೌಲ್ಯದ ದೇಶದ ಆಟೋಮೊಬೈಲ್ ಉದ್ಯಮವು ರೂ 15 ಲಕ್ಷ ಕೋಟಿಗಳನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ, ಇದು ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಭಾರತವನ್ನು ವಿಶ್ವದ ಅತಿದೊಡ್ಡ ಆಟೋಮೊಬೈಲ್ ತಯಾರಕರಲ್ಲಿ ಒಂದನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top