ನವದೆಹಲಿ: ಮೇಘಾಲಯದ ವೆಸ್ಟ್ ಗಾರೋ ಹಿಲ್ಸ್ ಜಿಲ್ಲೆಯ ಜೆಂಗ್ಜಾಲ್ ಉಪವಿಭಾಗೀಯ ಆಸ್ಪತ್ರೆಯಲ್ಲಿ ಔಷಧಗಳನ್ನು ಸಾಗಿಸಲು ಭಾರತದ ಮೊದಲ ಡ್ರೋನ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇಲ್ಲಿಂದ ಮೊದಲ ಬಾರಿಗೆ ವರ್ಟಿಪ್ಲೇನ್ X3 ಡ್ರೋನ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 1.5 ಕೆಜಿ ಔಷಧಿಗಳನ್ನು ತಲುಪಿಸಿದ್ದು, ಇದಕ್ಕಾಗಿ 36 ನಿಮಿಷಗಳನ್ನು ತೆಗೆದುಕೊಂಡಿತು.
ಡ್ರೋನ್ ಸ್ಟಾರ್ಟ್-ಅಪ್ ವಿನ್ಯಾಸಗೊಳಿಸಿದ ಸರ್ಟಿಪ್ಲೇನ್ X3, ಪೆಡಲ್ಡೋಬಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸರಕನ್ನು ತಲುಪಿಸಲು 36 ನಿಮಿಷಗಳನ್ನು ತೆಗೆದುಕೊಂಡಿತು, ಇದು ರಸ್ತೆ ಮಾರ್ಗಕ್ಕಿಂತ ಸುಮಾರು 2 ಗಂಟೆಗಳ ಕಡಿಮೆ ಸಮಯವನ್ನು ತೆಗೆದುಕೊಂಡಿದೆ.
“ಈ ಡ್ರೋನ್ 4 ಕೆಜಿಯವರೆಗಿನ ಪೇಲೋಡ್ನೊಂದಿಗೆ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಮಾರ್ಚ್ 2023 ರ ವೇಳೆಗೆ 25 ಕೆಜಿ ಔಷಧಿಗಳು, ಹಾವಿನ ವಿಷ ತೆಗೆಯಲು ಬಳಸುವ ವೈದ್ಯಕೀಯ ವಸ್ತುಗಳನ್ನು ಮತ್ತು ಇತರ ಆರೋಗ್ಯ ಅಗತ್ಯತೆಗಳನ್ನು ತಲುಪಿಸಲು ನಾವು ದೊಡ್ಡ ಡ್ರೋನ್ಗಳನ್ನು ನಿರೀಕ್ಷಿಸುತ್ತೇವೆ” ಎಂದು ಮೇಘಾಲಯ ಹೆಲ್ತ್ ಸಿಸ್ಟಮ್ಸ್ ಸ್ಟ್ರೆಂಥನಿಂಗ್ ಪ್ರಾಜೆಕ್ಟ್ನ ಯೋಜನಾ ನಿರ್ದೇಶಕ ರಾಮ್ಕುಮಾರ್ ಎಸ್ ತಿಳಿಸಿದ್ದಾರೆ.
ಹೆಚ್ಚಿನ ಸಾಮರ್ಥ್ಯದ ಡ್ರೋನ್ಗಳು ದೂರದ ಪ್ರದೇಶಗಳಲ್ಲಿನ ರೈತರಿಗೆ ವಾಯು ಸಾರಿಗೆಯನ್ನು ಹೆಚ್ಚಿಸುವ ಯೋಜನೆಗಳನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರಕ್ಕೆ ಸಹಾಯ ಮಾಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.