ನವದೆಹಲಿ: ಮುಂಬರುವ ಎರಡು ವರ್ಷಗಳಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಬಿಸಿನೆಸ್ ಪ್ರೊಸೆಸಿಂಗ್ (ಬಿಪಿಒ) ವಲಯದಲ್ಲಿ 10 ಮಿಲಿಯನ್ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಲಿದೆ. ದೇಶದಲ್ಲಿ ಸ್ಟಾರ್ಟ್-ಅಪ್ ಕ್ಷೇತ್ರವು ಪ್ರಗತಿ ಸಾಧಿಸುತ್ತಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಬುಧವಾರ ರಾಷ್ಟ್ರೀಯ ಮಟ್ಟದ ಸ್ಟಾರ್ಟ್ ಅಪ್ ಇನಿಶಿಯೇಟಿವ್ ಅನ್ನು ಉದ್ಘಾಟಿಸಿದ ಸಚಿವರು, ಎಲೆಕ್ಟ್ರಾನಿಕ್ಸ್ ಕ್ಷೇತ್ರವು ಹೆಚ್ಚುವರಿ 2.5 ರಿಂದ 3 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಬಹುದು ಮತ್ತು ಮುಂಬರುವ ಎರಡು ವರ್ಷಗಳಲ್ಲಿ ಬಿಪಿಒ ವಲಯವು 8 ಮಿಲಿಯನ್ ಉದ್ಯೋಗಗಳನ್ನು ಲಭ್ಯಗೊಳಿಸಬಹುದು ಎಂದು ಹೇಳಿದರು.
ಸ್ಟಾರ್ಟ್ಅಪ್ ಇನಿಶಿಯೇಟಿವ್ ಅನ್ನು ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (STPI) ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸಾಫ್ಟ್ವೇರ್ ರಫ್ತು ಪ್ರಮೋಷನ್ ಕೌನ್ಸಿಲ್ (ESC) ಆಯೋಜಿಸಿದೆ.
ವೈಷ್ಣವ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಕಲ್ಪನೆಯಂತೆ ದೇಶದಲ್ಲಿ ತೆರೆದುಕೊಳ್ಳುತ್ತಿರುವ ಮೂರು ಮೆಗಾಟ್ರೆಂಡ್ಗಳನ್ನು ಉಲ್ಲೇಖಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದದ್ದು ದೇಶದ ಪ್ರತಿಭಾ ಸಾಗಾರ, ಜಾಣ್ಮೆ, ಉನ್ನತ ಮಟ್ಟದ ಕಂಪ್ಯೂಟರ್ ಸಾಕ್ಷರತೆ ಮತ್ತು ಉತ್ಕೃಷ್ಟತೆಯ ಬದ್ಧತೆಯಿಂದ ನಡೆಸಲ್ಪಡುವ ತಂತ್ರಜ್ಞಾನದ ನಾಯಕರಾಗಿ ಹೊರಹೊಮ್ಮುವ ಸಂಕಲ್ಪ.
“ನಾವು ಈಗ ಅರ್ಹತೆ ಮತ್ತು ಪ್ರತಿಭೆಗೆ ಪ್ರಾಮುಖ್ಯತೆಯನ್ನು ನೀಡುವ ಪರಿಸರ ವ್ಯವಸ್ಥೆಯನ್ನು ಹೊಂದಿದ್ದೇವೆ, ಅದು ಆವಿಷ್ಕಾರಗಳು ಮತ್ತು ಅಡೆತಡೆಗಳನ್ನು ಮೀರಲು ಶಕ್ತಿ ನೀಡುತ್ತದೆ” ಎಂದು ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.