ಲಂಡನ್: ಯುಕೆ-ಚೀನಾ ಸಂಬಂಧದ ‘ಸುವರ್ಣ ಯುಗ’ ಅಂತ್ಯವಾಗಿದೆ. ಯುಕೆ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ಚೀನಾ ವ್ಯವಸ್ಥಿತ ಸವಾಲನ್ನು ಒಡ್ಡುತ್ತಿದೆ ಎಂದು ಯುಕೆ ಪ್ರಧಾನಿ ರಿಷಿ ಸುನಕ್ ಅವರು ಹೇಳಿದ್ದಾರೆ.
ಶಾಂಘೈ ಪ್ರತಿಭಟನೆಗಳನ್ನು ವರದಿ ಮಾಡುವಾಗ ಬಿಬಿಸಿ ಪತ್ರಕರ್ತರೊಬ್ಬರಿಗೆ ಥಳಿಸಿದ ಘಟನೆಯನ್ನು ಯುಕೆ ಸರ್ಕಾರ ಖಂಡಿಸಿದ ತರುವಾಯ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ವಿದೇಶಾಂಗ ನೀತಿಯ ಕುರಿತಾದ ತನ್ನ ಮೊದಲ ಪ್ರಮುಖ ಭಾಷಣದಲ್ಲಿ ಸುನಕ್ ಅವರು ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಘೋಷಿಸಿದ ಯುಕೆ-ಚೀನಾ ಸಂಬಂಧಗಳ ಸುವರ್ಣ ಯುಗ ಈಗ ಅಂತ್ಯವಾಗಿದೆ. ಅಲ್ಲದೇ ವಿಶ್ವ ವ್ಯವಹಾರಗಳಲ್ಲಿ ಜಾಗತಿಕ ಆರ್ಥಿಕ ಸ್ಥಿರತೆ ಅಥವಾ ಹವಾಮಾನ ಬದಲಾವಣೆಯಂತಹ ಸಮಸ್ಯೆಗಳಿಗೆ ಚೀನಾದ ಪ್ರಾಮುಖ್ಯತೆಯನ್ನು ನಾವು ಸುಲಭವಾಗಿ ನಿರ್ಲಕ್ಷಿಲು ಸಾಧ್ಯವಿಲ್ಲ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಜಪಾನ್ ಮತ್ತು ಇತರ ಅನೇಕರು ಇದನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
“ವ್ಯಾಪಾರವು ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗೆ ಕಾರಣವಾಗುತ್ತದೆ ಎಂಬ ಕಲ್ಪನೆಯ ಜೊತೆಗೆ ‘ಸುವರ್ಣ ಯುಗ’ ಎಂದು ಕರೆಯಲ್ಪಡುವ ಯು.ಕೆ-ಚೀನಾ ಸಂಬಂಧ ಮುಗಿಯಿತು. ನಿರಂಕುಶ ಅಧಿಕಾರದ ಕಡೆಗೆ ಹೆಚ್ಚಿನ ವೇಗದಲ್ಲಿ ಸಾಗುತ್ತಿರುವ ಚೀನಾವು ನಮ್ಮ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ವ್ಯವಸ್ಥಿತ ಸವಾಲನ್ನು ಒಡ್ಡುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.