ನವದೆಹಲಿ: ಸಂಸ್ಕೃತವನ್ನು ‘ದೇವರ ಭಾಷೆ’ ಎಂದು ಪರಿಗಣಿಸಲಾಗಿದೆ, ಇದು ಭಾರತದ ಪ್ರಾಚೀನ ಭಾಷೆಗಳಲ್ಲಿ ಒಂದು. ಆದರೆ ಪ್ರಸ್ತುತ ಇದನ್ನು 1% ಕ್ಕಿಂತ ಕಡಿಮೆ ಭಾರತೀಯರು ಮಾತನಾಡುತ್ತಾರೆ ಮತ್ತು ಇದನ್ನು ಹೆಚ್ಚಾಗಿ ಪುರೋಹಿತರು ಧಾರ್ಮಿಕ ಸಮಾರಂಭಗಳಲ್ಲಿ ಮಾತ್ರ ಬಳಸುತ್ತಾರೆ. ಅದೃಷ್ಟವಶಾತ್, ಕೆಲವರು ಶ್ರೀಮಂತ ಭಾಷೆಯನ್ನು ಇನ್ನೂ ಜೀವಂತವಾಗಿರಿಸಿಕೊಳ್ಳುತ್ತಿದ್ದಾರೆ. ಅಪರೂಪದ ಘಟನೆಯೊಂದರಲ್ಲಿ, ದೆಹಲಿಯ ಕ್ಯಾಬ್ ಚಾಲಕನೊಬ್ಬ ತನ್ನ ಪ್ರಯಾಣಿಕರೊಂದಿಗೆ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಪ್ರಭಾವಿತಗೊಳಿಸಿದನು.
ಈ ವಿಡಿಯೋವನ್ನು ದೆಹಲಿಯ ಇಂಡಿಯಾ ಗೇಟ್ ಬಳಿ ವಿಡಿಯೋ ರೆಕಾರ್ಡ್ ಮಾಡಲಾಗಿದೆ.
@chidsamskritam ಎಂಬ ಟ್ವಿಟರ್ ಹ್ಯಾಂಡಲ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ ಮತ್ತು “ಅದ್ಭುತ!! ದೆಹಲಿಯಲ್ಲಿರುವ ಈ ಕಾರ್ ಡ್ರೈವರ್ ಇಂದು ಬೆಳಿಗ್ಗೆ ನನ್ನೊಂದಿಗೆ ಸಂಸ್ಕೃತದಲ್ಲಿ ಮಾತನಾಡಿದ್ದಾರೆ!!” ಎಂದು ಇದಕ್ಕೆ ಒಕ್ಕಣೆ ನೀಡಲಾಗಿದೆ.
ಪ್ರಯಾಣಿಕನು ತನ್ನ ಕ್ಯಾಬ್ ಚಾಲಕನೊಂದಿಗೆ ಸಂಸ್ಕೃತದಲ್ಲಿ ಸಂಭಾಷಣೆಯನ್ನು ಪ್ರಾರಂಭಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಆಶ್ಚರ್ಯವೆಂಬಂತೆ ಚಾಲಕ ಕೂಡ ಅದೇ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಪ್ರಯಾಣಿಕ ಚಾಲಕನ ಹೆಸರು, ಕುಟುಂಬ, ಊರಿನ ಬಗ್ಗೆ ಪ್ರಶ್ನಿಸಿದ್ದಾರ. ಇದಕ್ಕೆಲ್ಲಾ ಅವರು ಅಚ್ಚುಕಟ್ಟಾಗಿ ಸಂಸ್ಕೃತದಲ್ಲೇ ಉತ್ತರಿಸಿದ್ದಾರೆ.
ಈ ವೀಡಿಯೊ 2.62 ಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದೆ ಮತ್ತು 2,400 ಕ್ಕೂ ಹೆಚ್ಚು ರೀಟ್ವೀಟ್ಗಳನ್ನು ಗಳಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಸಂಭಾಷಣೆಯಿಂದ ಪ್ರಭಾವಿತರಾಗಿದ್ದಾರೆ. ಕೆಲವರು ಸಂಸ್ಕೃತದಲ್ಲೇ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರರು ಹೀಗೆ ಬರೆದಿದ್ದಾರೆ, ” ನಾವು ಸಂಸ್ಕೃತವನ್ನು ಪ್ರಚಾರ ಮಾಡಬೇಕು, ಈ ಭಾಷೆಯನ್ನು ಪುನರುಜ್ಜೀವನಗೊಳಿಸುವುದು ನಮ್ಮ ಕರ್ತವ್ಯವಾಗಿದೆ ಎಂದಿದ್ದಾರೆ.
ಕಳೆದ ತಿಂಗಳು, ಗಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಸಂಸ್ಕೃತದಲ್ಲಿ ಲೈವ್ ಕಾಮೆಂಟರಿ ಮಾಡಿದ ನಂತರ ವಿಡಿಯೋ ವೈರಲ್ ಆಗಿತ್ತು.
Amazing !!
This car driver in Delhi speaks Sanskrit with me this morning!! pic.twitter.com/z6XU8B9glk— LAKSHMI NARAYANA B.S (BHUVANAKOTE) (@chidsamskritam) November 10, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.