ವಾಷಿಂಗ್ಟನ್: ಅಮೆರಿಕದ ರಾಜಧಾನಿಗೆ ಹೊಂದಿಕೊಂಡಿರುವ ಮೇರಿಲ್ಯಾಂಡ್ ರಾಜ್ಯದಲ್ಲಿ ನಡೆದ ಲೆಫ್ಟಿನೆಂಟ್ ಗವರ್ನರ್ ರೇಸ್ನಲ್ಲಿ ಜಯಗಳಿಸಿದ ಮೊದಲ ಭಾರತೀಯ ಅಮೆರಿಕನ್ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಅರುಣಾ ಮಿಲ್ಲರ್ ಮಂಗಳವಾರ ಇತಿಹಾಸ ಬರೆದಿದ್ದಾರೆ.
58 ವರ್ಷದ ಮಿಲ್ಲರ್ ಅವರು ಮೇರಿಲ್ಯಾಂಡ್ ಹೌಸ್ನ ಮಾಜಿ ಪ್ರತಿನಿಧಿಯಾಗಿದ್ದರು. ತಮ್ಮ ಪ್ರತಿಸ್ಪರ್ಧಿ ವಾಸ್ ಮೂರ್ ಅವರನ್ನು ಸೋಲಿಸಿ ಈ ಹುದ್ದೆಯನ್ನು ಅಲಂಕರಿಸಿದ್ದಾರೆ.
ಅಮೆರಿಕಾದಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರು ಗವರ್ನರ್ ನಂತರ ರಾಜ್ಯದ ಅತ್ಯುನ್ನತ ಅಧಿಕಾರಿಯಾಗಿದ್ದಾರೆ ಮತ್ತು ಗವರ್ನರ್ ರಾಜ್ಯದಿಂದ ಹೊರಗಿರುವಾಗ ಅಥವಾ ಅಸಮರ್ಥರಾದ ಸಂದರ್ಭದಲ್ಲಿ ಅವರ ಪಾತ್ರವನ್ನು ವಹಿಸುತ್ತಾರೆ.
ಗವರ್ನರ್ ಸತ್ತರೆ, ರಾಜೀನಾಮೆ ನೀಡಿದರೆ ಅಥವಾ ಅಧಿಕಾರದಿಂದ ತೆಗೆದುಹಾಕಲ್ಪಟ್ಟರೆ ಲೆಫ್ಟಿನೆಂಟ್ ಗವರ್ನರ್ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಾರೆ.
ಅಧ್ಯಕ್ಷ ಜೋ ಬಿಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಇಬ್ಬರೂ ಮೂರ್ ಮತ್ತು ಮಿಲ್ಲರ್ ಪರವಾಗಿ ಪ್ರಚಾರ ಮಾಡಿದ್ದರು.
ಮಿಲ್ಲರ್ ಆಂಧ್ರಪ್ರದೇಶದಲ್ಲಿ ಜನಿಸಿದ್ದು, ನಂತರ ಹೆತ್ತವರೊಂದಿಗೆಯುಎಸ್ಗೆ ವಲಸೆ ಹೋಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.