ಹೈದರಾಬಾದ್ನ ಪ್ರಯಾಣಿಕರು, ವಾಹನ ಚಾಲಕರು ತುರ್ತು ಪೆಟ್ರೋಲ್ ಬೇಕಾದರೆ ಚಿಂತಿಸಬೇಕಿಲ್ಲ. ಪೆಟ್ರೋಲ್ ಪಂಪ್ಗಳನ್ನು ಹುಡುಕಲು ಕಷ್ಟ ಪಡಬೇಕಾಗಿಲ್ಲ. ಮಹತ್ವದ ಕೆಲಸ ಕಾರ್ಯಗಳಿಗೆ ತೆರಳುವ ಸಂದರ್ಭ ವಾಹನದ ಪೆಟ್ರೋಲ್ ಟ್ಯಾಂಕ್ ಖಾಲಿಯಾದಲ್ಲಿ ಅಲೆದಾಡುವ ಪ್ರಶ್ನೆಯೇ ಇಲ್ಲ. ಇವರು ಮಾಡಬೇಕಾದದ್ದು ಇಷ್ಟೆ. ಸುತ್ತಲೂ ಒಮ್ಮೆ ಕಣ್ಣಾಡಿಸಿ ಸಂಚಾರಿ ಪೊಲೀಸ್ ಮೆರಾಜುದ್ದಿನ್ ಸೈಯದ್ನ ಸಂಪರ್ಕ ಹೊಂದುವುದು.
ಟ್ರಾಫಿಕ್ ಜಂಜಾಟದ ನಡುವೆ ಪೆಟ್ರೋಲ್ ಇಲ್ಲದೆ ಸಿಕ್ಕಿ ಬಿದ್ದಲ್ಲಿ ಹೈದರಾಬಾದ್ನ ಬೇಗಂಪೇಟ್ನ ಸಂಚಾರಿ ಪೊಲೀಸ್ ಸಹಾಯಕ ಸಬ್ ಇನ್ಸ್ಸ್ಪೆಕ್ಟರ್ ಸೈಯದ್ ಪ್ರಯಾಣಿಕರ ಸಹಾಯಕ್ಕೆ ಯಾವತ್ತೂ ಸಿದ್ಧ. ಈ ಪೊಲೀಸ್ ಅಧಿಕಾರಿ ಪ್ರಯಾಣಿಕರ ಸಹಾಯಕ್ಕೆ ಸ್ವತಃ ತಾವೇ ಧಾವಿಸುವ ಮೂಲಕ ಒಂದು ಉದಾತ್ತ ಕಾರ್ಯವನ್ನು ಮಾಡುತ್ತಿದ್ದಾರೆ.
ಕಳೆದ ಕೆಲವು ವಾರಗಳಿಂದ ಬೇಗಂಪೇಟ್ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಪೊಲೀಸ್ ಅಧಿಕಾರಿ ತುರ್ತಾಗಿ ಪೆಟ್ರೋಲ್ ಬೇಕಾದ ಪ್ರಯಾಣಿಕರಿಗೆ ಪೆಟ್ರೋಲ್ ಬಾಟ್ಲಿಗಳನ್ನು ವಿತರಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ತಿಂಗಳುಗಳ ಹಿಂದೆ ಅವರ ವೇತನದಲ್ಲಿ ಏರಿಕೆಯಾಗಿದ್ದು, ಬಳಿಕ ಅವರು ತಮ್ಮ ಕೆಲಸದಲ್ಲಿ ತೊಡಗುವ ಸಂದರ್ಭ ಪ್ರತಿ ನಿತ್ಯ ಆರು ಬಾಟಲ್ಗಳಷ್ಟು ಪೆಟ್ರೋಲ್ ತಮ್ಮ ಜೊತೆ ಇಟ್ಟುಕೊಂಡಿರುತ್ತಾರೆ. ಆ ಪ್ರದೇಶದಲ್ಲಿ ಜನಪ್ರಿಯತೆ ಪಡೆದಿರುವ ಅವರು ತಾವು ವಿತರಿಸುವ ಪೆಟ್ರೋಲ್ನ ಬದಲಾಗಿ ಯಾವುದೇ ಹಣ ಪಡೆಯುವುದಿಲ್ಲ.
ತಾನು ಈವರೆಗೆ ಸುಮಾರು 111 ಮಂದಿಗೆ ಸಹಾಯ ಮಾಡಿದ್ದು, ತನ್ನ ಈ ನಿಸ್ವಾರ್ಥ ಸೇವೆಗೆ ಹಿರಿಯ ಅಧಿಕಾರಿಗಳಿಂದಲೂ ಪ್ರಶಂಸೆ ಪಡೆದಿದ್ದೇನೆ ಎಂದು ಅವರು ಹೇಳುತ್ತಾರೆ. ಪೊಲೀಸರು ಕೇವಲ ಅಪರಾಧಿಗಳನ್ನು ಶಿಕ್ಷಿಸಲು ಅಥವಾ ಲಂಚ ಪಡೆಯಲು ಮಾತ್ರ ಇರುವುದಲ್ಲ. ಜನರ ಸಹಾಯಕ್ಕೂ ಇರುವರೆಂದು ಜನರು ತಿಳಿದುಕೊಳ್ಳಬೇಕು ಎನ್ನುವುದು ಅವರ ಅಭಿಪ್ರಾಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.