ಲಂಡನ್: ಪಾಕಿಸ್ಥಾನ ಸರ್ಕಾರದ ಸಚಿವೆಯನ್ನು ಕಳ್ಳಿ ಕಳ್ಳಿ ಎಂದು ಜನರು ಮೂದಲಿಸಿದ ಘಟನೆ ಲಂಡನ್ನಲ್ಲಿ ನಡೆದಿದೆ.
ಪ್ರಧಾನಿ ಶೆಹಬಾಜ್ ಷರೀಫ್ ಅವರ ನಿಯೋಗದ ಭಾಗವಾಗಿ ನ್ಯೂಯಾರ್ಕ್ನಲ್ಲಿ ನಡೆದ ಯುಎನ್ ಜನರಲ್ ಅಸೆಂಬ್ಲಿಯ 77 ನೇ ಅಧಿವೇಶನದಲ್ಲಿ ಭಾಗವಹಿಸಿ ಹಿಂತಿರುಗುವಾಗ ಲಂಡನ್ನಲ್ಲಿ ಕೆಫೆಯೊಂದರಲ್ಲಿ ಕಾಫಿ ಕುಡಿಯುತ್ತಿದ್ದ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವೆ ಮರಿಯಮ್ ಔರಂಗಜೇಬ್ ಅವರನ್ನು ಜನ ಕೆಟ್ಟದಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕಳ್ಳಿ ಕಳ್ಳಿ ಎಂದು ಮೂದಲಿಸಿದ್ದಾರೆ.
ವರದಿಗಳ ಪ್ರಕಾರ ಸಚಿವೆಗೆ ಅವಮಾನ ಮಾಡಿದವರು ಪಾಕಿಸ್ಥಾನಿಯರೇ ಆಗಿದ್ದಾರೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಬೆಂಬಲಿಗರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ವೀಡಿಯೊಗಳು ವೈರಲ್ ಆಗಿದೆ. ಘಟನೆಯ ವೇಳೆ ಸಚಿವೆ ವಿಚಲಿತಳಾಗದೆ ಪರಿಸ್ಥಿತಿಯನ್ನು ಎದುರಿಸಿರುವುದನ್ನು ಕಾಣಬಹುದು.
ಅದೇನಿದ್ದರೂ ಪಾಕಿಸ್ಥಾನದ ಕೊಳಕು ರಾಜಕೀಯ ಗಡಿಯಾಚೆಗೂ ಮೀರಿದೆ ಎಂಬುದನ್ನು ಈ ಘಟನೆ ಸೂಚಿಸುತ್ತದೆ.
She braved it with aplomb. The shame is for the harassers. The trend will be irresistible for others. It is only a matter of time before PTI women or Imran himself face the same situation. I will condemn it even then but with the reminder that what goes around comes around. pic.twitter.com/UA61Co7Tim
— Syed Talat Hussain (@TalatHussain12) September 25, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.