ಬೆಳ್ತಂಗಡಿ : ಶತ ಸಾರ್ಥಕ ವರ್ಷಗಳನ್ನು ಪೋರೈಸಿರುವ ಗೇರುಕಟ್ಟೆಯಲ್ಲಿನ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ನಿರ್ಮಿಸಲಾದ ನೂತನ ಸಹಕಾರಿ ಭವನದ ಉದ್ಘಾಟನಾ ಸಮಾರಂಭ ಹಾಗೂ ಶತಮಾನೋತ್ಸವ ವರ್ಷಾಚರಣೆಯ ಸಮಾರೋಪ ಸೆ.14 ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ವಸಂತ ಮಜಲು ತಿಳಿಸಿದರು.ಅವರು ಬುಧವಾರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಕಾರ್ಯಕ್ರಮದ ವಿವರ ನೀಡಿದರು.
ಸಂಘದ ಶತಮಾನೋತ್ಸವ ಸಂಧರ್ಭದಲ್ಲಿ ನಿರ್ಮಿಸಲಾದ ಸಹಕಾರಿ ಭವನದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರವೇರಿಸಲಿದ್ದಾರೆ. ಒಡಿಯೂರು ಶ್ರೀ ಗುರದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ವಹಿಸಲಿದ್ದಾರೆ. ಸಭಾ ವೇದಿಕೆ ಉದ್ಘಾಟನೆಯನ್ನು ರಾಜ್ಯ ಸಹಕಾರಿ ಸಚಿವ ಮಹಾದೇವ ಪ್ರಸಾದ್, ಕಣಜ ಎಂಬ ಸ್ಮರಣ ಸಂಚಿಕೆಯ ಬಿಡುಗಡೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥರೈ, ನೂತನ ಪಾಕಶಾಲೆ ಉದ್ಘಾಟನೆಯನ್ನು ಶಾಸಕ ಕೆ.ವಸಂತ ಬಂಗೇರ ನೆರವೇರಿಸಲಿದ್ದಾರೆ ಎಂದರು.
ಸಂಸದ ನಳಿನ್ ಕುಮಾರ್ಕಟೀಲು, ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ, ತಾ.ಪಂ.ಅಧ್ಯಕ್ಷೆ ಜಯಂತಿ ಪಾಲೇದು, ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ, ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಕಳಿಯ ಗ್ರಾ.ಪಂ.ಅಧ್ಯಕ್ಷ ಶರತ್ಕುಮಾರ್, ಕುವೆಟ್ಟು ಗ್ರಾ.ಪಂ.ಅಧ್ಯಕ್ಷ ಅಶೋಕ್ ಕೋಟ್ಯಾನ್, ಬದ್ರಿಯಾ ಜುಮ್ಮಾ ಮಸೀದಿಯ ಅಬ್ದುಲ್ ರೆಹಮಾನ್ ಬಾಖವಿ, ಮಾವಿನಕಟ್ಟೆ ಸಂತ ಅನ್ನಾಚರ್ಚ್ ಧರ್ಮಗುರು ಫಾ|ತೋಮಸ್ ಸಿಕ್ವೇರಾ, ಸಹಕಾರ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ತುಳು ಚಿತ್ರನಟಿ ದಿವ್ಯಶ್ರೀ ಅತಿಥಿಗಳಾಗಿರುತ್ತಾರೆ. ಇದಕ್ಕೂ ಮೊದಲು ಗೇರುಕಟ್ಟೆ ಪೇಟೆಯಲ್ಲಿ ಮೆರವಣಿಗೆ ನಡೆಯಲಿದೆ ಎಂದರು.
ಸಮಾರಂಭದ ಬಳಿ ಸತ್ವಪರೀಕ್ಷೆ ಎಂಬ ತಾಳಮದ್ದಳೆ, ರಾತ್ರಿ ರಡ್ಡೆಟ್ ಏರೆಡ್ಡೆ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಮಜಲು ವಿವರಿಸಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ರಾಜೀವಗೌಡ, ನಿರ್ದೇಶಕರು ಮತ್ತಿತರರು ಉಪಸ್ಥಿತರಿದ್ದರು.
ಕಳಿಯ ಪ್ರಾ.ಕೃ.ಪ.ಸ.ಸಂಘವು 1914ರಲ್ಲಿ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರಿಂದ ಸ್ಥಾಪಿತವಾಗಿದೆ. ಕಳಿಯ, ನ್ಯಾಯತರ್ಪು, ಓಡಿಲ್ನಾಳ ಗ್ರಾಮದ 1492 ಸದಸ್ಯರಿದ್ದಾರೆ. ಸಂಘದಲ್ಲಿ ರೂ.0,03,74,480 ಪಾಲು ಬಂಡವಾಳವಿದ್ದು ರೂ.11,87,98,965 ಠೇವಣಿ ಸಂಗ್ರಹಿಸಲಾಗಿದೆ. 10,03,74,480ರ ಮಾ.ಗೆರೂ. 26,98,209 ದಾಖಲೆಯ ಲಾಭಗಳಿಸಿದೆ.
ಸಂಘದ ಸದಸ್ಯರು ಮೃತಪಟ್ಟಲ್ಲಿ ತಕ್ಷಣ ಮರಣ ನಿಯಮದಡಿ ರೂ.6000 ಶ್ರೇಷ್ಠ ನಿಧಿಯನ್ನು ವಾರಿಸುದಾರರಿಗೆ ನೀಡಲಾಗುತ್ತದೆ. ಸದಸ್ಯರ ಕಲ್ಯಾಣ ನಿಧಿ, ಸಿಬ್ಬಂದಿ ಕಲ್ಯಾಣ ನಿಧಿ ಸ್ಥಾಪಿಸಲಾಗಿದ್ದು ಭತ್ತ ಬೆಳೆಯುವ ಸದಸ್ಯರಿಗೆ ಒಂದು ಎಕರೆಗೆ ರೂ.1000 ಸಹಾಯಕೂಡ ನೀಡಲಾಗುತ್ತಿದ್ದು ಕೃಷಿ ಯಂತ್ರ ಬಾಡಿಗೆಗೆ ನೀಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.