ಲಂಡನ್: ಬ್ರಿಟನ್ ರಾಣಿ ಎಲಿಜಬೆತ್ II ಅವರ ಮರಣದ ನಂತರ ಅವರ ಕಿರೀಟ ಮತ್ತು ಇತರ ಅಲಂಕಾರಗಳಲ್ಲಿ ಇರುವ ಅತ್ಯಮೂಲ್ಯ ಆಭರಣಗಳನ್ನು ಹಿಂದಿರುಗಿಸುವಂತೆ ಬೇಡಿಕೆಗಳೂ ಹೆಚ್ಚಾಗುತ್ತಿವೆ. ಆಕೆಯ ಕಿರೀಟದಲ್ಲಿರುವ ಹಲವು ವಜ್ರಗಳು ಬೇರೆ ಬೇರೆ ದೇಶಗಳಿಗೆ ಸೇರಿದ್ದಾಗಿದೆ. ಬ್ರಿಟಷ್ ವಸಾಹುತುಶಾಹಿಯ ಸಂದರ್ಭದಲ್ಲಿ ಇವುಗಳನ್ನು ಕೊಳ್ಳೆ ಹೊಡೆಯಲಾಗಿತ್ತು.
ಕಿರೀಟದ ಮಧ್ಯಭಾಗದಲ್ಲಿ ಹೊಳೆಯುತ್ತಿರುವ ಕೊಹಿನೂರ್ ವಜ್ರ ಭಾರತಕ್ಕೆ ಸೇರಿದ್ದಾಗಿದ್ದು, ಇದನ್ನು ಹಿಂದಿರಿಗಿಸುವಂತೆ ಭಾರತೀಯರು ಬೇಡಿಕೆಗಳನ್ನು ಇಡುತ್ತಲೇ ಬಂದಿದ್ದಾರೆ. ರಾಣಿ ಮರಣದ ನಂತರ ಈ ಬೇಡಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಇನ್ನಷ್ಟು ತೀವ್ರತೆ ಪಡೆದುಕೊಂಡಿದೆ.
ಇದೀಗ ದಕ್ಷಿಣ ಆಫ್ರಿಕಾವು ರಾಣಿಯ ರಾಜದಂಡದಲ್ಲಿರುವ ತನ್ನ 500 ಕ್ಯಾರೆಟ್ ವಜ್ರವನ್ನು ಹಿಂದಿರಿಗಿಸುವಂತೆ ಆಗ್ರಹಿಸಿದೆ. ಗ್ರೇಟ್ ಸ್ಟಾರ್ ಆಫ್ ಆಫ್ರಿಕಾ ಎಂದು ಕರೆಯಲ್ಪಡುವ ಈ ವಜ್ರ ಅತಿದೊಡ್ಡ ಸ್ಪುಟವಾದ ವಜ್ರವಾಗಿದೆ. ವರದಿಯ ಪ್ರಕಾರ, 1905 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಇದನ್ನು ಹೊರತೆಗೆಯಲಾಗಿತ್ತು. ಅಂದಿನ ಬ್ರಿಟಿಷ್ ಆಡಳಿತಗಾರರು ಇದನ್ನು ಬ್ರಿಟನ್ಗೆ ಕೊಂಡೊಯ್ದಿದ್ದಾರೆ ಮತ್ತು ಬ್ರಿಟಿಷ್ ರಾಜಮನೆತನಕ್ಕೆ ಹಸ್ತಾಂತರಿಸಿದ್ದಾರೆ.
ನಂತರ 530.2-ಕ್ಯಾರೆಟ್ ಡ್ರಾಪ್-ಆಕಾರದ ವಜ್ರವನ್ನು ರಾಜದಂಡದೊಂದಿಗೆ ಕ್ರಾಸ್ಗೆ ಸೇರಿಸಲಾಯಿತು. ಇದು 1600 ರ ದಶಕಕ್ಕೂ ಹಿಂದಿನ ಪಟ್ಟಾಭಿಷೇಕ ಸಮಾರಂಭಗಳಲ್ಲಿ ಬಳಸಲ್ಪಟ್ಟ ಪವಿತ್ರ ವಸ್ತುವಾಗಿದೆ. ಪ್ರಸ್ತುತ ರಾಣಿಗೆ ಸೇರಿದ ರಾಜದಂಡದ ಮೇಲೆ ಇದು ರಾರಾಜಿಸುತ್ತಿದೆ.
“ಕುಲಿನನ್ ಡೈಮಂಡ್ ಅನ್ನು ದಕ್ಷಿಣ ಆಫ್ರಿಕಾಕ್ಕೆ ತಕ್ಷಣದಿಂದಲೇ ಹಿಂತಿರುಗಿಸಬೇಕು. ನಮ್ಮ ದೇಶ ಮತ್ತು ಇತರ ದೇಶಗಳ ಅಮೂಲ್ಯ ಲೋಹಗಳು ನಮ್ಮ ಬ್ರಿಟನ್ಗೆ ಪ್ರಯೋಜನವನ್ನು ನೀಡುತ್ತಲೇ ಇರುತ್ತವೆ. ಆದರೆ ನಮ್ಮ ಜನರು ಈಗಲೂ ಬೆಲೆ ತೆರುತ್ತಿದ್ದಾರೆ” ಎಂದು ದಕ್ಷಿಣ ಆಫ್ರಿಕಾ ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
ವಜ್ರವನ್ನು ಹಿಂದಿರುಗಿಸುವಂತೆ change.org ನಲ್ಲಿ ಆನ್ಲೈನ್ ಅರ್ಜಿಯನ್ನು ಪ್ರಾರಂಭಿಸಲಾಗಿದೆ ಮತ್ತು ಅದಕ್ಕೆ 6,000 ಕ್ಕೂ ಹೆಚ್ಚು ಜನರು ಸಹಿ ಹಾಕಿದ್ದಾರೆ.
” ಕದ್ದ ಎಲ್ಲಾ ಚಿನ್ನ, ವಜ್ರಗಳನ್ನು ಹಿಂದಿರುಗಿಸುವುದು ಬ್ರಿಟನ್ ಮಾಡಿದ ಎಲ್ಲಾ ಹಾನಿಗಳಿಗೆ ಪರಿಹಾರ” ಎಂದು ದಕ್ಷಿಣ ಆಫ್ರಿಕಾ ಜನರು ಹೇಳುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.