ಮೋದಿ ಸರ್ಕಾರವು ದೇಶದ ವನ್ಯಜೀವಿಗಳನ್ನು ಸಂರಕ್ಷಿಸಲು ಮತ್ತು ರಕ್ಷಿಸಲು ಬದ್ಧತೆಯನ್ನು ಪ್ರದರ್ಶಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಅದು ತೆಗೆದುಕೊಂಡ ಕ್ರಮಗಳು ಈಗ ಫಲಿತಾಂಶಗಳನ್ನೂ ನೀಡುತ್ತಿದೆ. 2014 ರಲ್ಲಿ ದೇಶದ ಭೌಗೋಳಿಕ ಪ್ರದೇಶದ ಶೇಕಡಾ 4.90 ರಷ್ಟಿದ್ದ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯು ಈಗ 5.03 ಶೇಕಡಾಕ್ಕೆ ಏರಿದೆ. ಅಧಿಕೃತ ಮೂಲಗಳ ಪ್ರಕಾರ, ದೇಶದಲ್ಲಿ 2014 ರಲ್ಲಿ 1,61,081.62 ಚ.ಕಿ.ಮೀ ವಿಸ್ತೀರ್ಣದ 740 ಸಂರಕ್ಷಿತ ಪ್ರದೇಶಗಳು ಇದ್ದುವು. ಈಗ ಅದು 1,71,921 ಚದರ ಕಿ.ಮೀ ವಿಸ್ತೀರ್ಣದೊಂದಿಗೆ 981 ಕ್ಕೆ ಏರಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಅರಣ್ಯ ಮತ್ತು ಮರಗಳ ವ್ಯಾಪ್ತಿಯೂ 16,000 ಚದರ ಕಿ.ಮೀ.ಗಳಷ್ಟು ಹೆಚ್ಚಾಗಿದೆ. ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಿರುವ ವಿಶ್ವದ ಕೆಲವೇ ದೇಶಗಳ ಪೈಕಿ ಭಾರತವೂ ಒಂದಾಗಿದೆ. ಸಮುದಾಯ ಮೀಸಲು ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. 2014 ರಲ್ಲಿ ಕೇವಲ 43 ಇದ್ದ ಸಮುದಾಯ ಮೀಸಲುರ ಸಂಖ್ಯೆ 2019 ರಲ್ಲಿ 100 ಕ್ಕಿಂತ ಹೆಚ್ಚಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಭಾರತವು 18 ರಾಜ್ಯಗಳಲ್ಲಿ ಸುಮಾರು 75,000 ಚದರ ಕಿ.ಮೀ ಪ್ರದೇಶವನ್ನು ಆವರಿಸಿರುವ 52 ಹುಲಿ ಸಂರಕ್ಷಿತ ಪ್ರದೇಶಗಳಿಗೆ ನೆಲೆಯಾಗಿದೆ ಮತ್ತು ಜಾಗತಿಕ ಮಟ್ಟದಲ್ಲಿ ಇರುವ ಕಾಡಿನ ಹುಲಿಗಳ ಪೈಕಿ ಸುಮಾರು 75 ಪ್ರತಿಶತ ಜನಸಂಖ್ಯೆಯನ್ನು ಹೊಂದಿದೆ. ಭಾರತವು 2022 ರ ಗುರಿಯ ವರ್ಷಕ್ಕಿಂತ ನಾಲ್ಕು ವರ್ಷಗಳ ಮುಂಚಿತವಾಗಿ 2018 ರಲ್ಲಿ ಹುಲಿ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಸಾಧಿಸಿದೆ. ಭಾರತದಲ್ಲಿ ಹುಲಿ ಜನಸಂಖ್ಯೆಯು 2014 ರಲ್ಲಿ 2,226 ರಿಂದ 2018 ರಲ್ಲಿ 2,967 ಕ್ಕೆ ಏರಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹುಲಿ ಸಂರಕ್ಷಣೆಗೆ ಬಜೆಟ್ನಲ್ಲಿ 2014ರಲ್ಲಿ 185 ಕೋಟಿ ರೂ ಮೀಸಲಿಡಲಾಗಿತ್ತು. ಆದರೆ 2022ರಲ್ಲಿ ಅದು 300 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಈ ನಡುವೆ, ಏಷ್ಯಾಟಿಕ್ ಸಿಂಹಗಳ ಸಂಖ್ಯೆಯು ಹೆಚ್ಚಳವನ್ನು ತೋರಿಸಿದೆ, 2015 ರಲ್ಲಿ ಇದ್ದ 523 ಸಿಂಹಗಳಿಂದ ಶೇಕಡಾ 28.87ರಷ್ಟು ಹೆಚ್ಚಳವಾಗಿ 674ಕ್ಕೆ ತಲುಪಿದೆ ಎಂದು ಮೂಲಗಳು ತಿಳಿಸಿವೆ. 2020 ರಲ್ಲಿ ಭಾರತವು 12,852 ಚಿರತೆಗಳನ್ನು ಹೊಂದಿದ್ದು, 2014 ರಲ್ಲಿ ಈ ಸಂಖ್ಯೆ 7,910 ಆಗಿತ್ತು. ಅಂದರೆ ಹಿಂದಿನ ಅಂದಾಜಿಗೆ ಹೋಲಿಸಿದರೆ ಚಿರತೆಗಳ ಸಂಖ್ಯೆಯಲ್ಲಿ 60 ಪ್ರತಿಶತದಷ್ಟು ಹೆಚ್ಚಳ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೇ, ಏಳು ದಶಕಗಳ ಬಳಿಕ ಮತ್ತೆ ಭಾರತದಲ್ಲಿ ಚೀತಾಗಳ ಘರ್ಜನೆ ಕೇಳುವಂತೆ ಮೋದಿ ಸರ್ಕಾರ ಮಾಡಿರುವುದು ವಿಶೇಷ. ನಮೀಬಿಯಾದಿಂದ ಮತ್ತಷ್ಟು ಚೀತಾಗಳು ಭಾರತಕ್ಕೆ ಆಗಮಿಸಲಿದ್ದು ಇನ್ನು ಕೆಲವೇ ವರ್ಷಗಳಲ್ಲಿ ಇವುಗಳ ಸಂತತಿ ಭಾರತದಲ್ಲಿ ವೃದ್ಧಿಯಾಗುವ ನಿರೀಕ್ಷೆ ಇದೆ.
ಒಟ್ಟಿನಲ್ಲಿ ಹೇಳುವುದಾದರೆ ಜೀವವೈವಿಧ್ಯತೆ ಸಂರಕ್ಷಣೆಗೆ ಹಿಂದಿನ ಯಾವ ಸರ್ಕಾರಗಳೂ ತೋರಿಸದ ಬದ್ಧತೆಯನ್ನು ಮೋದಿ ಸರ್ಕಾರ ತೋರಿಸುತ್ತಿದೆ. ಇದೇ ಕಾರಣದಿಂದಾಗಿ ಭಾರತದ ಪ್ರಾಣಿ ಸಂಕುಲಗಳ ಸಂಖ್ಯೆ, ಅರಣ್ಯ ವ್ಯಾಪ್ತಿಯಲ್ಲಿ ಮಹತ್ವದ ವೃದ್ಧಿಯಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.