ನವದೆಹಲಿ: ಇತ್ತೀಚಿಗಷ್ಟೇ ಸಂಭವಿಸಿದ ಭಾರೀ ಪ್ರವಾಹ ಮತ್ತು ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸಿ ಹೋಗಿರುವ ಪಾಕಿಸ್ಥಾನಕ್ಕೆ ದುರಾಡಳಿತವೇ ಮುಳುವಾಗಿರುವುದಂತು ಸತ್ಯ.
ವರದಿಗಳ ಪ್ರಕಾರ, ಸಿಂಧೂ ನದಿಯಲ್ಲಿ ‘ಮೆಗಾ ಅಣೆಕಟ್ಟು’ ನಿರ್ಮಾಣಕ್ಕೆ ಅದು ವಿವಿಧ ಜನರಿಂದ $ 40 ಮಿಲಿಯನ್ ಸಂಗ್ರಹಿಸಿತ್ತು. ಆದರೆ ಅದರ ಜಾಹೀರಾತು ನೀಡಲು ಅದು ಮಾಡಿದ ವೆಚ್ಚ ಬರೋಬ್ಬರಿ $ 63 ಮಿಲಿಯನ್.
ವೈಸ್ ನ್ಯೂಸ್ ವರದಿಯ ಪ್ರಕಾರ, ಸಿಂಧೂ ನದಿಯ ಉದ್ದೇಶಿತ ಡೈಮರ್-ಭಾಶಾ ಅಣೆಕಟ್ಟು ಇದುವರೆಗೆ ಪೂರ್ಣಗೊಂಡಿಲ್ಲ, ಇದು ಹಗರಣದಲ್ಲಿ ಸಿಲುಕಿರುವ ಮೆಗಾ ಅಣೆಕಟ್ಟು ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ.
ಪಾಕಿಸ್ತಾನ ಸಂಸದೀಯ ವ್ಯವಹಾರಗಳ ಸಮಿತಿ (ಪಿಎಸಿ) ಪ್ರಕಾರ, ಅಣೆಕಟ್ಟು ನಿರ್ಮಾಣಕ್ಕಾಗಿ ಸಾರ್ವಜನಿಕರಿಂದ $40 ಮಿಲಿಯನ್ ಸಂಗ್ರಹಿಸಲಾಗಿದೆ, ಆದರೆ ಅದರ ಜಾಹೀರಾತಿಗಾಗಿ $63 ಮಿಲಿಯನ್ ಖರ್ಚು ಮಾಡಲಾಗಿದೆ ಎಂದು ವೈಸ್ ನ್ಯೂಸ್ ವರದಿ ಮಾಡಿದೆ.
ಡೈಮರ್-ಭಾಶಾ ಅಣೆಕಟ್ಟು ಕಾಮಗಾರಿಯನ್ನು ಮೂಲತಃ 1980 ರ ದಶಕದಲ್ಲಿ ಪೂರ್ಣಗೊಳ್ಳಲು ಉದ್ದೇಶಿಸಲಾಗಿತ್ತು, ಆದರೆ ಪರಿಸರದ ಪ್ರಭಾವ ಮತ್ತು ಹೆಚ್ಚುತ್ತಿರುವ ವೆಚ್ಚದಂತಹ ಹಲವಾರು ಅಂಶಗಳು ಯೋಜನೆಯನ್ನು ವಿಳಂಬಗೊಳಿಸಿದವು. ಅಣೆಕಟ್ಟು ನಿರ್ಮಾಣವಾದರೆ ಅದು 4,500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.