ಇಸ್ಲಾಮಾಬಾದ್: ಪಾಕಿಸ್ಥಾನದ ಆರ್ಥಿಕ ಸ್ಥಿತಿಯ ನಿಜವಾದ ಚಿತ್ರಣ ಈಗ ಬಯಲಾಗಿದೆ. ಈಗ ಮಿತ್ರ ರಾಷ್ಟ್ರಗಳು ಕೂಡ ಪಾಕಿಸ್ಥಾನವನ್ನು ಹಣಕ್ಕಾಗಿ ಭಿಕ್ಷೆ ಬೇಡುವ ದೇಶವಾಗಿ ನೋಡಲಾರಂಭಿಸಿವೆ ಎಂದು ಪಾಕಿಸ್ಥಾನದ ಪ್ರಧಾನಿ ಶೆಹಬಾಝ್ ಶರೀಫ್ ಹೇಳಿದ್ದಾರೆ.
ಸ್ವತಃ ತಮ್ಮ ದೇಶದ ಬಗ್ಗೆ ಅವರು ಈ ಹೇಳಿಕೆ ನೀಡಿರುವುದು ಅಚ್ಚರಿ ತಂದರೂ ತಮ್ಮ ದೇಶದ ನಿಜವಾದ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
“ಇಂದು, ನಾವು ಯಾವುದೇ ಮಿತ್ರ ದೇಶಕ್ಕೆ ಹೋದಾಗ ಅಥವಾ ಫೋನ್ ಕರೆ ಮಾಡಿದಾಗ, ನಾವು ಹಣಕ್ಕಾಗಿ ಭಿಕ್ಷೆ ಬೇಡಲು ಬಂದಿದ್ದೇವೆ ಎಂದು ಅವರು ಭಾವಿಸುತ್ತಾರೆ” ಎಂದು ವಕೀಲರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ವೇಳೆ ಪ್ರಧಾನಿ ಶರೀಫ್ ಹೇಳಿದ್ದಾರೆ ಎಂದು ಪಾಕಿಸ್ಥಾನದ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ಥಾನದ ಆರ್ಥಿಕತೆಯನ್ನು ಇತರ ಸಣ್ಣ ದೇಶಗಳ ಆರ್ಥಿಕತೆಯೊಂದಿಗೆ ಹೋಲಿಸಿರುವ ಶರೀಫ್, ಸಣ್ಣ ಆರ್ಥಿಕತೆಗಳು ಕೂಡ ಪಾಕಿಸ್ಥಾನವನ್ನು ಮೀರಿಸಿದೆ ಮತ್ತು ನಾವು ಕಳೆದ 75 ವರ್ಷಗಳಿಂದ ಭಿಕ್ಷಾಟನೆಯ ಬಟ್ಟಲನ್ನು ಹಿಡಿದು ಅಲೆದಾಡುತ್ತಿದ್ದೇವೆ ಎಂದಿದ್ದಾರೆ.
“ಪಾಕಿಸ್ಥಾನ ಮೊದಲೇ ಸವಾಲಿನ ಪರಿಸ್ಥಿತಿಯನ್ನು ಎದುರಿಸುತ್ತಿತ್ತು ಆದರೆ ಪ್ರವಾಹ ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ” ಎಂದಿದ್ದಾರೆ.
“ಪಾಕಿಸ್ಥಾನವು ಪ್ರಸ್ತುತ ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ಹೆಚ್ಚುತ್ತಿರುವ ಹಣದುಬ್ಬರಕ್ಕೆ ಸಾಕ್ಷಿಯಾಗುತ್ತಿದೆ, ಏಪ್ರಿಲ್ನಲ್ಲಿ ಅಧಿಕಾರ ವಹಿಸಿಕೊಂಡಾಗ ಪಾಕಿಸ್ಥಾನವು ಆರ್ಥಿಕ ಡೀಫಾಲ್ಟ್ ಅಂಚಿನಲ್ಲಿತ್ತು. ಹಿಂದಿನ ಸರ್ಕಾರವೇ ಇದಕ್ಕೆ ಕಾರಣ” ಎಂದಿದ್ದಾರೆ.
ಆಡಳಿತಾರೂಢ ಸಮ್ಮಿಶ್ರ ಸರ್ಕಾರವು ದೇಶವನ್ನು ಡೀಫಾಲ್ಟ್ನಿಂದ ರಕ್ಷಿಸಿದೆ ಮತ್ತು ಸ್ವಲ್ಪ ಮಟ್ಟಿಗೆ ಆರ್ಥಿಕ ಅಸ್ಥಿರತೆಯನ್ನು ನಿಯಂತ್ರಿಸಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.