ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಧಿಕಾರಿಗಳು ಇಂದು ರಾಜಸ್ಥಾನದ ಪೋಖ್ರಾನ್ ಫೈರಿಂಗ್ ರೇಂಜ್ಗಳಲ್ಲಿ ಸ್ವದೇಶಿ ನಿರ್ಮಿತ ಪಿನಾಕಾ ವಿಸ್ತೃತ ಶ್ರೇಣಿಯ ರಾಕೆಟ್ನ ಪ್ರಯೋಗಗಳನ್ನು ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಈ ಪರೀಕ್ಷೆಗಳಲ್ಲಿ ಅನೇಕ ಯಶಸ್ವಿ ಪರೀಕ್ಷಾ ಫೈರಿಂಗ್ಗಳನ್ನು ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿನಾಕಾ ರಾಕೆಟ್ ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿದೆ. ಆದರೆ, ಅವುಗಳನ್ನು ಖಾಸಗಿ ವಲಯದ ಸಂಸ್ಥೆಯು ಉತ್ಪಾದಿಸುತ್ತದೆ. ಪಿನಾಕಾ ಫಿರಂಗಿ ಕ್ಷಿಪಣಿ ವ್ಯವಸ್ಥೆಯಾಗಿದ್ದು, 75 ಕಿಲೋಮೀಟರ್ ವ್ಯಾಪ್ತಿಯವರೆಗೆ ಶತ್ರುಗಳ ಪ್ರದೇಶದ ಮೇಲೆ ಹೆಚ್ಚಿನ ನಿಖರತೆಯೊಂದಿಗೆ ಹೊಡೆಯುವ ಸಾಮರ್ಥ್ಯವನ್ನು ಹೊಂದಿದೆ.
ಫೈರಿಂಗ್ ರೇಂಜ್ಗಳಲ್ಲಿ ನಡೆಸಲಾದ ಪ್ರಯೋಗ ನಿಖರತೆ ಸಾಧಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಇದನ್ನು ಅಭಿವೃದ್ಧಿ ಪಡಿಸಿದೆ. 15 ಅಡಿ ಉದ್ದದ ರಾಕೆಟ್ ಇದಾಗಿದ್ದು, ಸುಮಾರು 280 ಕೆಜಿ ತೂಕವಿದೆ. 100 ಕೆಜಿವರೆಗೆ ಸಿಡಿತಲೆಗಳನ್ನು ಹೊತ್ತೊಯಬಲ್ಲ ಶಕ್ತಿ ಈ ರಾಕೆಟ್ಗಿದೆ.
#WATCH | Trials of the Pinaka extended range rocket are going on in the Pokharan firing ranges in Rajasthan & multiple successful test firings have been carried out during these tests. Developed by DRDO, the rockets are produced by private sector firm: DRDO officials pic.twitter.com/VPZ5S9HIwj
— ANI (@ANI) August 24, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.