ಕೊಲಂಬೋ: ಶ್ರೀಲಂಕಾದಲ್ಲಿ 6.26 ಮಿಲಿಯನ್ ಜನರು ಆಹಾರದ ಅಭದ್ರತೆಯನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮವ ವರದಿ ಹೇಳಿದೆ.
10 ಆಹಾರದ ಅಭದ್ರತೆ ಎದುರಿಸುತ್ತಿರುವ ಕುಟುಂಬಗಳಲ್ಲಿ 3 ಕುಟುಂಬಗಳು ತೀವ್ರ ಆಹಾರದ ಅಭಾವ ಎದುರಿಸುತ್ತಿವೆ ಮತ್ತು ಒಟ್ಟು ಎರಡು ಲಕ್ಷ ಆಹಾರ ಅಸುರಕ್ಷಿತ ಕುಟುಂಬಗಳಲ್ಲಿ 65,600 ತುರ್ತು ಜೀವನೋಪಾಯ ನಿಭಾಯಿಸುವ ತಂತ್ರಗಳನ್ನು ಬಳಸುತ್ತಿವೆ ಎಂದು ವರದಿ ತಿಳಿಸಿದೆ.
ಡಿಸೆಂಬರ್ ವರೆಗೆ ಅಲ್ಲಿನ ಮೂರು ಮಿಲಿಯನ್ ಜನರಿಗೆ ತುರ್ತು ಆಹಾರ, ಪೋಷಣೆ ಮತ್ತು ಶಾಲಾ ಊಟವನ್ನು ನೀಡುವುದು ತನ್ನ ಗುರಿ ಎಂದು ವಿಶ್ವ ಆಹಾರ ಕಾರ್ಯಕ್ರಮ ಹೇಳಿದೆ.
ಮತ್ತೊಂದೆಡೆ, 1948 ರಲ್ಲಿ ಬ್ರಿಟನ್ನಿಂದ ಸ್ವಾತಂತ್ರ್ಯ ಪಡೆದ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾ ಸಂಪೂರ್ಣ ದಿವಾಳಿಯಾಗಿದೆ. ಇಂಧನ, ಆಹಾರ ಎಲ್ಲದಕ್ಕೂ ಅಲ್ಲಿ ಅಭಾವ ಸೃಷ್ಟಿಯಾಗಿದೆ.
ಇಂಧನ ಆಮದು ಮಾಡಿಕೊಳ್ಳಲು ಸಹಾಯ ಮಾಡುವಂತೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಕೇಳಿದ್ದೇನೆ ಎಂದು ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಹೇಳಿದ್ದಾರೆ. ಶ್ರೀಲಂಕಾದ ಇಂಧನ ಸಚಿವರು ಪೆಟ್ರೋಲ್ ಖಾಲಿಯಾಗುತ್ತಿದೆ ಎಂದು ಎಚ್ಚರಿಕೆ ನೀಡಿದ ನಂತರ ಈ ಬೆಳವಣಿಗೆ ನಡೆದಿದೆ.
ಮಾಧ್ಯಮ ವರದಿಗಳ ಪ್ರಕಾರ, ನೂರಾರು ಜನರು ನಿನ್ನೆ ರಾಜಧಾನಿ ಕೊಲಂಬೊದಲ್ಲಿ ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.